ಸಾರಾಂಶ
ಮುದಗಲ್ ಸರಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ರಾಗಿ ಮಾಲ್ಟ್ ವಿತರಣಾ ಯೋಜನೆಗೆ ಬಿಇಓ ಹುಂಬಣ್ಣ ರಾಠೋಡ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಮುದಗಲ್
ರಾಜ್ಯ ಹಾಗೂ ಕೇಂದ್ರ ಸರಕಾರಗಳು ಇತ್ತೀಚಿನ ದಿನಮಾನಗಳಲ್ಲಿ ಶೈಕ್ಷಣಿಕ ಅಭಿವೃದ್ಧಿ ಹಾಗೂ ಕಲಿಕಾ ಪೂರಕ ಯೋಜನೆಗಳಿಗೆ ಆದ್ಯತೆ ಕೊಡುತ್ತಿದೆ. ಅದರಂತೆ ಈಗ ನೂತನ ಯೋಜನೆಯಾದ ಶಾಲಾ ಮಕ್ಕಳಿಗೆ ವಾರದಲ್ಲಿ ಮೂರು ದಿನ ರಾಗಿ ಮಾಲ್ಟ್ ವಿತರಣೆ ಯೋಜನೆ ಜಾರಿಗೆ ತಂದಿದ್ದು ಅದನ್ನು ಯಶಸ್ವಿಗೊಳಿಸಬೇಕೆಂದು ಲಿಂಗಸುಗೂರು ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಠೋಡ ಹೇಳಿದರು.ಸ್ಥಳೀಯ ಸರಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಜಿಪಂ ರಾಯಚೂರು, ತಾಪಂ (ಪಿಎಂ ಪೋಷಣ), ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಸತ್ಯಸಾಯಿ ಶಿಕ್ಷಣ ಸಂಸ್ಥೆ ಮುದ್ದೇನಹಳ್ಳಿ ಇವರ ಸಹಯೋಗದಲ್ಲಿ ಹಾಲಿನೊಂದಿಗೆ "ಸಾಯಿ ರಾಗಿ ಮಾಲ್ಟ್ ವಿತರಣಾ " ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರಕಾರ ಮಕ್ಕಳ ಶೈಕ್ಷಣಿಕ ಅಭಿವೃದ್ದಿಯ ಪೂರಕವಾಗಿ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಪಿಎಂ ಪೋಷಣ ಸಹಾಯಕ ನಿರ್ದೆಶಕ ನಾಗನಗೌಡ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆ ಮೇಲಿದ್ದ ಶಾಲಾ ಮುಖ್ಯ ಗುರು ಬಾಲಚಂದ್ರ ದಾಸರ, ಪ್ರಬುಲಿಂಗ ಗದ್ದಿ ಮಾತನಾಡಿದರು. ಮಲ್ಲಿಕಾರ್ಜುನ ಗೌಡರ ಸ್ವಾಗತಿಸಿದರೆ, ನಿರೂಪಣೆಯನ್ನು ಶಂಕರಗೌಡ ನೆರವೇರಿಸಿದರು. ವೇದಿಕೆ ಮೇಲೆ ಬಾಲಕರ ಸರಕಾರಿ ಪ್ರೌಢ ಶಾಲೆ ಮುಖ್ಯ ಗುರು ನೀಲಪ್ಪ ಅಚನೂರ, ಎಸ್ಡಿಎಂಸಿ ಅಧ್ಯಕ್ಷರಾದ ಸಿದ್ರಾಮಪ್ಪ ಛಲವಾದಿ, ಪಾಲಾಕ್ಷಿರಾವ್ ದೇಶಪಾಂಡೆ, ಹಿರಿಯ ಪತ್ರಕರ್ತ ರಾಘವೇಂದ್ರ ಗುಮಾಸ್ತೆ, ನಿವೃತ್ತ ಶಿಕ್ಷಕ ಮಲ್ಲಪ್ಪ ಪಾಟೀಲ, ಸಿಆರ್ಪಿ ಗಳಾದ ಡವಳೆ ಮುಂತಾದವರಿದ್ದರು.