ಅಂಗವಿಲಕರು, ಗರ್ಭಿಣಿಯರ ಚುನಾವಣಾ ಕಾರ್ಯಕ್ಕೆ ನಿಯೋಜನೆ ಬೇಡ

| Published : Mar 28 2024, 12:50 AM IST

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆಗೆ ದೈಹಿಕ ಅಂಗವಿಕಲ ಶಿಕ್ಷಕರು, ಗರ್ಭಿಣಿಯರು, ನವಜಾತ ಶಿಶು ಹೊಂದಿರುವ ಶಿಕ್ಷಕಿಯರು ಹಾಗೂ ಮಾರಣಾಂತಿಕ ಕಾಯಿಲೆಯುಳ್ಳ ಶಿಕ್ಷಕರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಬಾರದೆಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಮಾಡಿದೆ.

ಚಿತ್ರದುರ್ಗ: ಮುಂಬರುವ ಲೋಕಸಭಾ ಚುನಾವಣೆಗೆ ದೈಹಿಕ ಅಂಗವಿಕಲ ಶಿಕ್ಷಕರು, ಗರ್ಭಿಣಿಯರು, ನವಜಾತ ಶಿಶು ಹೊಂದಿರುವ ಶಿಕ್ಷಕಿಯರು ಹಾಗೂ ಮಾರಣಾಂತಿಕ ಕಾಯಿಲೆಯುಳ್ಳ ಶಿಕ್ಷಕರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಬಾರದೆಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಮಾಡಿದೆ.

ಈ ಸಂಬಂಧ ಸಂಘದ ಜಿಲ್ಲಾಧ್ಯಕ್ಷ ಜಿ.ಬಿ.ಮಹಾಂತೇಶ ನೇತೃತ್ವದಲ್ಲಿ ಪದಾಧಿಕಾರಿಗಳು ಚುನಾವಣಾ ಅಧಿಕಾರಿಗೆ ಮನವಿ ಸಲ್ಲಿಸಿದ್ದು,

ಚುನಾವಣಾ ಆಯೋಗ ಮತ್ತು ಸರ್ಕಾರದ ಸೂಚನೆಯಂತೆ ಚಿತ್ರದುರ್ಗ ಜಿಲ್ಲೆ ವಿವಿಧ ತಾಲೂಕುಗಳ ವ್ಯಾಪ್ತಿಯಲ್ಲಿರುವ ತೀವ್ರತರ ಕಾಯಿಲೆಯಿಂದ ಬಳಲುವ ಶಿಕ್ಷಕರು, ದೈಹಿಕ ಅಂಗವಿಕಲತೆಯುಳ್ಳ ಶಿಕ್ಷಕರು, ಗರ್ಭಿಣಿಯರು ನವಜಾತ ಶಿಶುವುಳ್ಳ ಶಿಕ್ಷಕಿಯರನ್ನು ಜಿಲ್ಲಾ ಚುನಾವಣಾಧಿಕಾರಿಗಳು ಮುಂಬರುವ ಸಾರ್ವತ್ರಿಕ ಚುನಾವಣಾ ಕಾರ್ಯಕ್ಕೆ ನಿಯೋಜಿಸದೆ ಇವರಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಬೇಕು ಎಂದು ವಿನಂತಿಸಿದ್ದಾರೆ.

ಮನವಿ ಪತ್ರ ಸಲ್ಲಿಸುವ ವೇಳೆ ಚುನಾವಣಾ ಶಾಖೆಯ ಅಧಿಕಾರಿ ಸಂತೋಷ, ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಟಿ.ಹನುಮಂತಪ್ಪ, ಗೌರವಾಧ್ಯಕ್ಷ ಕೆ.ವೀರಣ್ಣ, ಕಾರ್ಯಾಧ್ಯಕ್ಷ ಆರ್.ಕೃಷ್ಣಪ್ಪ, ತಾಲೂಕು ಅಧ್ಯಕ್ಷ ಎಸ್.ಕೆಂಚಪ್ಪ, ಚಿತ್ರಹಳ್ಳಿ ರುದ್ರಪ್ಪ, ಶಿಕ್ಷಕರ ಸಂಘದ ಪದಾಧಿಕಾರಿಗಳು ಇದ್ದರು