ಸಾರಾಂಶ
ನಗರದ ದಿವಟಗೇರಿ ಗಲ್ಲಿಯಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಜಿ ಮಠದಲ್ಲಿ ಉತ್ತರಾರಾಧನೆ ಶ್ರದ್ಧಾಭಕ್ತಿಪೂರ್ವಕವಾಗಿ ನೆರವೇರಿತು. ಶ್ರೀಮಠದ ಸಮಿತಿ ಹಾಗೂ ಭಕ್ತರ ಸಂಕಲ್ಪದಂತೆ ಪ್ರಹ್ಲಾದರಾಜರಿಗೆ ಬೆಳ್ಳಿ ತೊಟ್ಟಿಲನ್ನು ಭಕ್ತಿಭಾವದಿಂದ ಸಮರ್ಪಿಸಲಾಯಿತು.
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ದಿವಟಗೇರಿ ಗಲ್ಲಿಯಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಜಿ ಮಠದಲ್ಲಿ ಉತ್ತರಾರಾಧನೆ ಶ್ರದ್ಧಾಭಕ್ತಿಪೂರ್ವಕವಾಗಿ ನೆರವೇರಿತು. ಶ್ರೀಮಠದ ಸಮಿತಿ ಹಾಗೂ ಭಕ್ತರ ಸಂಕಲ್ಪದಂತೆ ಪ್ರಹ್ಲಾದರಾಜರಿಗೆ ಬೆಳ್ಳಿ ತೊಟ್ಟಿಲನ್ನು ಭಕ್ತಿಭಾವದಿಂದ ಸಮರ್ಪಿಸಲಾಯಿತು. ಉತ್ತರಾರಾಧನೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಪೂರ್ವಕವಾಗಿ ನೆರವೇರಿದವು. ಬೆಳಗ್ಗೆ ಸುಪ್ರಭಾತ, ರಥಾಂಗ ಹವನ, ಶ್ರೀಹರಿ ವಾಯುಸ್ತುತಿ ಪಠಣ, ಗುರುಸ್ತೋತ್ರ ಅಷ್ಟೋತ್ತರ, ಮಹಾಪಂಚಾಮೃತ ಅಭಿಷೇಕ ನಡೆಯಿತು. ನಂತರ ವೈಭವದಿಂದ ಕೂಡಿದ ರಥೋತ್ಸವ ನಡೆಯಿತು. ಮಧ್ಯಾಹ್ನದಿಂದ ಪಲ್ಲಕ್ಕಿ ಸೇವೆ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ಮಂತ್ರಪುಷ್ಪ, ಶ್ರೇಯ: ಪ್ರಾರ್ಥನೆ ನೆರವೇರಿತು. ಈ ಸಂದರ್ಭದಲ್ಲಿ ಶ್ರೀಮಠದ ಅಧ್ಯಕ್ಷ ಪ್ರಕಾಶ ಅಕ್ಕಲಕೋಟ, ಅರ್ಚಕ ಅಪ್ಪಣ್ಣ ಆಚಾರ್ಯರು, ಶ್ರೀನಿವಾಸ ಆಚಾರ್ಯರು, ಕೆ.ಬಿ.ಖಾಸನೀಸ, ಅನಂತ ದೇಶಪಾಂಡೆ, ಎಸ್.ಬಿ.ಜೋಶಿ, ವಾಮನರಾವ ಕುಲಕರ್ಣಿ, ವೆಂಕಟೇಶ ಗುಡಿ, ಶ್ರೀಹರಿ ಕುಲಕರ್ಣಿ, ಗೋವಿಂದ ದೇಶಪಾಂಡೆ, ಪಿ.ಬಿ.ತಾವೀಲ್ದಾರ, ಪ್ರವೀಣಾಚಾರ್ಯ ಜೋಶಿ, ಡಿ.ಪಿ.ಕುಲಕರ್ಣಿ, ವಿಜಯ ಜೋಶಿ, ರಾಕೇಶ ಕುಲಕರ್ಣಿ, ವಿಕಾಸ ಪದಕಿ ಮೊದಲಾದವರು ಪಾಲ್ಗೊಂಡಿದ್ದರು.