ಸಾರಾಂಶ
ಕೇಂದ್ರ ಮತ್ತು ರಾಜ್ಯ ಹಾಗೂ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿನ ಆಸ್ತಿಕರ ಸೇರಿದಂತೆ ವಿವಿಧ ಮೂಲಗಳಿಂದ ದೊರೆಯುವ ಸಂಪನ್ಮೂಲಗಳನ್ನು ಸಂಗ್ರಹಿಸಿ ಮಾನ್ವಿ ಪಟ್ಟಣದಲ್ಲಿ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವುದಾಕ್ಕಾಗಿ ಒಟ್ಟು 11ಕೋಟಿ ಅಂದಾಜು ಮುಂಗಡ ಬಜೆಟ್ ಪತ್ರವನ್ನು ತಯಾರಿಸಬೇಕಾಗಿದೆ
ಮಾನ್ವಿ: ಕೇಂದ್ರ ಮತ್ತು ರಾಜ್ಯ ಹಾಗೂ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿನ ಆಸ್ತಿಕರ ಸೇರಿದಂತೆ ವಿವಿಧ ಮೂಲಗಳಿಂದ ದೊರೆಯುವ ಸಂಪನ್ಮೂಲಗಳನ್ನು ಸಂಗ್ರಹಿಸಿ ಮಾನ್ವಿ ಪಟ್ಟಣದಲ್ಲಿ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವುದಾಕ್ಕಾಗಿ ಒಟ್ಟು 11ಕೋಟಿ ಅಂದಾಜು ಮುಂಗಡ ಬಜೆಟ್ ಪತ್ರವನ್ನು ತಯಾರಿಸಬೇಕಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಗಂಗಾಧರ ತಿಳಿಸಿದರು
ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಪುರಸಭೆಯ 2024-25 ನೇ ಸಾಲಿನ ಆಯ-ವ್ಯಯ ಬಜೆಟ್ ಮುಂಗಡ ಪತ್ರದ ತಯಾರಿಕೆಗಾಗಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಮಾತನಾಡಿ, ಪ್ರಸಕ್ತ ಬಜೆಟ್ನಲ್ಲಿ ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ರಸ್ತೆ,ಚರಂಡಿ, ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಮಹಿಳೆಯರ, ವಿಶೇಷ ಚೇತನರು, ಪ.ಜಾತಿ. ಪ.ಪಂಗಡ ಸಮುದಾಯಗಳ ಕಲ್ಯಾಣಕ್ಕಾಗಿ ವಿದ್ಯಾರ್ಥಿ ವೇತನ, ಔಷಾದಿಗಳ ವಿತರಣೆ, ಆಡುಗೆ ಆನಿಲ ,ಸೇರಿದಂತೆ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಸದಸ್ಯರ ಸೂಚನೆ ಮೇರೆಗೆ ತಾಳಿಭಾಗ್ಯ ಯೋಜನೆಯನ್ನು ಪರಿಶೀಲಿಸಲಾಗುವುದು.ಪಟ್ಟಣದಲ್ಲಿ ಉದ್ಯಾನವನಗಳ ಅಭೀವೃದ್ದಿ. ಮಹಿಳಾ ಶೌಚಾಲಯ, ಚರಂಡಿ, ರಾಜಕಾಲೂವೆ ಸ್ವಚ್ಚತೆ, ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳ ದುರಸ್ತಿ ಪುಟಪಾತ್ಗಳ ನಿರ್ವಹಣೆ, ಹಾಗೂ ಪುರಸಭೆಗೆ ನಿರಂತರವಾಗಿ ಅದಾಯವನ್ನು ತರಬಲ್ಲ ಅದಾಯ ಮೂಲಗಳನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಪುರಸಭೆಯ ಮುಖ್ಯ ಸ್ಥಳಗಳಲ್ಲಿ ಬ್ಯಾನರ್ ಅಳವಡಿಸುವುದಕ್ಕೆ ಟೆಂಡರೆ ಕರೆಯುವುದು.ರಸ್ತೆ ವಿಭಾಜಕಗಳ ವಿದ್ಯುತ್ ಕಂಬಗಳಿಗೆ ಜಾಹಿರಾತು ಫಲಕಗಳನ್ನು ಅಳವಡಿಸುವುದರ ಮೂಲಕ ಅದಾಯವನ್ನು ಪಡೆಯಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕಚೇರಿ ಅಧಿಕಾರಿ, ಸಿಬ್ಬಂದಿ, ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ನಿವಾಸಿಗಳು ಇದ್ದರು.