ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ವಾದ ಯಾತ್ರೆ ಹಜ್ ಯಾತ್ರೆ ಆ ಸೃಷ್ಟಿಕರ್ತ ಅಲ್ಲಾಹನ ಆದೇಶದ ಪಾಲನೆ ಮಾಡಲು ಪ್ರವಾದಿಯವರು ತೋರಿದ ಮಾರ್ಗವನ್ನು ಅನುಸರಿಸಲು ಹಜ್ ಯಾತ್ರೆ ಮುಸ್ಲಿಮರು ಕೈಗೊಳ್ಳುತ್ತಾರೆ
ಕೊಪ್ಪಳ: ಪ್ರತಿಯೊಬ್ಬ ಮನುಷ್ಯನ ಬದುಕಿನಲ್ಲಿ ಸದಾಕಾಲ ಶಾಂತಿ ನೆಮ್ಮದಿ ಸರ್ವರಲ್ಲಿ ನೆಲೆಸಲಿ, ಹಜ್ ಯಾತ್ರಿಕರು ಸೌದಿ ಅರೇಬಿಯಾದ ಪವಿತ್ರ ಮಕ್ಕ ಮದೀನ ಸ್ಥಳದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಿ ಎಂದು ಕೊಪ್ಪಳ ನಗರ ಸಭೆಯ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ಅಭಿಪ್ರಾಯ ಹೇಳಿದ್ದಾರೆ.
ಅವರು ಸೋಮವಾರ ಭಾಗ್ಯನಗರದ ಓಜಿನಹಳ್ಳಿ ರಸ್ತೆಯಲ್ಲಿ ಇರುವ ಖಾಸಗಿ ಕಲ್ಯಾಣ ಮಂಟಪ ದಲ್ಲಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ 115 ಜನ ಹಜ್ ಯಾತ್ರಿಕರು ಗಳಿಗೆ ಹಜ್ ಕಮೀಟಿ ಬೆಂಗಳೂರು ವತಿಯಿಂದ ಏರ್ಪಡಿಸಿದ ವ್ಯಾಕ್ಸಿನೇಷನ್ ಮತ್ತು ತರಬೇತಿ ಶಿಬಿರ ಸಮಾರಂಭ ದಲ್ಲಿ ಭಾಗವಹಿಸಿ ಮಾತನಾಡಿದರು.ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ವಾದ ಯಾತ್ರೆ ಹಜ್ ಯಾತ್ರೆ ಆ ಸೃಷ್ಟಿಕರ್ತ ಅಲ್ಲಾಹನ ಆದೇಶದ ಪಾಲನೆ ಮಾಡಲು ಪ್ರವಾದಿಯವರು ತೋರಿದ ಮಾರ್ಗವನ್ನು ಅನುಸರಿಸಲು ಹಜ್ ಯಾತ್ರೆ ಮುಸ್ಲಿಮರು ಕೈಗೊಳ್ಳುತ್ತಾರೆ ಯಾತ್ರಿಕರು ಸರ್ವರ ಬಾಳಿನಲ್ಲಿ ಸದಾಕಾಲ ಶಾಂತಿ ನೆಮ್ಮದಿ ನೆಲೆಸಲು ಎಲ್ಲರಿಗೆ ಜೀವನದಲ್ಲಿ ಒಳ್ಳೆಯದಾಗಲಿ ಎಂದು ಬೇಡಿಕೊಂಡು ನಮ್ಮ ಜಿಲ್ಲೆ ನಾಡಿಗಾಗಿ ಹಾಗೂ ದೇಶಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಿ ಎಂದು ಆಶಯ ವ್ಯಕ್ತಪಡಿಸಿದ ಅವರು ಹಜ್ ಯಾತ್ರಿಕರಿಗೆ ಸರ್ಕಾರ ದಿಂದ ಸಿಗಬಹುದಾದ ಸೌಕರ್ಯ ಒದಗಿಸಿಕೊಡಲು ಮತ್ತು ಪ್ರಯಾಣದ ಸಂದರ್ಭದಲ್ಲಿ ಯಾವುದೇ ತೊಂದರೆಯಾಗದಂತೆ ಅವರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲು ವ್ಯವಸ್ಥೆ ಗೊಳಿಸಿದೆ ನಮ್ಮ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವರಾದ ಜಮೀರ್ ಅಹ್ಮದ್ ಖಾನ್ ರವರ ವಿಶೇಷ ಮುತುವರ್ಜಿಯಿಂದ ಕಳೆದ ಮೂರು ವರ್ಷಗಳಿಂದ ಕೊಪ್ಪಳದಲ್ಲಿ ಇಂತಹ ವ್ಯಾಕ್ಸಿನೇಷನ್ ಮತ್ತು ತರಬೇತಿ ಶಿಬಿರ ಯಶಸ್ವಿಯಾಗಿ ಜರುಗುತ್ತಿದೆ ಇದಕ್ಕೆ ವಿವಿಧ ಸಂಘಟನೆಗಳ ಸಹಕಾರ ಕೂಡ ಇದೆ ಎಂದು ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು,
ಸಮಾರಂಭದಲ್ಲಿ ಗದುಗಿನ ಮುಫ್ತಿ ಮೌಲಾನ ಮೊಹಮ್ಮದ್ ಆರಿಫ್ ರವರು ವಿಶೇಷ ತರಬೇತಿ ನೀಡಿದರು, ಮುಫ್ತಿ ಮೊಹಮ್ಮದ್ ನಜೀರ್ ಅಹಮದ್ ಖಾದ್ರಿ ತಸ್ಕಿನಿ ರವರು ಸಾನಿಧ್ಯ ವಹಿಸಿ ಮಾತನಾಡಿದರು, ಹಾಫೀಸ್ ಸಿರಾಜುದ್ದೀನ್ ರಶಾದಿ ಮೊಮ್ಮದ್ ಆರೀಫ್ ರಶಾದಿ , ಎಂ ಲಾಯಕ್ ಅಲಿ, ಗೌಸಸಾಬ್ ಸರ್ದಾರ್, ಬಾಶು ಸಾಬ್ ಖತೀಬ್, ಅಂಜುಮನ್ ಕಮಿಟಿಯ ಅಧ್ಯಕ್ಷ ಎಂ ಡಿ ಆಸಿಫ್ ಕರ್ಕಿಹಳ್ಳಿ, ಅಲ್ತಾಫ್ ಗಂಗಾವತಿ, ಸೇರಿದಂತೆ ವೈದ್ಯರಾದ ಡಾ, ಶಫಿವುಲ್ಲಾ, ಡಾ, ಮಹೇಶ್, ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ ಅಲ್ಲದೆ ಎಂ ,ಎ ,ಮಾಜಿದ್ ಸಿದ್ದಿಕೀ ಶಾಹಿದ್ ಹುಸೇನ್ ತಹಶೀಲ್ದಾರ್, ಅಲಿ ಮುದ್ದಿನ್ ಮುನಾಫ್ ಪಟೇಲ್ ಫಕ್ರುದ್ದೀನ್ ಸಾಬ್ ನದಾಫ್ ಮುಸ್ತಫ ಕುದುರಿಮೋತಿ,ಮತ್ತಿತರರೂ ಪಾಲ್ಗೊಂಡಿದ್ದು, ಆರಂಭದಲ್ಲಿ ನಗರಸಭೆಯ ಮಾಜಿ ಸದಸ್ಯರಾದ ಸಬಿಹಾ ಪಟೇಲ್ ರವರು ಆರಂಭದಲ್ಲಿ ಕುರಾನ್ ಪಠಣ ಮಾಡಿ ಅದರ ಅನುವಾದ ತಿಳಿಸಿದರು, ಕಲೀಮುಲ್ಲಾ ಖಾನ್ ರವರು ಸ್ವಾಗತಿಸಿದರು ಉರ್ದು ಸಾಹಿತಿ ಅನ್ವರ ಹುಸೇನ್ ರವರು ಸ್ವಾಗತ ಗೀತೆ ಹಾಡಿದರು ಬದಿಯುದ್ದೀನ್ ಅಹಮದ್ ನವೀದ್ ರವರು ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.