ಎಚ್‌ಐವಿ, ಏಡ್ಸ್‌ ನಿಯಂತ್ರಣಕ್ಕಾಗಿ ಮುಂಜಾಗ್ರತೆ ಅವಶ್ಯಕ: ಡಾ. ರೆಡ್ಡಿ

| Published : Dec 06 2024, 08:56 AM IST

ಎಚ್‌ಐವಿ, ಏಡ್ಸ್‌ ನಿಯಂತ್ರಣಕ್ಕಾಗಿ ಮುಂಜಾಗ್ರತೆ ಅವಶ್ಯಕ: ಡಾ. ರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಜಾಗ್ರತಾ ಕ್ರಮ ಕೈಗೊಂಡಾಗ ಮಾತ್ರ ಎಚ್ಐವಿ, ಏಡ್ಸ್ ರೋಗವನ್ನು ನಿಯಂತ್ರಣ ಮಾಡಬಹುದಾಗಿದೆ.

ರಾಷ್ಟ್ರೀಯ ಏಡ್ಸ್ ದಿನಾಚರಣೆಯ ಅಂಗವಾಗಿ ಜನ ಜಾಗೃತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಮುಂಜಾಗ್ರತಾ ಕ್ರಮ ಕೈಗೊಂಡಾಗ ಮಾತ್ರ ಎಚ್ಐವಿ, ಏಡ್ಸ್ ರೋಗವನ್ನು ನಿಯಂತ್ರಣ ಮಾಡಬಹುದಾಗಿದೆ ಎಂದು ತಾಲೂಕಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೆ.ಎಸ್. ರೆಡ್ಡಿ ಹೇಳಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಕುಟುಂಬ ಕಲ್ಯಾಣ ಕಾರ್ಯಕ್ರಮದ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಏಡ್ಸ್ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಜನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಏಡ್ಸ್ ರೋಗವು ವಾಸಿಯಾಗದ ಕಾಯಿಲೆಯಾಗಿದ್ದು, ಅದು ತಗುಲದಂತೆ ಮುಂಜಾಗ್ರತಾ ಕ್ರಮ ಕೈಗೊಂಡು ಸಂಬಂಧ ಬೆಳೆಸಬೇಕು. ಎಲ್ಲಾ ಪ್ರಾಣಿಗಳಂತೆ ಲೈಂಗಿಕ ಪ್ರಕ್ರಿಯೆ ಮಾನವನಲ್ಲಿಯೂ ನಡೆಯುತ್ತದೆ. ಆದರೆ ಅಪರಿಚಿತರೊಂದಿಗೆ ಸಂಬಂಧ ಬೆಳೆಸುವಾಗ ಕಡ್ಡಾಯವಾಗಿ ನಿರೋಧ ಬಳಕೆ ಮಾಡಬೇಕು.

ಏಡ್ಸ್ ರೋಗಕ್ಕೆ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಪರೀಕ್ಷೆ, ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ಭಯ ಪಡುವ ಆತಂಕವಿಲ್ಲದೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಎಲ್ಲಾ ವಿಸಿಸಿ ಸೆಂಟರ್, ಐಸಿಟಿಸಿ ಸೆಂಟರ್ ನಲ್ಲಿ ಕಾಂಡೋಮ್‌ ಇಡಲಾಗಿದೆ. ಅವುಗಳನ್ನು ಉಪಯೋಗ ಮಾಡಿಕೊಳ್ಳಬೇಕು.

ಏಡ್ಸ್ ಇದ್ದ ರೋಗಿಯೂ ಕೂಡಾ ಔಷಧಿಗಳನ್ನು ಸರಿಯಾಗಿ ಸೇವೆನೆ ಮಾಡುತ್ತಿದ್ದರೆ ಎಲ್ಲರಂತೆ ನೂರು ವರ್ಷ ಬದುಕಿ ಬಾಳಬಹುದು. ಒಬ್ಬರು ಉಪಯೋಗಿಸಿದ ಸಿರೆಂಜ್ (ಸೂಜಿ), ಹಚ್ಚೆ ಹಾಕಿಸಿಕೊಳ್ಳುವುದು ಮಾಡಬಾರದು, ಇಲ್ಲವಾದರೆ ರೋಗಕ್ಕೆ ತುತ್ತಾಗುವ ಸಂಭವ ಇದೆ ಎಂದರು.

ತಾಯಿಯಿಂದ ಮಗುವಿಗೆ ಏಡ್ಸ್ ಹರಡದಂತೆ ಗರ್ಭೀಣಿಯರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. 95 ಗರ್ಭಿಣಿಯರಲ್ಲಿ ಸೋಂಕು ಕಂಡು ಬಂದಿತ್ತು. ಅದರಲ್ಲಿ 93 ಮಹಿಳೆಯರಿಗೆ ಹೆರಿಗೆಯಾದ ಮಗುವಿನಲ್ಲಿ ಸೊಂಕು ಕಂಡು ಬಂದಿಲ್ಲ, ಅವರಿಗೆ ಸಕಾಲಕ್ಕೆ ಚಿಕಿತ್ಸೆ ನೀಡಿರುವುದರಿಂದ ತಡೆಗಟ್ಟಲು ಸಾಧ್ಯವಾಯಿತು ಎಂದರು.

ಈ ಸಂದರ್ಭ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ನಾಗರಾಜ ಹೀರಾ, ಆಸ್ಪತ್ರೆಯ ಸಿಬ್ಬಂದಿ ಬಾಲಾಜಿ ಬಳಿಗೇರ, ಡಾ. ವಿದ್ಯಾ, ಐಸಿಟಿಸಿ ಆಪ್ತ ಸಮಾಲೋಚಕಿ ವಿಜಯಲಕ್ಷ್ಮೀ, ಶಕುಂತಲಾ ಸೇರಿದಂತೆ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಇದ್ದರು. ಆಸ್ಪತ್ರೆಯ ಸಿಬ್ಬಂದಿ ಇದ್ದರು.

ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಜನ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು. ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.