ಪ್ರಶಾಂತ ಅಡರಕಟ್ಟಿ ಸನ್ಮಾನ

| Published : Dec 16 2023, 02:01 AM IST

ಸಾರಾಂಶ

ನಗರದ ವಿಜಯ ಮಹಾಂತೇಶ್ವರ ವಿದ್ಯಾವರ್ದಕ ಸಂಘದ ವಿಜಯ ಮಹಾಂತೇಶ್ವರ ಪದವಿ ಮಹಾ ವಿದ್ಯಾಲಯದ ಪ್ರೊ.ಪ್ರಶಾಂತ ಅಡರಕಟ್ಟಿ ಇವರು ಇಂಗ್ಲೆಂಡ್‌ನಲ್ಲಿ ಸಂಶೋಧನೆ ಮಾಡಿ ಇಳಕಲ್ಲ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ವಿಜಯ ಮಹಾಂತೇಶ್ವರ ಪದವಿ ಮಹಾ ವಿದ್ಯಾಲಯದಿಂದ ಸನ್ಮಾನಿಸಲಾಯಿತು.

ಇಳಕಲ್ಲ:

ನಗರದ ವಿಜಯ ಮಹಾಂತೇಶ್ವರ ವಿದ್ಯಾವರ್ದಕ ಸಂಘದ ವಿಜಯ ಮಹಾಂತೇಶ್ವರ ಪದವಿ ಮಹಾ ವಿದ್ಯಾಲಯದ ಪ್ರೊ.ಪ್ರಶಾಂತ ಅಡರಕಟ್ಟಿ ಇವರು ಇಂಗ್ಲೆಂಡ್‌ನಲ್ಲಿ ಸಂಶೋಧನೆ ಮಾಡಿ ಇಳಕಲ್ಲ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ವಿಜಯ ಮಹಾಂತೇಶ್ವರ ಪದವಿ ಮಹಾ ವಿದ್ಯಾಲಯದಿಂದ ಸನ್ಮಾನಿಸಲಾಯಿತು. ಇಂಗ್ಲೆಂಡ್‌ ದೇಶದ ಮ್ಯಾಂಚಿಸ್ಟರ್‌ ಮೇಟ್ರೋಪಾಲಿಟಿನ್ ಯುನಿವರ್ಸಿಟಿಯಲ್ಲಿ ಸಂದರ್ಶಕ ವಿಜ್ಞಾನಿಯಾಗಿ ಕಾರ್ಯ ಮಾಡಿ ಬಂದಿದ್ದಾರೆ. ಇವರಿಗೆ ಕ್ರೇಗ್‌ಬ್ಯಾಂಕ್ಸ್‌ ಎಂಬ ವಿಜ್ಞಾನಿ ಮಾರ್ಗದರ್ಶನ ಮಾಡಿದ್ದಾರೆ. ಈ ಸತ್ಕಾರ ಸಮಾರಂಭದಲ್ಲಿ ಪ್ರಾಚಾರ್ಯ ಎಸ್.ಎಸ್.ಅವಟೆ, ಪ್ರೊ.ಕಂದಗಲ್ಲ ಇತರರು ಇದ್ದರು.