ಇಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

| Published : Dec 27 2024, 12:45 AM IST

ಸಾರಾಂಶ

ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣದ ಪ್ರಯುಕ್ತ ತಾಲೂಕು ದಸಂಸ (ಪ್ರೊ. ಕೃಷ್ಣಪ್ಪ ಬಣ) ತಾಲೂಕಿನಲ್ಲಿ ದಲಿತ ಚಳವಳಿಯನ್ನು ಕಟ್ಟಿದ ಹೋರಾಟಗಾರರ ಸ್ಮರಣೆ , ಹಿರಿಯ ದಲಿತ ಮುಖಂಡರಿಗೆ ಗೌರವಾರ್ಪಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಡಿ. 27ರಂದು ಹಮ್ಮಿಕೊಂಡಿದೆ ಎಂದು ಸಂಚಾಲಕ ಪಿ. ಶಂಕರ್ ತಿಳಿಸಿದರು. ಹತ್ತನೇ ತರಗತಿ, ದ್ವಿತೀಯ ಪಿಯು ಮತ್ತು ಪದವಿ ತರಗತಿಗಳಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.

ಅರಕಲಗೂಡು: ಡಾ. ಬಿ.ಆರ್. ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣದ ಪ್ರಯುಕ್ತ ತಾಲೂಕು ದಸಂಸ (ಪ್ರೊ. ಕೃಷ್ಣಪ್ಪ ಬಣ) ತಾಲೂಕಿನಲ್ಲಿ ದಲಿತ ಚಳವಳಿಯನ್ನು ಕಟ್ಟಿದ ಹೋರಾಟಗಾರರ ಸ್ಮರಣೆ , ಹಿರಿಯ ದಲಿತ ಮುಖಂಡರಿಗೆ ಗೌರವಾರ್ಪಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಡಿ. 27ರಂದು ಹಮ್ಮಿಕೊಂಡಿದೆ ಎಂದು ಸಂಚಾಲಕ ಪಿ. ಶಂಕರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿ. ದೇವರಾಜ ಅರಸು ಭವನದಲ್ಲಿ ಶುಕ್ರವಾರ ನಡೆಯುವ ಕಾರ್ಯಕ್ರಮವನ್ನು ಶಾಸಕ ಎ.ಮಂಜು ಉದ್ಘಾಟಿಸುವರು. ದಸಂಸ ರಾಜ್ಯ ಸಂಚಾಲಕ ಎಂ. ಸೋಮಶೇಖರ್, ಸಮಾಜ ಸೇವಕ ಎಂ. ಎಂ. ಸುರೇಶ್, ತಾಲೂಕು ಸಂಘಟನಾ ಸಂಚಾಲಕರಾದ ಪುಟ್ಟರಾಜ್, ಹಿರಿಯ ಮುಖಂಡ ಎಚ್.ಕೆ.ಸಂದೇಶ್ ಸೇರಿದಂತೆ ಹಲವು ಮುಖಂಡರು ಭಾಗವಹಿಸುವರು. ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ದಲಿತ ಚಳವಳಿಯನ್ನು ಹುಟ್ಟುಹಾಕಿದ ಮುಖಂಡರ ಸೇವೆಯನ್ನು ಸ್ಮರಿಸಿ ಅವರ ಕುಟುಂಬದವರನ್ನು ಗೌರವಿಸಲಾಗುವುದು. ಹತ್ತನೇ ತರಗತಿ, ದ್ವಿತೀಯ ಪಿಯು ಮತ್ತು ಪದವಿ ತರಗತಿಗಳಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ತಿಳಿಸಿದರು.

ಮುಖಂಡರಾದ ಚಂದ್ರಣ್ಣ, ರಮೇಶ್ ಮರಿಲಕ್ಕಿ, ಮಂಜು, ಲಕ್ಷ್ಮಣ್, ವೆಂಕಟಾಚಲಯ್ಯ,ನಟರಾಜ್, ಮಂಜುನಾಥ್ ಗೋಷ್ಠಿಯಲ್ಲಿದ್ದರು.