ಮಕ್ಕಳಲ್ಲಿನ ಸೂಪ್ತ ಪ್ರತಿಭೆ ಹೊರಹಾಕಲು ಪ್ರತಿಭಾ ಕಾರಂಜಿ ಮುಖ್ಯ ವೇದಿಕೆಯಾಗಿದೆ ಎಂದು ಬೆಳಗಾವಿ ಸಿಟಿಇ ವಿಶ್ರಾಂತ ಸಹನಿರ್ದೇಶಕ ಎಂ.ಎಂ.ಸಿಂಧೂರ ಹೇಳಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಮಕ್ಕಳಲ್ಲಿನ ಸೂಪ್ತ ಪ್ರತಿಭೆ ಹೊರಹಾಕಲು ಪ್ರತಿಭಾ ಕಾರಂಜಿ ಮುಖ್ಯ ವೇದಿಕೆಯಾಗಿದೆ ಎಂದು ಬೆಳಗಾವಿ ಸಿಟಿಇ ವಿಶ್ರಾಂತ ಸಹನಿರ್ದೇಶಕ ಎಂ.ಎಂ.ಸಿಂಧೂರ ಹೇಳಿದರು.ಅವರು ಶನಿವಾರ ಬನಹಟ್ಟಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂ.೧ ರಲ್ಲಿ ಹಮ್ಮಿಕೊಂಡ ಉರ್ದು ಸಮೂಹ ಸಂಪನ್ಮೂಲ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಬೆಳೆಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು. ಶಿಕ್ಷಕರು ತಾವು ಹೊಸದನ್ನು ಕಲಿಯುವುದರ ಮೂಲಕ ಮಕ್ಕಳಿಗೂ ಹೊಸದನ್ನು ಕಲಿಸಬೇಕು. ಓದು ಮಾತ್ರ ಜೀವನವಲ್ಲ. ಪ್ರತಿಯೊಂದು ಚಟುವಟಿಕೆಗಳು ನಮ್ಮ ಭವಿಷ್ಯಕ್ಕೆ ಸಹಾಯಕಾರಿಯಾಗಿವೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸುವಂತಾಗಬೇಕು ಎಂದರು.
ಉರ್ದು ಶಿಕ್ಷಣ ಸಂಯೋಜಕಿ ಸಮೀನಾ ಕೌಸರ ಸೌದಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಬಾಬುಲಾಲ ಬೂದಿಹಾಳ ವಹಿಸಿದ್ದರು. ಸಮಾರಂಭದಲ್ಲಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಬುಡನ್ ಜಮಾದಾರ, ಯೂನೂಸ ನಿಪ್ಪಾಣಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಹನಗಂಡಿ, ತಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅರ್ಜುನ ಕಾಖಂಡಕಿ, ಪ್ರಶಾಂತ ಹೊಸಮನಿ, ಆಯ್. ಎ. ಡಾಂಗೆ ಎಂ. ಎಚ್. ಲಾಡಖಾನ, ಬಿ. ಬಿ. ಮುಧೋಳ, ಎಲ್. ಎ. ಹಂಜಗಿ, ಇರ್ಷಾದ ಮೋಮಿನ, ಎಸ್. ಐ. ಹಿಪ್ಪರಗಿ, ಮುಖ್ಯ ಗುರುಗಳಾದ ಎ. ಎಂ. ಫನಿಬಂದ, ಬಿ. ಡಿ. ನೇಮಗೌಡ, ಎ. ಆಯ್. ಬಾಗೇವಾಡಿ, ಡಿ. ಬಿ. ಜಾಯಗೋಂಡ, ಮಲ್ಲಿಕಾರ್ಜುನ ಗಡೆನ್ನವರ ಸೇರಿದಂತೆ ಅನೇಕರು ಇದ್ದರು.