ಸಾರಾಂಶ
ಪಾಂಡವಪುರ: ಶಾಲಾ ಹಂತದಲ್ಲಿ ನಡೆಯುವ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಮಕ್ಕಳಲ್ಲಿ ಇರುವ ಪ್ರತಿಭೆ ಅನಾವರಣಗೊಳಿಸುವ ಸೂಕ್ತ ವೇದಿಕೆಯಾಗಿವೆ ಎಂದು ಕನಗನಮರಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಜೆ.ರಾಮಕೃಷ್ಣ ಹೇಳಿದರು.
ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಇಲಾಖೆಯ ಸಹಯೋಗದಲ್ಲಿ ನಡೆದ ದೊಡ್ಡಬ್ಯಾಡರಹಳ್ಳಿ ಕ್ಲಸ್ಟರ್ ಹಂತದ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು.ಸಿಆರ್‌ಪಿ ಲೋಕೇಶ್ ಮಾತನಾಡಿ, ಪ್ರತಿಭೆ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಅಡಗಿದೆ. ಗುರುತಿಸುವ ಕೆಲಸವನ್ನು ಪೋಷಕರು, ಶಿಕ್ಷಕರು ಮಾಡಬೇಕು. ಮಕ್ಕಳು ಕಾರ್ಯಕ್ರಮವನ್ನು ಸದ್ಬಳಕೆ ಮಾಡಿಕೊಂಡು ಪ್ರತಿಭೆ ಅನಾವರಣಗೊಳಿಸಬೇಕು ಎಂದರು.
ಶಿಕ್ಷಕ ಯೋಗೇಶ್ ಮಾತನಾಡಿದರು. ಸ್ಪರ್ಧೆಯಲ್ಲಿ ಮಕ್ಕಳಿಂದ ನೃತ್ಯ, ಪ್ರಬಂಧ, ಚಿತ್ರಕಲೆ, ಅಭಿನಯ ಗೀತೆ, ಮಿಮಿಕ್ರಿ, ಆಶುಭಾಷಣ, ದೇಶಭಕ್ತಿ, ಭಕ್ತಿ ಗೀತೆ, ಕನ್ನಡ ಕಂಠಪಾಠ, ಪದ್ಯ ಮತ್ತು ಕವನ ವಾಚನ ಸೇರಿದಂತೆ ಹಲವು ಸ್ಪರ್ಧೆಗಳು ನಡೆದವು.ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಯೋಗನರಸಿಂಹೇಗೌಡ, ಎಸ್ ಡಿಎಂಸಿ ಅಧ್ಯಕ್ಷ ನಿಶ್ಚಿತ ಮಂಜುನಾಥ್, ಉಪಾಧ್ಯಕ್ಷ ಪ್ರತಾಪ್, ಸಿಆರ್ ಪಿ ಲೋಕೇಶ್, ಶಿಕ್ಷಕರಾದ ಶ್ರೀನಿವಾಸ್, ಮಂಜುನಾಥ್, ಜಯರಾಮು, ಬಸವರಾಜು, ಜಯರಾಮು, ಯೋಗೇಶ್, ಯಜಮಾನರಾದ ಅಪ್ಪಣ್ಣ, ಸಹ ಶಿಕ್ಷಕರಾದ ಪುರುಷೋತ್ತಮ.ಎಸ್, ಮುತ್ತವ್ವ ಮಣ್ಣೂರ, ರಶ್ಮಿ, ತೀರ್ಪುಗಾರರಾದ ಪ್ರಮೀಳಕುಮಾರಿ, ಎಸ್ ಡಿಎಂಸಿ ಸದಸ್ಯರಾದ ಜವರೇಗೌಡ, ಚಂದ್ರಶೇಖರ್, ಉಮೇಶ್, ಚಿಕ್ಕಮಾಯಿಗೌಡ, ನಾಗೇಶ್, ತಿಮ್ಮೇಗೌಡ, ನವ್ಯಶ್ರೀ, ಜ್ಯೋತಿ, ರಂಜಿತ, ಮುಖಂಡ ಪ್ರಕಾಶ್ ಸೇರಿದಂತೆ ಗ್ರಾಮದ ಮುಖಂಡರು,ಯಜಮಾನರು ಹಾಜರಿದ್ದರು.
;Resize=(128,128))
;Resize=(128,128))
;Resize=(128,128))