ದೇಶ ವಿಶ್ವಗುರುವಾಗಲು ಪ್ರಾರ್ಥಿಸಿ ಗಣ ಹೋಮ

| Published : Sep 14 2024, 01:47 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಈ ದೇಶದ ಸನಾತನ ಧರ್ಮದ ನಡೆ ನುಡಿಗಳನ್ನು ಅನ್ಯ ದೇಶದವರು ಪಾಲಿಸಲು ಮುಂದಾಗುತ್ತಿದ್ದಾರೆ. ಇಂತಹ ಪವಿತ್ರ ದೇಶ ವಿಶ್ವ ಗುರು ವಾಗಬೇಕೆಂಬ ಸಂಕಲ್ಪದೊಂದಿಗೆ ಗಣ ಹೋಮ ನಡೆಸಲಾಗಿದೆ ಎಂದು ಶಿವಭವಾನಿ ಮಂದಿರದ ಅರ್ಚಕ ವೇ.ಸಂತೋಷಬಟ್ ಜೋಶಿ ಅವರು ನುಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಈ ದೇಶದ ಸನಾತನ ಧರ್ಮದ ನಡೆ ನುಡಿಗಳನ್ನು ಅನ್ಯ ದೇಶದವರು ಪಾಲಿಸಲು ಮುಂದಾಗುತ್ತಿದ್ದಾರೆ. ಇಂತಹ ಪವಿತ್ರ ದೇಶ ವಿಶ್ವ ಗುರು ವಾಗಬೇಕೆಂಬ ಸಂಕಲ್ಪದೊಂದಿಗೆ ಗಣ ಹೋಮ ನಡೆಸಲಾಗಿದೆ ಎಂದು ಶಿವಭವಾನಿ ಮಂದಿರದ ಅರ್ಚಕ ವೇ.ಸಂತೋಷಬಟ್ ಜೋಶಿ ಅವರು ನುಡಿದರು.

ಪಟ್ಟಣದ ತಿಲಕ ರಸ್ತೆಯಲ್ಲಿ ಹಿಂದೂ ಮಹಾ ಗಣಪತಿ ಮಂಡಳಿ ಪ್ರತಿಷ್ಠಾಪಿಸಿದ್ದ ಬೃಹತ್ ಗಣೇಶ ಮೂರ್ತಿ ಸಂಬಂಧ ಗಣ ಹೋಮ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು, ದೇಶದ ಜನರಿಗೆ ಬಂದಿರುವ ಸಕಲ ವಿಘ್ನಗಳನ್ನು ದೂರು ಮಾಡಲು ಮತ್ತು ಸಂಕಷ್ಟಗಳನ್ನು ದೂರಿಕರಿಸಲು ಶ್ರದ್ದಾ ಭಕ್ತಿಯೊಂದಿಗೆ ಸುಮಾರು ೩ ಗಂಟೆಕಾಲ ಗಣಹೋಮ ನೇರವೇರಿಸಲಾಗಿದೆ. ಧರ್ಮದ ಕಾರ್ಯಗಳಲ್ಲಿ ಎಲ್ಲರಿಗೂ ಸದಾ ಕಾಲ ಯಶಸ್ಸು ಸಿಗಲಿದೆ ಧರ್ಮವನ್ನು ಬಿಟ್ಟು ಯಾರೂ ಬದುಕಲು ಸಾಧ್ಯವಿಲ್ಲ. ನಮ್ಮ ದೇಶದ ಸನಾತನ ಸಂಸ್ಕೃತಿ, ಆಚಾರ, ವಿಚಾರಗಳನ್ನು ಎಲ್ಲರೂ ಮೈಗೂಡಿಸಿಕೊಂಡು ವಿಶ್ವಗುರು ಭಾರತದೆಡೆಗೆ ಸಾಗಬೇಕೆಂದರು.ವೇ.ಸಂತೋಷಬಟ್ ಜೋಶಿ ಅವರ ನೇತೃತ್ವದಲ್ಲಿ ವೇ.ಗೀರಿಶಬಟ್ ಜೋಶಿ, ವೇ.ಪ್ರತೀಕ ಬಟ್ ಜೋಶಿ, ವೇ.ಅಶೋಕಆಚಾರ್ಯ ಜೋಶಿ, ವೇ.ಯಲಗೂರಾಚಾರ್ಯ ಜೋಶಿ, ಅವರು ಗಣಹೋಮ ಜೊತೆಗೆ ಗಣೇಶ ಮಹಾ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ಪೂಜಾ ಕಾರ್ಯದಲ್ಲಿ ಗಜದಂಡಯ್ಯ ದಂಪತಿ ಹಾಗೂ ಹಿಂದೂ ಮಹಾ ಗಣಪತಿ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.