ಪ್ರತಿಭಾ ಕಾರಂಜಿ ಸೃಜನಶೀಲ ಕಲೆ ಒರೆಹಚ್ಚುವ ಅತ್ಯುತ್ತಮ ವೇದಿಕೆ

| Published : Nov 18 2024, 12:03 AM IST

ಪ್ರತಿಭಾ ಕಾರಂಜಿ ಸೃಜನಶೀಲ ಕಲೆ ಒರೆಹಚ್ಚುವ ಅತ್ಯುತ್ತಮ ವೇದಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಥಳೀಯ ಜನಪದ ನೃತ್ಯ ಮತ್ತು ಗಾಯನ, ಕ್ರೀಡೆ, ಕಲೆ, ಸಾಹಿತ್ಯ ಸೇರಿದಂತೆ ನಾಟಕಗಳಂತಹ ನಾಡಿನ ಸಂಸ್ಕೃತಿ, ಪರಂಪರೆ ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಉಳಿಸಿ, ಬೆಳೆಸಲು ಪ್ರತಿಭಾ ಕಾರಂಜಿ ಮೊದಲ ಮೆಟ್ಟಿಲಾಗಿದೆ

ಗಜೇಂದ್ರಗಡ: ವಿದ್ಯಾರ್ಥಿ ಸಮೂಹದಲ್ಲಿ ಅಡಗಿರುವ ವಿಭಿನ್ನ ಸೃಜನಶೀಲ ಕಲೆಗಳನ್ನು ಒರೆಹಚ್ಚುವ ಅತ್ಯುತ್ತಮ ವೇದಿಕೆಯೇ ಪ್ರತಿಭಾ ಕಾರಂಜಿಯಾಗಿದ್ದು, ಸೋಲು, ಗೆಲುವನ್ನು ಯೋಚಿಸದೆ ವಿದ್ಯಾರ್ಥಿಗಳು ಕಾರ್ಯಕ್ರಮದ ಭಾಗವಾಗಬೇಕು ಎಂದು ಮುಖಂಡ ಅರ್ಜುನ ರಾಠೋಡ ಹೇಳಿದರು.

ಸಮೀಪದ ಜೀಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜೂರ್‌ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ಥಳೀಯ ಜನಪದ ನೃತ್ಯ ಮತ್ತು ಗಾಯನ, ಕ್ರೀಡೆ, ಕಲೆ, ಸಾಹಿತ್ಯ ಸೇರಿದಂತೆ ನಾಟಕಗಳಂತಹ ನಾಡಿನ ಸಂಸ್ಕೃತಿ, ಪರಂಪರೆ ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಉಳಿಸಿ, ಬೆಳೆಸಲು ಪ್ರತಿಭಾ ಕಾರಂಜಿ ಮೊದಲ ಮೆಟ್ಟಿಲಾಗಿದೆ. ಈ ದೆಸೆಯಲ್ಲಿ ಶಿಕ್ಷಕರು ಹಾಗೂ ಪಾಲಕರು ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭಾ ಶಕ್ತಿ ಗುರುತಿಸುವಲ್ಲಿ ಕೈಜೋಡಿಸಬೇಕು ಎಂದ ಅವರು, ಸರ್ಕಾರವು ಮಕ್ಕಳ ಕ್ರಿಯಾಶೀಲ ಅಭಿವೃದ್ಧಿಗೆ ಪೂರಕವಾಗಿ ಶೈಕ್ಷಣಿಕ ಹಂತದಲ್ಲಿ ಸಾಕಷ್ಟು ಕಾರ್ಯಕ್ರಮ ಜಾರಿಗೆ ಮಾಡುತ್ತಾ ಬರುತ್ತಿದೆ. ವಿದ್ಯಾರ್ಥಿಗಳು ಜ್ಞಾನ ಮತ್ತು ಸಾಮಾಜಿಕ ಮೌಲ್ಯ ಬೆಳೆಸಿಕೊಳ್ಳಲು ಸಹಕಾರಿ. ಮಕ್ಕಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡೂ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಕಲೆ ಮತ್ತು ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಉತ್ತಮ ಅವಕಾಶ ಕಲ್ಪಿಸಿದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳ ಶಿಕ್ಷಣ ಹಾಗೂ ಮಕ್ಕಳಲ್ಲಿರುವ ಸಾಂಸ್ಕೃತಿಕ ಪ್ರತಿಭೆ ಒತ್ತು ನೀಡಿ ಪ್ರೋತ್ಸಾಹಿಸಬೇಕು ಎಂದರು.

ಮುಖಂಡ ಡಿ.ಜಿ. ಕಟ್ಟಿಮನಿ ಮಾತನಾಡಿ, ಗ್ರಾಮೀಣ ಪ್ರದೇಶಗಳ ಪ್ರತಿಭಾವಂತ ಮಕ್ಕಳಿಗೆ ಸರ್ಕಾರ ಪ್ರೋತ್ಸಾಹದಾಯಕ ಯೋಜನೆಗಳ ಮೂಲಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಲು ಪ್ರತಿಭಾ ಕಾರಂಜಿ ಉಪಯುಕ್ತವಾಗಿವೆ. ಹೀಗಾಗಿ ವಿದ್ಯಾರ್ಥಿಗಳು ಸಹ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಸದ್ಭಳಿಕೆಗೆ ಮುಂದಾಗಬೇಕು ಎಂದರು.

ಸಿಆರ್‌ಪಿ ಎಂ.ಯು. ಗೋಡೆಕಾರ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಸೊಗಡಿನ ಸಾಂಸ್ಕೃತಿಕ ವೈಭವ ಮತ್ತಷ್ಟು ಗಟ್ಟಿಗೊಳಿಸುವುದು ಹಾಗೂ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಮುನ್ನೆಲೆಗೆ ತರುವುದು ಪ್ರತಿಭಾ ಕಾರಂಜಿಯ ಉದ್ಧೇಶಗಳಲ್ಲಿ ಒಂದಾಗಿದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ವಿಜಯ ಆವಾರಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯಗುರು ಶರಣಪ್ಪಗೌಡ ಗೌಡರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೋಶಾಧ್ಯಕ್ಷ ಎ.ಕೆ. ಒಂಟಿ, ಮುತ್ತಣ್ಣ ಕೊಪ್ಪಳ, ದ್ಯಾಮಣ್ಣ ಮೇಟಿ, ಪ್ರಭು ಗುರಿಕಾರ, ಸಂಜೀವ ಅಡಪಟ್ಟಿ, ಲಕ್ಷ್ಮಣ ಚಂದುಕರ, ಖಾಸಿಂಸಾಬ್ ತೊಟದ, ರಾಜಾರಾಂ ಘೋರ್ಪಡೆ, ಮದಕಪ್ಪ ಕನಗೇರಿ, ಈಶಪ್ಪ ಅಂಗಡಿ, ಹನಮಂತ ಹಡಪದ, ಯಂಕಪ್ಪ ಗೊಲ್ಲರ, ಯಮನೂರ ಗುರಿಕಾರ, ಶ್ರೀಧರ ಯಂಕಂಚಿ, ಮಮತಾ ದೊಡ್ಡಮನಿ, ಶರಣಪ್ಪ ಗೊಲ್ಲರ ಸೇರಿದಂತೆ ಕ್ಲಷ್ಟರ ಮಟ್ಟದ ಶಾಲಾ ಶಿಕ್ಷಕರು ಭಾಗಹಿಸಿದ್ದರು.