ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಎಸ್‌ ಜೆ ಎಂ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರಾಥಮಿಕ ವಿಭಾಗದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ಸೋಮವಾರಪೇಟೆ ಕ್ಷೇತ್ರ ಸಂಪನ್ಮೂಲ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಸೋಮವಾರಪೇಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಎಸ್. ಜೆ.ಎಂ. ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರಾಥಮಿಕ ವಿಭಾಗದಲ್ಲಿ ಭಾಗವಹಿಸಿ ನಡೆದ ಸೋಮವಾರಪೇಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಎಸ್. ಜೆ.ಎಂ. ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರಾಥಮಿಕ ವಿಭಾಗದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಕಿರಿಯ ಪ್ರಾಥಮಿಕ ವಿಭಾಗದ: ಎಚ್.ಎಸ್. ನಿಹಾಲ್ ದೇಶಭಕ್ತಿ ಗೀತೆ (ಪ್ರ), ಡಿ. ಕೃತಿಕಾ ಅಭಿನಯ ಗೀತೆ (ಪ್ರ), ವಿಂದ್ಯಾ ಶ್ರೀ ರಾಮ್ ಇಂಗ್ಲೀಷ್ ಕಂಠಪಾಠ (ಪ್ರ), ಎಚ್.ಆರ್. ಚಂದನ್ ಛದ್ಮ ವೇಷ (ಪ್ರ), ಎಸ್.ಎಂ. ಪ್ರಣಮ್ ಚಿತ್ರಕಲೆ (ದ್ವಿ), ಆರ್. ದರ್ಶನ್ ಕನ್ನಡ ಕಂಠಪಾಠ (ದ್ವಿ), ಆಶಿನಿ- ಭಕ್ತಿಗೀತೆ (ದ್ವಿ), ಮಹಮದ್ ಸುಹೈಲ್- ಕಥೆ ಹೇಳುವುದು (ತೃ) ಸ್ಥಾನ ಗಳಿಸಿದರು. ಹಿರಿಯ ಪ್ರಾಥಮಿಕ ವಿಭಾಗ: ಎಚ್.ಎಸ್. ಅಹಲ್ಯ ಇಂಗ್ಲೀಷ್ ಕಂಠ ಪಾಠ (ಪ್ರ), ಎಚ್. ಎಚ್.ಎಂ. ಹೇಮಾವತಿ ಪ್ರಬಂಧ (ಪ್ರ), ಬಿ.ಬಿ. ಹಾಜಿರಾ ಕನ್ನಡ ಕಂಠಪಾಠ (ಪ್ರ) ಎಚ್.ಆರ್. ಮೋಕ್ಷಿತ ಭಕ್ತಿ ಗೀತೆ (ಪ್ರ), ಎಸ್.ಎಂ. ಪ್ರಣವಿ ಕಥೆ ಹೇಳುವುದು (ಪ್ರ), ಕೆ.ಎಲ್. ಭಾರತಿ ಅಭಿನಯ ಗೀತೆ (ಪ್ರ) ಹಾಗೂ ಆರ್. ಅರ್ಜುನ್ ಮಿಮಿಕ್ರಿಯಲ್ಲಿ (ತೃ) ಸ್ಥಾನ ಗಳಿಸಿದರು.