ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಬಾಗಲಕೋಟೆ ತಾಲೂಕು ಘಟಕದಿಂದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಜು.28 ರಂದು ಬೆಳಿಗ್ಗೆ 10 ಗಂಟೆಗೆ ನವನಗರದ ಕಲಾಭವನ ಹಮ್ಮಿಕೊಂಡಿದ್ದೇವೆ ಎಂದು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ಬಸವರಾಜ ಶೀಲವಂತ ಹೇಳಿದರು.ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಚರಂತಿಮಠದ ಪ್ರಭು ಮಹಾಸ್ವಾಮಿಗಳು ವಹಿಸುವರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ನಿವೃತ್ತ ಕಾರ್ಯಾಧ್ಯಕ್ಷ ಎ.ಎಸ್. ಕಿರಣ ಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಶೀಲವಂತ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಅಡ್ವಕೇಟ್ ಜನರಲ್, ಹಿರಿಯ ನ್ಯಾಯವಾದಿ ಪ್ರಭುಲಿಂಗ ನಾವದಗಿ, ಸಂಸದ ರಾದ ಜಗದೀಶ ಶೆಟ್ಟರ್, ಪಿ.ಸಿ. ಗದ್ದಿಗೌಡರ, ಸಾಗರ ಖಂಡ್ರೆ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಬವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಬಣಜಿಗ ಸಮಾಜದ ಜಿಲ್ಲಾಧ್ಯಕ್ಷ ಶರಣಪ್ಪ ಗುಳೇದ, ಕಾರ್ಯದರ್ಶಿ ಮುತ್ತು ಜೋಳದ, ಗೌರವಾಧ್ಯಕ್ಷ ಮಲ್ಲಪ್ಪಣ್ಣಾ ಆರಬ್ಬಿ, ಕಾರ್ಯದರ್ಶಿ ವಿಶ್ವನಾಥ ವೈಜಾಪೂರ, ಮಹಿಳಾ ಘಟಕದ ಅಧ್ಯಕ್ಷೆ ಮೇಘಾ ಜಿಗಜಿನ್ನಿ, ಯುವ ಘಟಕದ ಅಧ್ಯಕ್ಷ ವಿನಯ ನಾವಲಗಿ ಆಗಮಿಸುವರು ಎಂದರು.
ಸ್ವಾಗತ ಸಮಿತಿ ಅಧ್ಯಕ್ಷ ರವಿ ಕುಟಮಗಿ ಮಾತನಾಡಿ, ಕಾರ್ಯಕ್ರಮದಲ್ಲಿ ಮೈಸೂರಿನ ಗ್ರಾವಿಟಿ ಸೈನ್ಸ್ ಫೌಂಡೇಶನ್ ಇವರಿಂದ ಸೈನ್ಸ್ ಎಕ್ಸಿಬಿಷನ್ ಕೂಡ ಆಯೋಜಿಸಲಾಗಿದೆ. ಎಕ್ಸಿಬಿಷನ್‌ನಲ್ಲಿ ನಿಜವಾದ ಮೆದುಳ ಮತ್ತು ಹೃದಯ ಹಾಗೂ ಇನ್ನಿತರ ಮನುಷ್ಯರ ಅಂಗಗಳನ್ನು ನೋಡಲು ಅವಕಾಶವಿರುವುದು ಮತ್ತು ಇದರ ಜೊತೆಗೆ ಸ್ಪೇಸನ ಕೆಲವು ಮಾದರಿಗಳನ್ನು ಕೂಡ ಪ್ರದರ್ಶಿಸಲಿದ್ದಾರೆ ಎಂದರು.ಈ ಎಕ್ಸಿಬಿಷನ್ ಇದು ಕೇವಲ ನಮ್ಮ ಸಮಾಜಕ್ಕೆ ಅಷ್ಟೇ ಸೀಮಿತ ವಾಗಿರುವುದಿಲ್ಲ. ಬಾಗಲಕೋಟೆ ತಾಲೂಕಿನ ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯ ಬಹುದು. ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಮಹಿಳಾ ಘಟಕದಿಂದ ಮಕ್ಕಳಿಗಾಗಿ ವಚನ ಗಾಯನ ಸ್ಪರ್ಧೆ, ಹೆಣ್ಣು ಮಕ್ಕಳಿಗೆ ಸಾಮೂಹಿಕ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಜು.27ರಂದು ಸಂಜೆ 5 ಗಂಟೆ ವಿದ್ಯಾಗಿರಿಯ ಸಾಯಿಮಂದಿರದಲ್ಲಿ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ಮಲ್ಲಪ್ಪಣ್ಣಾ ಆರಬ್ಬಿ, ಮುತ್ತು ಜೋಳದ, ವಿಶ್ವನಾಥ ವೈಜಾಪೂರ, ಮುರುಗೇಶ ಶಿವನಗುತ್ತಿ ಮತ್ತಿತರರು ಇದ್ದರು.