ಸಾರಾಂಶ
ಬೇಲೂರು ತಾಲೂಕು ಅರೇಹಳ್ಳಿಯ ಸಂತ ಯೊವಾನ್ನರ ದೇವಾಲಯದಲ್ಲಿ ಕ್ರಿಸ್ಮಸ್ ಅಂಗವಾಗಿ ಮಂಗಳವಾರ ರಾತ್ರಿ ಮಹೋತ್ಸವ ಪೂಜೆ ಜರುಗಿತು. ಆಧ್ಯಾತ್ಮಿಕ ಗುರು ಫಾ. ಮ್ಯಾಕ್ಸಿಮ್ ಪ್ರಬೋಧನೆ ನೀಡಿದರು. ಕ್ರೈಸ್ತ ಭಕ್ತಾದಿಗಳು ಕುಟುಂಬ ಸಮೇತರಾಗಿ ದೇವಾಲಯಕ್ಕೆ ಆಗಮಿಸುವುದರ ಮೂಲಕ ಮಹೋತ್ಸದವ ಪೂಜೆಯಲ್ಲಿ ಪಾಲ್ಗೊಂಡರು.
ಅರೇಹಳ್ಳಿ: ಬೇಲೂರು ತಾಲೂಕು ಅರೇಹಳ್ಳಿಯ ಸಂತ ಯೊವಾನ್ನರ ದೇವಾಲಯದಲ್ಲಿ ಕ್ರಿಸ್ಮಸ್ ಅಂಗವಾಗಿ ಮಂಗಳವಾರ ರಾತ್ರಿ ಮಹೋತ್ಸವ ಪೂಜೆ ಜರುಗಿತು. ಆಧ್ಯಾತ್ಮಿಕ ಗುರು ಫಾ. ಮ್ಯಾಕ್ಸಿಮ್ ಪ್ರಬೋಧನೆ ನೀಡಿದರು. ಕ್ರೈಸ್ತ ಭಕ್ತಾದಿಗಳು ಕುಟುಂಬ ಸಮೇತರಾಗಿ ದೇವಾಲಯಕ್ಕೆ ಆಗಮಿಸುವುದರ ಮೂಲಕ ಮಹೋತ್ಸದವ ಪೂಜೆಯಲ್ಲಿ ಪಾಲ್ಗೊಂಡರು. ಈ ವೇಳೆ ನೆರೆದಿದ್ದವರು ಪರಸ್ಪರ ಅಪ್ಪಿ, ಹಸ್ತ ಲಾಘವ ಮಾಡುವುದರೊಂದಿಗೆ ಕ್ರಿಸ್ಮಸ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಬುಧವಾರ ಬೆಳಗ್ಗೆ ಅರೇಹಳ್ಳಿ ಕ್ರೈಸ್ತ ದೇವಾಲಯದ ಧರ್ಮಗುರು ಫಾ.ಕಿರಣ್ ಮೆಲ್ವಿನ್ ವಿಶೇಷ ಪೂಜೆಯನ್ನು ನಡೆಸಿಕೊಟ್ಟರು. ಕ್ರೈಸ್ತ ಬಾಂಧವರು ಹೊಸ ಉಡುಗೆಗಳನ್ನು ಧರಿಸಿಕೊಂಡು ದೇವಾಲಯಕ್ಕೆ ಆಗಮಿಸಿ ಧಾರ್ಮಿಕ ಕಾರ‍್ಯಕ್ರಮದಲ್ಲಿ ಸಂಭ್ರಮದಿಂದ ಪಾಲ್ಗೊಂಡರು.