ಸಾರಾಂಶ
- ಕಸಬಾ ಗ್ರಾಮಾಂತರ, ಬೆಟ್ಟದಹಳ್ಳಿ ಕ್ಲಸ್ಟರ್ ಮಟ್ಟದ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ
ಕನ್ನಡಪ್ರಭ ವಾರ್ತೆ, ತರೀಕೆರೆಆಧುನಿಕ ಜಗತ್ತಿನಲ್ಲಿ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ ಪ್ರಾಥಮಿಕ ಹಂತ ದಲ್ಲಿಯೇ ನಮ್ಮ ನಾಡಿನ ಪಾರಂಪರಿಕ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಉಳಿಸುವ ಸದುದ್ದೇಶದಿಂದ ಪ್ರತಿಭಾ ಕಾರಂಜಿ ಬಹುಮುಖ್ಯ ವೇದಿಕೆಯಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಆರ್. ಅನಂತಪ್ಪ ಹೇಳಿದರು.ಪಟ್ಟಣದ ಗಾಳಿಹಳ್ಳಿ ಕ್ರಾಸ್‍ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಸಬಾ ಗ್ರಾಮಾಂತರ ಮತ್ತು ಬೆಟ್ಟದಹಳ್ಳಿ ಕ್ಲಸ್ಟರ್ ಮಟ್ಟದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ನಮ್ಮ ಸಂಸ್ಕೃತಿ ಪ್ರತೀಕವಾದ ರಾಮಾಯಣ, ಮಹಾಭಾರತ ಭಗವದ್ಗೀತೆಗಳಂತಹ ಪೌರಾಣಿಕದಲ್ಲಿ ಬರುವ ಪ್ರಮುಖ ಪಾತ್ರಗಳನ್ನು ಧರಿಸಿದಾಗ ಅವರಿಗೆ ಆಗುವ ಅನುಭವ ಜೀವನ ಕೊನೆಯವರೆಗೂ ಉಳಿಯುತ್ತದೆ ಎಂದರು.ತರೀಕೆರೆ ಲಯನ್ಸ್ ಕ್ಲಬ್‍ನ ಅಧ್ಯಕ್ಷ ಸಾಯಿಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿಯೇ ವೇಷ ಭೂಷಣ, ಸಂಗೀತ, ನಾಟಕ, ಮೊದಲಾದ ಕಲೆಗಳಲ್ಲಿ ತೊಡಗಿಸಿಕೊಂಡರೆ ಓದುವ ಸಮಯದಲ್ಲಿ ಏಕಾಗ್ರತೆ ಮೂಡುತ್ತದೆ. ನಮ್ಮ ದೇಶ ಸಂಸ್ಕೃತಿ ಒಂದೊಂದು ಜಿಲ್ಲೆಗೆ ತನ್ನದೇ ಆದ ವಿಶೇಷತೆ ಒಳಗೊಂಡಿದೆ. ಆ ಪ್ರತಿಭೆಗಳು ದೇಶ-ವಿದೇಶ ಗಳಲ್ಲಿ ಬೆಳಗಲಿ ಎಂದು ಆಶಿಸಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರವಿ ಮಾತನಾಡಿ 2002ರಲ್ಲಿ ಮಾಜಿ ಸಚಿವ ದಿ. ಗೋವಿಂದ ಗೌಡರು ಎನ್.ಆರ್. ಪುರದಲ್ಲಿ ನಡೆಸಿದ ಮಕ್ಕಳ ಮೇಳ ಮುಂದೆ ರಾಜ್ಯದಲ್ಲಿಯೇ ಇಂದು ಪ್ರತಿಭಾ ಕಾರಂಜಿ ಹೆಸರಿನಲ್ಲಿ ನಡೆಯುತ್ತಿದೆ. ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳಿಸಲು ಇದು ಸಹಕಾರಿ. ಸಾರ್ವಜನಿಕ ವಲಯದಲ್ಲಿ ಶಿಕ್ಷಣ ಪ್ರೇಮಿಗಳಿಂದ ಮಾತ್ರ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ ಎಂದರು.ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಎಂ.ಬಿ. ರಾಮಚಂದ್ರಪ್ಪ ಮಾತನಾಡಿ ಶಿಕ್ಷಕರು ತಮ್ಮ ಶಾಲೆಯ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸಿ ಅಂತಹವರಿಗೆ ವಿಶೇಷವಾಗಿ ಗಮನಿಸಿ ಪ್ರೋತ್ಸಾಹಿಸಬೇಕು ಎಂದರು. ನಿರ್ದೇಶಕ ಮಂಜುನಾಥ್, ಶಿಕ್ಷಕರ ಸಂಘದ ಕುಮಾರಸ್ವಾಮಿ, ಬೀರೇಗೌಡ್ರು, ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ. ನಾಗರಾಜ್ ಮಾತನಾಡಿದರು. ವಿವಿಧ ನೌಕರ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಶಾಲಾ ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಹಾಗೂ ಗಾಳಿಹಳ್ಳಿ ಕ್ರಾಸ್ ಶಾಲೆಯ ಶಿಕ್ಷಕಿಯರಾದ ಶಶಿಕಲಾ, ಪ್ರತಿಭಾ, ಸೌಭಾಗ್ಯ, ಸ್ವಾತಿ, ಅರ್ಪಿತಾ, ಅಂಗನವಾಡಿ ಶಿಕ್ಷಕಿ ಇಂದಿರಾ, ಬಿ.ಆರ್.ಸಿ. ತಾರಾ ಮಾತನಾಡಿದರು. ಶಾಲಾ ಪ್ರಭಾರಿ ಮುಖ್ಯಶಿಕ್ಷಕ ಶ್ರೀನಿವಾಸ್, ಶಿಕ್ಷಕಿ ಸಾವಿತ್ರಮ್ಮ. ಶಾಲಾ ಮಕ್ಕಳುತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 17ಕೆಟಿಆರ್.ಕೆ.2ಃ
ತರೀಕೆರೆ ಗಾಳಿಹಳ್ಳಿ ಕ್ರಾಸ್‍ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಸಬಾ ಗ್ರಾಮಾಂತರ ಮತ್ತು ಬೆಟ್ಟದಹಳ್ಳಿ ಕ್ಲಸ್ಟರ್ ಮಟ್ಟದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಉದ್ಘಾಟನೆಯನ್ನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಆರ್.ಅನಂತಪ್ಪ ನೆರವೇರಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಎಂ.ಬಿ. ರಾಮಚಂದ್ರಪ್ಪ ಮತ್ತಿತರರು ಇದ್ದರು.