ಸಾರಾಂಶ
ಈಡಿಗ ನಿಗಮಕ್ಕೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡದ ಬಗ್ಗೆ ಸದನದಲ್ಲಿ ಮಾತನಾಡಿದ ಕಾಪು ಶಾಸಕ ಸುರೇಶ್ ಶೆಟ್ಟಿ ಅವರನ್ನು ಕಲಬುರಗಿಯಲ್ಲಿ ಡಾ. ಪ್ರಣವಾನಂದ ಶ್ರೀಗಳು ಅಭಿನಂದಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಾಪು
ಈಡಿಗ ನಿಗಮಕ್ಕೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡದ ಬಗ್ಗೆ ಸದನದಲ್ಲಿ ಮಾತನಾಡಿದ ಕಾಪು ಶಾಸಕ ಸುರೇಶ್ ಶೆಟ್ಟಿ ಅವರನ್ನು ಕಲಬುರಗಿಯಲ್ಲಿ ಡಾ. ಪ್ರಣವಾನಂದ ಶ್ರೀಗಳು ಅಭಿನಂದಿಸಿದ್ದಾರೆ.ಈಡಿಗ ನಿಗಮ ಸ್ಥಾಪನೆಯಾಗಿ ಮೂರು ವರ್ಷ ಸಂದರೂ ಅನುದಾನ ಬಿಡುಗಡೆಯಾಗದೆ ನಿರ್ಲಕ್ಷ್ಯ ವಹಿಸಿರುವಂಥದ್ದು ಖಂಡನೀಯ. ಈಡಿಗ ಬಿಲ್ಲವ ಸಮುದಾಯದಿಂದ ಆಯ್ಕೆಯಾದವರು ಈ ಬಗ್ಗೆ ಚಕಾರ ಎತ್ತದೆ ಮೌನವಹಿಸಿರುವುದು ಸಮಾಜಕ್ಕೆ ಮಾಡಿದ ದ್ರೋಹವಾಗಿದೆ. ಆಡಳಿತ ಮತ್ತು ವಿರೋಧ ಪಕ್ಷದಲ್ಲಿರುವ ಸಮುದಾಯದ ಶಾಸಕರಿಗೆ ಸ್ವಾಭಿಮಾನ ಇಲ್ಲದೆ ಹೋಗಿರುವುದು ಬಹಳ ದೊಡ್ಡ ದುರಂತ. ಚುನಾವಣೆ ಬಂದಾಗ ಸಮಾಜದ ಕೋಟಾ ಮತ್ತು ಓಟು ತೆಗೆದುಕೊಂಡು ಶಾಸಕರು ಮತ್ತು ಮಂತ್ರಿಗಳಾಗಿರುವವರು ಧ್ವನಿ ಎತ್ತದೆ ಇರುವುದು ಈ ಸಮಾಜಕ್ಕೆ ಮಾಡಿರುವ ಬಹಳ ದೊಡ್ಡ ಅನ್ಯಾಯ. ಶಾಸಕರಾದ ಸುರೇಶ್ ಶೆಟ್ಟಿ, ಸಮುದಾಯದ ಹಿತ ದೃಷ್ಟಿಯಿಂದ ಧ್ವನಿ ಎತ್ತಿದಾಗಲೂ ಸಮುದಾಯದಿಂದ ಆಯ್ಕೆಯಾದ ಶಾಸಕರು ತುಟಿ ಬಿಚ್ಚದಿರುವುದು ವಿಷಾದನೀಯ ಸಂಗತಿ ಎಂದು ಶ್ರೀಗಳು ಹೇಳಿದರು.ಶಾಸಕ ಸುರೇಶ್ ಶೆಟ್ಟಿ ಅವರನ್ನು ಈಡಿಗ ನಾಯಕರಾದ ಮಹಾದೇವ ಗುತ್ತೇದಾರ್, ಕುಪೇಂದ್ರ ಗುತ್ತೇದಾರ್, ರಾಜೇಶ್ ಡಿ. ಗುತ್ತೇದಾರ್, ಸುರೇಶ್ ಗುತ್ತೇದಾರ್ ಮಟ್ಟೂರ್, ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ್, ಡಾ. ರಾಜಶೇಖರ್ ಸೇಡಂಕರ್, ವೆಂಕಟೇಶ್ ಗುಂದಾನೂರ್ ಯಾದಗಿರಿ, ಸೋಮರಾಯ ಶಾಖಾಪೂರ, ಶ್ರೀನಿವಾಸ್ ಸುರಪುರ, ಶರಣಯ್ಯ ಗುತ್ತೇದಾರ್ ತಿಮ್ಮಪ್ಪ ಗಂಗಾವತಿ, ಅನೀಶ್ ಕಡೇಚೂರ್ ಹಾಗೂ ಬಿಲ್ಲವ ಸಮುದಾಯದ ಡಾ. ಸದಾನಂದ ಪೆರ್ಲ, ಪ್ರವೀಣ್ ಜತ್ತನ್, ಸಂತೋಷ್ ಪೂಜಾರಿ, ದಯಾನಂದ ಪೂಜಾರಿ, ಸುದರ್ಶನ್ ಜತ್ತನ್, ಸತ್ಯಾನಂದ ಪೂಜಾರಿ, ಕಿರಣ್ ಜತ್ತನ್ ಮತ್ತಿತರರು ಅಭಿನಂದಿಸಿದ್ದಾರೆ.