ಕನಕಪುರ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ನಡವಳಿಕೆ ಮತ್ತು ಸರ್ವತೋಮುಖ ಅಭಿವೃದ್ಧಿಯ ಕುರಿತು ಚರ್ಚಿಸಲು ಪೋಷಕರು ಮತ್ತು ಶಿಕ್ಷಕರನ್ನು ಒಂದು ವೇದಿಕೆಗೆ ತರುವ ಮಹತ್ವದ ಸಭೆಯ ಪೂರ್ವ ಸಮಾಲೋಚನಾ ಸಭೆಯನ್ನು ಪೂರ್ವ ಪ್ರಾಥಮಿಕ ಶಾಲಾ ವಿಭಾಗದ ಮಕ್ಕಳ ಪೋಷಕರಿಗೆ ಡಿಕೆಎಸ್ ಹಿಲ್ ವ್ಯೂ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪೋಷಕರ ಸಭೆಗೆ ಪೋಷಕರನ್ನು ವಿನೋಧಾತ್ಮಕ ಚಟುವಟಿಕೆಗಳ ಮೂಲಕ ‌ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಗೌರವಾನ್ವಿತ ಪ್ರಾಂಶುಪಾಲರಾದ ಅಂತೋಣಿ ಮೇರಿಯವರು ಸ್ವಾಗತ ಭಾಷಣ ಮಾಡಿ, ಕೆ.ಜಿ ತರಗತಿಗಳ ಶಿಕ್ಷಕಿಯರನ್ನು ಪೋಷಕರಿಗೆ ಪರಿಚಯಿಸಿದರು. ಬಳಿಕ ಪೋಷಕರ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳನ್ನು ಸ್ಥಳದಲ್ಲೇ ನೀಡಿದರು.

ಶಿಕ್ಷಕಿ ರಂಜಿತಾ ಅವರು, ಪೂರ್ವ ಪ್ರಾಥಮಿಕ ತರಗತಿ ಮಕ್ಕಳ ಬ್ರೈಟ್ ಪಠ್ಯಕ್ರಮದ ಉದ್ದೇಶ ಮತ್ತು ಶೈಲಿ, ಆಟದ ಮೂಲಕ ಕಲಿಕೆ, ಸಂತೋಷದ ಮೂಲಕ ಬೆಳವಣಿಗೆ ಆಗಿದೆ. ಮಕ್ಕಳಲ್ಲಿ ಚಿಂತನಾ ಶಕ್ತಿ ಮತ್ತು ಒಳ್ಳೆಯ ಹವ್ಯಾಸಗಳನ್ನು ಬೆಳೆಸುವುದು ಈ ಪಠ್ಯಕ್ರಮದ ವೈಶಿಷ್ಟ್ಯವಾಗಿದೆ ಎಂದು ತಿಳಿಸಿಕೊಟ್ಟರು.

ಶಿಕ್ಷಕಿಯರಾದ ರೇಖಾ ಮತ್ತು ಹರ್ಷಿತಾ ಅವರು ಬ್ರೈಟ್ ಪಠ್ಯಪುಸ್ತಕಗಳ ವಿಶೇಷತೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಶಿಕ್ಷಕಿಯರಾದ ವಿದ್ಯಾ ಮತ್ತು ಕುಸುಮ ಪೋಷಕರಿಗೆ ಕೆಲವು ಶಾಲಾ ಹಾಗೂ ತರಗತಿಯಲ್ಲಿ ಅಳವಡಿಸಿರುವ ನಿಯಮಗಳನ್ನು ತಿಳಿಸಿ ಕೊಟ್ಟರು.

ದೈಹಿಕ ಶಿಕ್ಷಣ ಶಿಕ್ಷಕ ಮಾರ್ಟಿನ್ ವಿಭಿನ್ ಕುಮಾರ್ ಅವರು, ಕ್ರೀಡೆ ಮತ್ತು ದೈಹಿಕ ಶಿಕ್ಷಣದ ಮಹತ್ವವನ್ನು ತಿಳಿಸಿಕೊಟ್ಟರು, ಶಾಲಾ ವ್ಯವಸ್ಥಾಪಕರಾದ ಕೀರ್ತಿ, ಶಿಕ್ಷಕಿ ಮನುಶ್ರೀ ಸೇರಿ ಶಾಲಾ ಶಿಕ್ಷಕರು ಹಾಗೂ ಪೋಷಕರು ಈ ವೇಳೆ ಉಪಸ್ಥಿತರಿದ್ದರು.