ಬಸವಕಲ್ಯಾಣದಲ್ಲಿ ಶರಣ ವಿಜಯೋತ್ಸವ ನಾಡಹಬ್ಬಕ್ಕೆ ಸಿದ್ಧತೆ

| Published : Sep 02 2025, 01:00 AM IST

ಬಸವಕಲ್ಯಾಣದಲ್ಲಿ ಶರಣ ವಿಜಯೋತ್ಸವ ನಾಡಹಬ್ಬಕ್ಕೆ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಯಾಣ ಕ್ರಾಂತಿಯಲ್ಲಿ ಹುತಾತ್ಮ ಶರಣರ ಸ್ಮರಣೆಗಾಗಿ ಸೆ. 22ರಿಂದ ಅಕ್ಟೋಬರ್ 2ರವರೆಗೆ ಶರಣ ವಿಜಯೋತ್ಸವ ನಾಡಹಬ್ಬ ಹಾಗೂ ಲಿಂಗವಂತ ಹುತಾತ್ಮ ದಿನಾಚರಣೆಯನ್ನು ಅರ್ಥಪೂರ್ಣ ಮತ್ತು ವೈವಿಧ್ಯಮಯವಾಗಿ ಆಚರಿಸಲು ನಿರ್ಧರಿಸಲಾಗಿದೆ.

ಬಸವಕಲ್ಯಾಣ: ಕಲ್ಯಾಣ ಕ್ರಾಂತಿಯಲ್ಲಿ ಹುತಾತ್ಮ ಶರಣರ ಸ್ಮರಣೆಗಾಗಿ ಸೆ. 22ರಿಂದ ಅಕ್ಟೋಬರ್ 2ರವರೆಗೆ ಶರಣ ವಿಜಯೋತ್ಸವ ನಾಡಹಬ್ಬ ಹಾಗೂ ಲಿಂಗವಂತ ಹುತಾತ್ಮ ದಿನಾಚರಣೆಯನ್ನು ಅರ್ಥಪೂರ್ಣ ಮತ್ತು ವೈವಿಧ್ಯಮಯವಾಗಿ ಆಚರಿಸಲು ನಿರ್ಧರಿಸಲಾಗಿದೆ.

ಈ ನಿಮಿತ್ತ ಇಲ್ಲಿನ ಹರಳಯ್ಯನವರ ಗವಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಡಾ. ಗಂಗಾಂಬಿಕಾ ಅಕ್ಕ ಸಭೆಯ ಸಾನಿಧ್ಯ ವಹಿಸಿ ಮಾತನಾಡಿ,

ನಾಡಿನ ಪೂಜ್ಯರನ್ನು, ಸಾಹಿತಿಗಳನ್ನು ಆಮಂತ್ರಿಸಿ ಪ್ರತಿ ದಿನ ಅನುಭಾವ, ಇಷ್ಟಲಿಂಗ ಪೂಜೆ, ವಚನ ಸಂಗೀತ, ವಚನ ನೃತ್ಯ, ರೂಪಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ಶರಣ ವಿಜಯ ಪ್ರಶಸ್ತಿ ಪ್ರದಾನ, ಮೆರವಣಿಗೆ ನಡೆಯಲಿವೆ ಎಂದರು.

ಬಿಡಿವಿಸಿ ಉಪಾಧ್ಯಕ್ಷ ಡಾ. ಜಿಎಸ್‌ ಬುರಾಳೆ ಮಾತನಾಡಿ, ಕಾರ್ಯಕ್ರಮದ ಯಶಸ್ವಿಗಾಗಿ ತನು, ಮನ, ಧನದಿಂದ ಸಹಕರಿಸುವುದಾಗಿ ಹೇಳಿದರು.

ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ರವಿಂದ್ರ ಕೊಳಕೂರ ಮಾತನಾಡಿ, ಕಾರ್ಯಕ್ರಮಕ್ಕೆ ಯುವ ಸಾಧಕರನ್ನು ಕರೆಯಿಸಿ ಯುವಕರನ್ನು ಕಾರ್ಯಕ್ರಮದತ್ತ ಸೆಳೆಯಬೇಕು ಬಸವ ತತ್ವಕ್ಕಾಗಿ ದುಡಿದಿರುವ ವ್ಯಕ್ತಿಗಳಿಗೆ ಶರಣ ವಿಜಯ ಪ್ರಶಸ್ತಿ ನೀಡಬೇಕು ಎಂದರು.

ಹುಲಸೂರು ತಾಲೂಕು ಬಸವ ಕೇಂದ್ರದ ಅಧ್ಯಕ್ಷ ಆಕಾಶ ಖಂಡಾಳೆ ಮಾತನಾಡಿ, ಯುವಕರಿಗಾಗಿ ವಿಶಿಷ್ಠ ಗೋಷ್ಠಿ ಆಯೋಜಿಸಿ ಬಸವಣ್ಣನವರ ಸಂಪೂರ್ಣ ಇತಿಹಾಸ ತಿಳಿಸಬೇಕೆಂದರು. ಸಾಹಿತಿ ಸಂಗಮೇಶ ಜವಾದಿ, ಆರೋಗ್ಯದ ಕುರಿತು ಗೋಷ್ಠೀಗಳನ್ನು ಆಯೋಜಿಸಲು ಸಲಹೆ ನೀಡಿದರು.

ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗುರುನಾಥ ಗಡ್ಡೆ ಮಾತನಾಡಿ, ಮಕ್ಕಳಿಗಾಗಿ ವಚನ ಕಂಠ ಪಾಠ ಸ್ಫರ್ಧೆ ಆಯೋಜಿಸಲು ಸಲಹೆ ನೀಡಿದರು.

ಕಾರ್ಯಕ್ರಮಕ್ಕಾಗಿ ಆಮಂತ್ರಿಸಲು ಅತಿಥಿಗಳು, ಸ್ವಾಮಿಗಳು, ಆಯ್ದುಕೊಳ್ಳಬಹುದಾದ ವಿಚಾರಗಳ ಬಗ್ಗೆ ಸುಧೀರ್ಘ ಚರ್ಚಿಸಲಾಯಿತು.

ಸಭೆಯಲ್ಲಿ ಸತ್ಯಕ್ಕತಾಯಿ, ಬಿಡಿಪಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಚನ್ನಪ್ಪ ಪರ್ತಾಪೂರೆ, ಅನೀಲಕುಮಾರ ರಗಟೆ, ಅಶೋಕ ನಾಗರಾಳೆ, ರೇವಣಪ್ಪ ರಾಯವಾಡೆ, ಜಗನ್ನಾಥ ಖೂಬಾ, ಶಿವರಾಜ ಶಾಶೆಟ್ಟಿ, ಬಸವರಾಜ ಬಾಲಿಕಿಲೆ, ಹರಳಯ್ಯ ಸಮಾಜದ ಅಧ್ಯಕ್ಷ ಶಿವಾಜಿ ಕಾಂಬಳೆ, ಜಯಪ್ರಕಾಶ ಸದಾನಂದೆ, ಮಹಾದೇವ ಮಹಾಜನ, ಶಿವರಾಜ ನೀಲಕಂಠೆ, ಲಕ್ಷ್ಮೀಬಾಯಿ ಪಾಟೀಲ್‌, ಜ್ಯೋತಿ ಶಿವಣಕರ್‌, ಶಿವಕುಮಾರ ಕುದ್ರೆ, ಲಕ್ಷ್ಮೀಕಾಂತ ಜ್ಯಾಂತೆ ಮತ್ತಿತರರು ಇದ್ದರು.

ಸ್ಪರ್ಧೆಗಳಲ್ಲಿ ವಿಜೇತರಿಗೆ ಆಕರ್ಷಕ ಬಹುಮಾನ

ಹುತಾತ್ಮ ದಿನಾಚರಣೆ ಹಾಗೂ ಶರಣ ವಿಜಯೋತ್ಸವ ಅಂಗವಾಗಿ ವಚನ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆ ಕಲ್ಯಾಣ ಕ್ರಾಂತಿ ಕುರಿತು ತಾಲೂಕು ಮಟ್ಟದ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ವಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಗೆ 5000 ರು. ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ 3000 ರು. ಕಲ್ಯಾಣ ಕ್ರಾಂತಿ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲಾ ಮಕ್ಕಳಿಗೆ ಪ್ರಥಮ ಬಹುಮಾನ 2000 ರು.. ಎರಡನೇ ಬಹುಮಾನ 1000 ರು., ಪ್ರಾಥಮಿಕ ಶಾಲಾ ಮಕ್ಕಳಿಗಾಗಿ 1-7ನೇ ವರ್ಗದವರಿಗೆ ವಚನ ಸ್ಪರ್ಧೆ ವಿಜೇತರಿಗೆ 3000 ರು., ದ್ವಿತೀಯ ಬಹುಮಾನ 2000 ರು., ಭಾಷಾ ಸ್ಪರ್ಧೆ ಕಲ್ಯಾಣ ಕ್ರಾಂತಿ ಕುರಿತು ಪ್ರಾಥಮಿಕ ಶಾಲಾ ಮಕ್ಕಳಿಗೆ ಪ್ರಥಮ ಬಹುಮಾನ 2000 ರು. ಎರಡನೇ ಬಹುಮಾನ 1000 ರು. ನೀಡಲಾಗುವುದು ಎಂದು ಹರಳಯ್ಯ ಗವಿಯ ಡಾ. ಗಂಗಾಂಬಿಕೆ ಅಕ್ಕ ತಿಳಿಸಿದ್ದಾರೆ. ಆಯಾ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಸೆ. 15ರಂದು ಸ್ಪರ್ಧೆ ನಡೆಯುತ್ತವೆ. ಅಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಕ್ಕೆ ಆಯ್ಕೆಯಾದವರಿಗಾಗಿ ತಾಲೂಕು ಮಟ್ಟದಲ್ಲಿ ಸೆ. 18ರಂದು ಹರಳಯ್ಯ ಗವಿಯಲ್ಲಿ ಸ್ಪರ್ಧೆ ನಡೆಯುತ್ತವೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಆಯಾ ಶಾಲೆಯ ಮುಖ್ಯ ಗುರುಗಳಿಗೆ ಹಾಗೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಂಪರ್ಕಿಸಬಹುದು ಎಂದು ಆಯ್ಕೆ ಸಮಿತಿಯ ಅಧ್ಯಕ್ಷರಾದ ಶ್ರೀಶೈಲ ಹುಡೇದ ಅವರನ್ನು ಸಂಪರ್ಕಿಸಲು ಕೋರಲಾಗಿದೆ.