ಎಸ್ಡಿಎಂಸಿ ಅಧ್ಯಕ್ಷ ಕೆ.ಮಹೇಂದ್ರ ಅಧ್ಯಕ್ಷತೆ ವಹಿಸಿದ್ದರು. ಹಿಟ್ಟನಹಳ್ಳಿ ಕೊಪ್ಪಲು ಸಿಆರ್ಪಿ ವ್ಯಾಪ್ತಿಯ 15 ಶಾಲೆಗಳಿಂದ 200 ಮಕ್ಕಳು ಹಾಗೂ 30 ಮಂದಿ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಂಠಪಾಠ, ಛದ್ಮ ವೇಷ, ದೇಶಭಕ್ತಿ ಗೀತೆ, ಅಭಿನಯ ಗೀತೆ, ಕ್ಲೇ ಮಾಡಲಿಂಗ್, ಡ್ರಾಯಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಮಕ್ಕಳಲ್ಲಿನ ಸೃಜನಶೀಲತೆ, ಕಲಾತ್ಮಕ ಅಭಿವ್ಯಕ್ತಿ ಪ್ರೋತ್ಸಾಹ ನೀಡುವ ಹಿನ್ನೆಲೆ ಶಿಕ್ಷಣ ಇಲಾಖೆ ಹಮ್ಮಿಕೊಂಡಿರುವ ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ ಎಂದು ಇನ್ನರ್ ವ್ಹೀಲ್ ಸಂಸ್ಥೆ ಮುಖ್ಯಸ್ಥೆ ವಿಜಯಮ್ಮ ತಿಳಿಸಿದರು.ತಾಲೂಕಿನ ಕಿರುಗಾವಲು ಹೋಬಳಿಯ ಆಲದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಆತ್ಮವಿಶ್ವಾಸ, ಸ್ಪರ್ಧಾ ಮನೋಭಾವವನ್ನು ಪ್ರೋತ್ಸಾಹಿಸುತ್ತದೆ. ಗ್ರಾಮೀಣ ಮಕ್ಕಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತಾಗಬೇಕು ಎಂದರು.
ಎಸ್ಡಿಎಂಸಿ ಅಧ್ಯಕ್ಷ ಕೆ.ಮಹೇಂದ್ರ ಅಧ್ಯಕ್ಷತೆ ವಹಿಸಿದ್ದರು. ಹಿಟ್ಟನಹಳ್ಳಿ ಕೊಪ್ಪಲು ಸಿಆರ್ಪಿ ವ್ಯಾಪ್ತಿಯ 15 ಶಾಲೆಗಳಿಂದ 200 ಮಕ್ಕಳು ಹಾಗೂ 30 ಮಂದಿ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಂಠಪಾಠ, ಛದ್ಮ ವೇಷ, ದೇಶಭಕ್ತಿ ಗೀತೆ, ಅಭಿನಯ ಗೀತೆ, ಕ್ಲೇ ಮಾಡಲಿಂಗ್, ಡ್ರಾಯಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ಶಿಕ್ಷಣ ಸಂಯೋಜಕರಾದ ನಾಗರಾಜು, ಮುಖ್ಯ ಶಿಕ್ಷಕ ಮಹದೇವಯ್ಯ, ಸಹ ಶಿಕ್ಷಕರಾದ ಶಂಕರ್ ನಾರಾಯಣ ಮತ್ತು ಹೇಮಾ ಲತಾ, ಎಸ್ಡಿಎಂಸಿ ಉಪಾಧ್ಯಕ್ಷ ನಾಗರಾಜು, ಸದಸ್ಯರಾದ ಜೆ.ಕುಮಾರ್, ನಾಗಮಣಿ, ರಾಜೇಶ್ವರಿ, ಸುಶ್ಮಿತಾ, ಅಶ್ವಿನಿ, ಪುಷ್ಪ, ಭಾನುಮತಿ, ಸುನಿಲ್ ಕುಮಾರ್, ನಾಗರಾಜು, ಶಾರದಮ್ಮ, ಗ್ರಾಮದ ಮುಖಂಡರಾದ ಮಾದೇಗೌಡ, ವೀರೇಶ್, ಸುರೇಶ್ ನಂಜೇಗೌಡ, ಕಾಂತರಾಜು ಪಾಲ್ಗೊಂಡಿದ್ದರು.