ಸಾರಾಂಶ
ಪ್ರತಿಭಾ ಕಾರಂಜಿ ಮಕ್ಕಳ ಪ್ರತಿಭೆ ಹೊರತರುವ ವೇದಿಕೆಯಾಗಿದ್ದು, ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವಂತೆ ಶಿಕ್ಷಣ ಸಂಯೋಜಕ ಎ.ಬಿ. ಕಾಮಣ್ಣವರ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಯರಗಟ್ಟಿ
ಪ್ರತಿಭಾ ಕಾರಂಜಿ ಮಕ್ಕಳ ಪ್ರತಿಭೆ ಹೊರತರುವ ವೇದಿಕೆಯಾಗಿದ್ದು, ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವಂತೆ ಶಿಕ್ಷಣ ಸಂಯೋಜಕ ಎ.ಬಿ. ಕಾಮಣ್ಣವರ ಸಲಹೆ ನೀಡಿದರು.ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಈಚೆಗೆ ನಡೆದ ಯರಗಟ್ಟಿ ಕ್ಲಸ್ಟ್‌ರ್ ಮಟ್ಟದ 2024-25ನೇ ಸಾಲಿನ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ,ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಹೊಸದಾದ ಜೀವನ ಕೌಶಲ್ಯ ಹೊಂದಲು ಇದು ವೇದಿಕೆಯಾಗಿದೆ. ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಿ ಹೊರತರಲು ಶಿಕ್ಷಕರಿಗೆ ಅವಕಾಶ ನೀಡುತ್ತದೆ ಎಂದು ಮನೋಹರ ಚೀಲದ ಅಭಿಪ್ರಾಯಪಟ್ಟರು.
ಮುಖ್ಯಶಿಕ್ಷಕ ಎ.ಎ. ಮಕ್ತುಮನವರ, ಜಿಪಂ ಮಾಜಿ ಸದಸ್ಯ ಅಜಿತಕುಮಾರ ದೇಸಾಯಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಸಹ ಕಾರ್ಯದರ್ಶಿ ಶಿವಾನಂದ ಮಿಕಲಿ, ಶಿಕ್ಷಕಿಯರಾದ ಎಂ.ಎಚ್. ಮಾಕನ್ನವರ, ಕಸ್ತೂರಿ ಚಂದರಗಿ, ಎಸ್.ಎಸ್. ಹಂಪಿಹೊಳಿ, ಎಸ್.ಎಸ್. ಹೊಸಮನಿ, ಆರ್.ಬಿ. ಅಂಗಡಿ, ಎಸ್.ವಿ. ಗಣಾಚಾರಿ, ಎಸ್.ಎ. ಪೂಜಾರಿ, ಎಂ.ಎಸ್. ಅತ್ತಾರ, ಆರ್.ಕೆ. ಹುಣಸೀಕಟ್ಟಿ, ಬಿ.ಬಿ. ನಿರ್ವಾಣಿ, ಸೌಮ್ಯ ದಾಸರಡ್ಡಿ, ನಾಗಮ್ಮ ಕುರಿ, ಜಯಶ್ರೀ ಬಡಕಪ್ಪನವರ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಸಕ್ಕುಬಾಯಿ ಕುಂಬಾರ, ಸದಸ್ಯೆಯರಾದ ದೀಪಾ ಕಂಬಾರ, ನಾಗವೇಣಿ ಬಡಿಗೇರ, ಯರಗಟ್ಟಿ ಕ್ಲಸ್ಟ್‌ರ್ ಮಟ್ಟದ ಶಾಲಾ ಶಿಕ್ಷಕ/ಶಿಕ್ಷಕಿಯರು ಉಪಸ್ಥಿತರಿದ್ದರು.