ಕೈಗಾರಿಕೆಯಲ್ಲಿ ಸ್ಥಳೀಯರಿಗೆ ಅದ್ಯತೆ: ಶಾಸಕರ ಭರವಸೆ

| Published : Nov 04 2024, 12:17 AM IST

ಕೈಗಾರಿಕೆಯಲ್ಲಿ ಸ್ಥಳೀಯರಿಗೆ ಅದ್ಯತೆ: ಶಾಸಕರ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಲೂರು ತಾಲೂಕಿನ ನಮ್ಮ ಅಕ್ಕಪಕ್ಕ ತಮಿಳು ತೆಲಗು ರಾಜ್ಯಗಳಿದ್ದರೂ ಅವುಗಳು ತಾಲೂಕಿನ ಒಳಗೆ ಬರಲು ಬಿಡುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ಕನ್ನಡ ಸಂಘಟನೆಗಳ ಹೋರಾಟ. ಒಗಟ್ಟು ಇತರೆ ಭಾಷೆಗಳು ತಲೆ ಎತ್ತಲು ಬಿಟ್ಟಿಲ್ಲ ಎಂದು ಶಾಸಕ ಕೆ.ವಾ.ನಂಜೇಗೌಡ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಪ್ರಭವಾರ್ತೆ,ಮಾಲೂರು

ಪರ ಭಾಷಿಕರ ವಲಸೆಯಿಂದ ತಾಲೂಕಿನ ಕೈಗಾರಿಕೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗಲ್ಲ ಎಂಬ ಅತಂಕ ಬೇಡ. ಏಕೆಂದರೆ ಅಭಿವೃದ್ಧಿ ದೃಷ್ಢಿಯಿಂದ ಕೈಗಾರಿಕೆ ಸ್ಥಾಪನೆಗೆ ಸಹಕಾರ ನೀಡುತ್ತೇವೆಯೇ ಹೊರತು ಯಾವುದೇ ಕಾರಣಕ್ಕೂ ಎಷ್ಟೇ ಕೈಗಾರಿಕೆಗಳು ಬಂದರೂ ಕನ್ನಡಿಗರಿಗೆ ಮೊದಲ ಅದ್ಯತೆ ನೀಡುವ ರೀತಿಯಲ್ಲಿ ನನ್ನ ಹೋರಾಟ ಇರಲಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಅವರು ಕನ್ನಡ ಪರ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ಮೂರು ದಿನಗಳ ಕನ್ನಡ ರಾಜ್ಯೋತ್ಸವದ ಮೊದಲ ದಿನದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕ್ಷೇತ್ರದಲ್ಲಿ ಕನ್ನಡಕ್ಕೆ ಅಗ್ರಸ್ಥಾನ

ನಮ್ಮ ಅಕ್ಕಪಕ್ಕ ತಮಿಳು ತೆಲಗು ರಾಜ್ಯಗಳಿದ್ದರೂ ಅವುಗಳು ತಾಲೂಕಿನ ಒಳಗೆ ಬರಲು ಬಿಡುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ಕನ್ನಡ ಸಂಘಟನೆಗಳ ಹೋರಾಟ. ಒಗಟ್ಟು ಇತರೆ ಭಾಷೆಗಳು ತಲೆ ಎತ್ತಲು ಬಿಟ್ಟಿಲ್ಲ. ಈ ಬಗ್ಗೆ ನನಗೆ ಹೆಮ್ಮೆ ಇದೆ. ಹಿಂದೆ ಬಿಜೆಪಿ ಸರ್ಕಾರ ಇದ್ದ ಕಾರಣ ತಾಲೂಕಿನ ಒಂದೇ ಒಂದು ರಸ್ತೆಯ ಗುಳಿಯನ್ನು ಮುಚ್ಚಲು ಅವಕಾಶ ನೀಡಲಿಲ್ಲ. ಈಗ ಕಾಂಗ್ರೆಸ್‌ ಸರ್ಕಾರವಿದ್ದು, ಇತಿಹಾಸದಲ್ಲಿ ಉಳಿಯುವ ರೀತಿಯಲ್ಲಿ ಶಾಶ್ವತ ಕೆಲಸಗಳನ್ನು ಮಾಡುವುದಾಗಿ ತಿಳಿಸಿದರು.

ಈ ಬಾರಿ ಕನ್ನಡ ರಾಜ್ಯೋತ್ಸವದ ರಾಜ್ಯ ಪ್ರಶಸ್ತಿ ಪಡೆದ ಹಾಸ್ಯ ಬರಹಗಾರ ಎಂ.ಎಸ್.ನರಸಿಂಹಮೂರ್ತಿ,ಜನಪದ ಕಲಾವಿದ ಪಿಚ್ಚಳ್ಳಿ ಶ್ರೀನಿವಾಸ್‌ ಅವರನ್ನು ಅಭಿನಂದಿಸುವುದಾಗಿ ತಿಳಿಸಿದ ಶಾಸಕರು. ಇಂತಹ ಮಹನೀಯರಿಂದ ತಾಲೂಕಿನ ಹೆಸರು ವಿಶ್ವಕ್ಕೆ ಪರಿಚಯವಾಗುತ್ತಿದೆ ಎಂದರು.ರಂಂಗ

ರಂಗಮಂದಿರ ಕಟ್ಟಲು ಬೇಡಿಕೆ

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಿ.ಲಕ್ಷ್ಮಿನಾರಾಯಣ್‌ ಮಾತನಾಡಿ ಮಾಲೂರು ಕಲಾವಿದರ, ಸಾಹಿತಿಗಳ ತವರೂರು ಆಗಿದ್ದು ,ಇಲ್ಲಿ ಕನ್ನಡ ಭವನ ,ರಂಗ ಮಂದಿರವನ್ನು ನಿರ್ಮಿಸಿಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.ಪುಟ್ಟಕ್ಕನ ಮಕ್ಕಳು ಖ್ಯಾತಿಯ ಕಿರಿತೆರೆ ನಟ ಕಂಠಿ ತಮ್ಮ ಧಾರಾವಹಿಯ ಡೈಲಾಗ್‌ ಹೂಡೆದು ಸಭಿಕರನ್ನು ರಂಜಿಸಿದರು.

ಇದೇ ಸಂಧರ್ಭದಲ್ಲಿ ಚರ್ಮರೋತ ತಜ್ಞ ಡಾ.ಮಂಜುನಾಥ್‌ ಸೇರಿದಂತೆ ವಿವಿಧ ಕ್ಷೇತ್ರದ ಸಾಧರನ್ನು ಸನ್ಮಾನಿಸಲಾಯಿತು.ನಂತರ ಡಾ.ಪ್ರತಿಭಾ ಕಿರಣ್‌ ಅವರಿಂದ ಭರತನಾಟ್ಯ, ಸರಿಗಮಪ ಖ್ಯಾತಿಯ ಸುಹಾನ ಸೈಯದ್‌,ಚೆನ್ನಪ್ಪ ತಂಡದವರಿಂದ ಗಾಯನ ನೃತ್ಯ ಪ್ರದರ್ಶನಗಳಾದವು.

ಪುರಸಭೆ ಅಧ್ಯಕ್ಷೆ ಕೋಮಲ ನಾರಾಯಣ್‌ ,ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್‌ ನಯೀಂ,ಮಾಜಿ ಶಾಸಕ ಎ.ನಾಗರಾಜು ,ಕ.ಸಂ.ಒ.ಅಧ್ಯಕ್ಷ ಎಂ.ವಿ.ಹನುಮಂತಯ್ಯ ,ಸಾಹಿತಿ ರಾಮಕೃಷ್ಣಪ್ಪ ,ಬಗರ್‌ ಹುಕುಂ ಸಮಿತಿ ಅಧ್ಯಕ್ಷ ಹನುಮಂತಯ್ಯ,ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಮಧುಸೂಧನ್‌, ವಿಜಯನರಸಿಂಹ, ಕೆ.ಪಿ.ಸಿ.ಸಿ.ಸದಸ್ಯ ಅಂಜನಿ ಸೋಮಣ್ಣ, ಅಶ್ವಥ ರೆಡ್ಡಿ, ಎ.ರಾಜಪ್ಪ ಇನ್ನಿತರರು ಇದ್ದರು.