ಸಾರಾಂಶ
ರಾಮನಗರ: ಗ್ರಾಮ ಪಂಚಾಯಿತಿಯಿಂದ ಪುರಸಭೆಯಾಗಿ ಅಸ್ತಿತ್ವಕ್ಕೆ ಬಂದ 10 ವರ್ಷಗಳಲ್ಲಿಯೇ ಬಿಡದಿಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸುವ ಸಿದ್ಧತೆಗಳು ಭರದಿಂದ ಸಾಗಿದೆ.
ಈವರೆಗೆ ಜಿಲ್ಲಾ ಕೇಂದ್ರ ಒಳಗೊಂಡ ರಾಮನಗರ, ಚನ್ನಪಟ್ಟಣ , ಕನಕಪುರದಲ್ಲಿ ನಗರಸಭೆ ಹಾಗೂ ಮಾಗಡಿ ಪುರಸಭೆ , ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಅಸ್ತಿತ್ವದಲ್ಲಿತ್ತು. ರಾಮನಗರ ನಗರಸಭೆ ಗ್ರೇಡ್ -2 ರಿಂದ ಗ್ರೇಡ್ 1ಕ್ಕೆ ಉನ್ನತೀಕರಿಸುವ ಪ್ರಯತ್ನ ನಡೆದಿರುವ ಬೆನ್ನಲ್ಲೆ ಬಿಡದಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಯತ್ನ ನಡೆದಿದೆ.ಈ ಹಿಂದೆ ಬಿಡದಿ ಹೋಬಳಿ ಕೇಂದ್ರವಾಗಿದ್ದು, ಗ್ರಾಮ ಪಂಚಾಯಿತಿ ಆಡಳಿತ ನಡೆಸುತ್ತಿತ್ತು. 2011 ರ ಜನಗಣತಿ ಪ್ರಕಾರ 29,825 ಜನಸಂಖ್ಯೆಯ ಆಧಾರದ ಮೇಲೆ ರಾಜ್ಯ ಸರ್ಕಾರವು ತನ್ನ ಅಧಿಸೂಚನೆಯಲ್ಲಿ (ನಂ. UDD/29/MLR, 2015 ದಿನಾಂಕ: 05.08.2015) ಬಿಡದಿ ಗ್ರಾಮ ಪಂಚಾಯಿತಿಯನ್ನು ಚಿಕ್ಕ ನಗರ ಪ್ರದೇಶಕ್ಕೆ ಅಂದರೆ ಟೌನ್ ಮುನ್ಸಿಪಲ್ ಕೌನ್ಸಿಲ್ ಆಗಿ ಮೇಲ್ದರ್ಜೆಗೇರಿಸಿತು.
ಬಿಡದಿ ಪುರಸಭೆಯಾಗಿ 10 ವರ್ಷ ಪೂರೈಸುತ್ತಿದ್ದಂತೆ ಅದನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ಸಿದ್ಧತೆಗಳು ನಡೆದಿವೆ. ಇದಕ್ಕಾಗಿ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳು ಹಾಗೂ ಬನ್ನಿಕುಪ್ಪೆ (ಬಿ) ಗ್ರಾಮ ಪಂಚಾಯಿತಿಯ ವಾಜರಹಳ್ಳಿ ಮತ್ತು ಜಡೇನಹಳ್ಳಿಯನ್ನು ಸೇರಿಸಿಕೊಳ್ಳಲು ಉದ್ದೇಶಿಸಲಾಗಿದೆ.ಮಂಚನಾಯಕನಹಳ್ಳಿ ಮತ್ತು ಬನ್ನಿಕುಪ್ಪೆ (ಬಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಒಳಗೊಂಡಂತೆ ನಗರಸಭೆಯಾಗಿ ಮೇಲ್ದರ್ಜೆಗೇರುವುದರಿಂದ ಜನಸಂಖ್ಯೆಯು 50 ಸಾವಿರ ದಾಟುವ ಸಾಧ್ಯತೆ ಇದೆ. 20 ರಿಂದ 40 ಸಾವಿರ ಜನಸಂಖ್ಯೆವರೆಗೆ ಮಾತ್ರ 23 ವಾರ್ಡ್ ಗಳಿರುತ್ತವೆ. 40 ರಿಂದ 50 ಸಾವಿರ ಜನಸಂಖ್ಯೆಗೆ 27 ವಾರ್ಡ್ ಗಳು ಹಾಗೂ 50 ಸಾವಿರದಿಂದ 1 ಲಕ್ಷ ಜನಸಂಖ್ಯೆಗೆ 31 ವಾರ್ಡುಗಳು ಇರಬೇಕು. ಹೀಗಾಗಿ ಬಿಡದಿ ನಗರಸಭೆಯಾಗಿ ಮೇಲ್ದರ್ಜೆಗೇರಿದಲ್ಲಿ 31 ರಿಂದ 33 ವಾರ್ಡ್ ಗಳು ಅಸ್ತಿತ್ವಕ್ಕೆ ಬರಲಿವೆ.
ಆದರೆ, ಎರಡು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಪ್ರಬಲ ರಾಜಕೀಯ ನಾಯಕರು ಪಂಚಾಯಿತಿ ಗ್ರಾಮಗಳನ್ನು ಬಿಡದಿ ನಗರಸಭೆಯೊಳಗೆ ವಿಲೀನಗೊಳಿಸಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಗ್ರಾಪಂ ಅಧಿಕಾರದ ಅವಧಿ ಪೂರ್ಣಗೊಂಡ ಬಳಿಕ ನಗರಸಭೆ ರೂಪಿಸುವ ಪ್ರಕ್ರಿಯೆ ಚುರುಕು ಪಡೆಯಲಿದೆ.ಪುರಸಭೆ ಸೇರಿದ್ದ ಗ್ರಾಮಗಳು :
ಬಿಡದಿ, ಬನ್ನಿಕುಪ್ಪೆ, ಕೆಂಚನಕುಪ್ಪೆ ಹಾಗೂ ಇಟ್ಟಮಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಟು 33 ಗ್ರಾಮಗಳನ್ನು ಸೇರಿಸಿ ಬಿಡದಿ ಪುರಸಭೆ ರಚಿಸುವ ಸಂಬಂಧ 2015ರ ಏಪ್ರಿಲ್ 30ರಂದು ರಾಜ್ಯ ಸರ್ಕಾರ ಕರ್ನಾಟಕ ಪೌರಸಭೆಗಳ ಕಾಯಿದೆ 1964ರ ಅನ್ವಯ ಅಧಿಕೃತ ಆದೇಶ ಹೊರಡಿಸಿತ್ತು.ಆನಂತರ ಜಿಲ್ಲಾಡಳಿತ 2011ರ ಜನಗಣತಿಯನ್ನು ಆಧರಿಸಿ ಬಿಡದಿ ಪುರಸಭೆಗೆ 23 ವಾರ್ಡ್ ಗಳನ್ನಾಗಿ ಕ್ಷೇತ್ರ ವಿಂಗಡಿಸಿ, ಆಯಾ ವಾರ್ಡ್ ಗಳ ಗಡಿಯನ್ನು ಸಹ ಗುರುತಿಸಿ ಅಧಿಸೂಚನೆ ಹೊರಡಿಸಿತ್ತು. ಪುರಸಭೆಯಾಗಿ ಅಸ್ತಿತ್ವಕ್ಕೆ ಬಂದ ಆರು ತಿಂಗಳೊಳಗೆ ಚುನಾಯಿತ ಸದಸ್ಯರ ಸಮಿತಿ ಕೂಡ ರಚನೆಯಾಯಿತು. ಈವರೆಗೆ ಎರಡು ಬಾರಿ ಮಾತ್ರ ಪುರಸಭೆ ಚುನಾವಣೆ ನಡೆದಿದೆ.
ಬಾಕ್ಸ್ ...............ಸರ್ಕಾರದ ಮೇಲೆ ಜನಪ್ರತಿನಿಧಿಗಳ ಒತ್ತಡ :
ಬೆಂಗಳೂರಿಗೆ ಹೊಂದಿಕೊಂಡಂತಿರುವ ಬಿಡದಿ ರಾಜ್ಯದ ಪ್ರಮುಖ ಕೈಗಾರಿಕೆಗಳ ತಾಣವಾಗಿದೆ. ಇಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್, ಭಾಷ್, ಕೊಕೊ ಕೋಲಾ, ಇನ್ನೋವೇಟೀವ್ ಫಿಲ್ಮಂ ಸಿಟಿ ಸೇರಿ ದಂತೆ ಹಲವು ಬೃಹತ್ ಉದ್ದಿಮೆಗಳು ತಲೆ ಎತ್ತಿವೆ. ಬಿಡದಿಯ ಸುತ್ತಮುತ್ತ ಹಲವಾರು ಖಾಸಗಿ ಬಿಲ್ಡರ್‌ಗಳು ಲೇಔಟ್‌ಗಳನ್ನು ನಿರ್ಮಿ ಸಿದ್ದಾರೆ. ಇದರಿಂದಾಗಿ ಬೆಂಗಳೂರಿನ ಜನದಟ್ಟ ಣೆಯ ಒತ್ತಡಕ್ಕೆ, ಬಿಡದಿಯು ಪರ್ಯಾಯ ವಸತಿ ನೆಲೆಯಾಗಿ ಮಾರ್ಪಟ್ಟಿದೆ.ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಬಿಡದಿ ಟೌನ್ ಶಿಪ್ ಯೋಜನೆ ಜಾರಿಯಾಗುತ್ತಿದ್ದು, ಇದು ಆ ಭಾಗದ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿದೆ. ಹೀಗಾಗಿ ಬಿಡದಿಯನ್ನು ಪುರಸಭೆಯಿಂದ ನಗರಸಭೆಯನ್ನಾಗಿ ಮಾಡುವಂತೆ ಬಾಕ್ಸ್
ಬಾಕ್ಸ್...........ಗ್ರಾಪಂ ಚುನಾವಣೆ ಅನುಮಾನ:
ಇನ್ನೊಂದು ತಿಂಗಳಲ್ಲಿ ಗ್ರಾಮ ಪಂಚಾಯಿತಿಗಳ ಅವಧಿ ಪೂರ್ಣಗೊಳ್ಳಲಿದೆ. ಡಿಸೆಂಬರ್ ಅಥವಾ 2026ರ ಜನವರಿ ವೇಳೆಗೆ ಸಾರ್ವತ್ರಿಕ ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆಯುವ ನಿರೀಕ್ಷೆ ಇದೆ. ಈ ಹಿನ್ನೆಲೆ ನೂರಾರು ಮಂದಿ ಗ್ರಾ.ಪಂಚಾಯಿತಿ ಚುನಾವಣೆ ಆಕಾಂಕ್ಷಿಗಳು ಈಗಿನಿಂದಲೆ ಮತದಾರರ ಮನ ಗೆಲ್ಲಲು ಕಸರತ್ತು ಆರಂಭಿಸಿದ್ದಾರೆ. ಸಂಪನ್ಮೂನ ಕ್ರೋಢೀಕರಣ ಮಾಡುತ್ತಿದ್ದಾರೆ. ಆದರೆ ಇದೀಗ ನಗರಸಭೆ ನೂತನ ಪ್ರಸ್ತಾವನೆ ಆಕಾಂಕ್ಷಿಗಳನ್ನು ಚಿಂತೆಗೀಡು ಮಾಡಿದೆ. ನಮ್ಮ ವ್ಯಾಪ್ತಿಯಲ್ಲಿ ಚುನಾವಣೆ ನಡೆಯುತ್ತದೆಯೋ, ಇಲ್ಲವೋ ಎಂಬ ಗೊಂದಲದಲ್ಲಿದ್ದಾರೆ. ಪ್ರಸ್ತಾಪನೆ ಸರ್ಕಾರದ ಹಂತಕ್ಕೆ ತಲುಪಿದ್ದಲ್ಲಿ, ಈ ವ್ಯಾಪ್ತಿಯಲ್ಲಿ ಚುನಾವಣೆ ನಡೆಯುವುದು ಬಹುತೇಕ ಅನುಮಾನ.ಕೋಟ್ .............
ರಾಜಧಾನಿ ಬೆಂಗಳೂರಿಗೆ ಸನಿಹದಲ್ಲಿರುವ ಬಿಡದಿ ಪಟ್ಟಣ ಶರವೇಗದಲ್ಲಿ ಬೆಳೆಯುತ್ತಿದೆ. ಅಭಿವೃದ್ಧಿ ದೃಷ್ಟಿಯಿಂದ ಬಿಡದಿಯನ್ನು ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರುವುದು ಅತ್ಯಗತ್ಯವಿದೆ. ಇದರಿಂದ ಪಟ್ಟಣದ ಸಮಗ್ರ ಅಭಿವೃದ್ಧಿ ಮತ್ತು ಹೆಚ್ಚಿನ ಅನುದಾನವೂ ಹರಿದು ಬರಲಿದೆ.- ಸಿ.ಉಮೇಶ್, ವಿಪಕ್ಷ ನಾಯಕರು, ಬಿಡದಿ ಪುರಸಭೆ
13ಕೆಆರ್ ಎಂಎನ್ 7,8.ಜೆಪಿಜಿ7.ಬಿಡದಿ ಪುರಸಭೆ ಕಚೇರಿ
8.ಸಿ.ಉಮೇಶ್ , ವಿಪಕ್ಷ ನಾಯಕರು, ಬಿಡದಿ ಪುರಸಭೆ.