ಈಗಾಗಲೇ ಸರ್ಕಾರದಿಂದ ಪಟ್ಟಿ ಕೇಳಿದ್ದು, ಯಾವ ಇಲಾಖೆಗೆ ಎಷ್ಟು ಹಣ ಬೇಕು ಅದನ್ನು ಕರಡು ಪಟ್ಟಿ ಮೂಲಕ ತಯಾರಿಸಿ ಮುಂದಿನ ಬಜೆಟ್‌ನಲ್ಲಿ ಅನುದಾನಗಳ ಪಡೆದುಕೊಳ್ಳಲು ಹಣಕಾಸು ಯೋಜನೆ ಇಲಾಖೆಗೆ ಈ ಕರಡು ಪಟ್ಟಿಯನ್ನು ಮುಂಜಾಗ್ರತವಾಗಿ ನೀಡಬೇಕಿದೆ. ಆಯಾ ಇಲಾಖೆಯಿಂದ ಪ್ರತ್ಯೇಕವಾಗಿ ಅಂದಾಜು ಪಟ್ಟಿಯನ್ನು ನೀಡಬೇಕು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
2026-27ನೇ ಸಾಲಿನ ತಾಲೂಕು ಯೋಜನಾ ಮತ್ತು ಅಭಿವೃದ್ಧಿ ಅಂದಾಜು ಪಟ್ಟಿ ಮಾಡಿ ತ್ವರಿತವಾಗಿ ನೀಡಬೇಕು ಎಂದು ತಾಲೂಕು ಯೋಜನಾ ಅಭಿವೃದ್ಧಿ ಸಮಿತಿ ಸದಸ್ಯರಿಗೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೂಚಿಸಿದರು.ಪಟ್ಟಣ ಪುರಸಭೆ ಕಚೇರಿ ಸಭಾಂಗಣದಲ್ಲಿ ತಾಲೂಕು ಯೋಜನಾ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ರಮೇಶ್ ಬಂಡಿಸಿದ್ದೇಗೌಡ ನೇತೃತ್ವದಲ್ಲಿ ನಡೆದ ತಾಲೂಕಿನ ಗ್ರಾಮಸಭೆ ಹಾಗೂ ಪಟ್ಟಣ ಪುರಸಭೆಯ ವಾರ್ಷಿಕ ಅಂದಾಜು 288 ಕೋಟಿ ರು. ವೆಚ್ಚದ ವಾರ್ಷಿಕ ಕರಡು ಯೋಜನೆ ಅಂದಾಜು ವೆಚ್ಚ ಕುರಿತು ಅನುಮೋದನೆ ಪಡೆಯಲು ಸಭೆ ನಡೆಯಿತು.ತಾಪಂ, ಪ್ರತಿ ಗ್ರಾಪಂ ವ್ಯಾಪ್ತಿ ಅಭಿವೃದ್ಧಿಗೆ ಅಗತ್ಯವಾಗಿ ಬೇಕಿರುವ ಮಾಹಿತಿ ಪಟ್ಟಿಯನ್ನು ಕ್ರೂಢೀಕರಿಸಿ ಕ್ರಿಯಾ ಯೋಜನೆಗಳ ತಯಾರಿಸಲು ಶಾಸಕರು ಸೂಚಿಸಿದರು. ಇದರ ಜೊತೆ ಪಟ್ಟಣ ಪುರಸಭೆಗೂ ಕ್ರಿಯಾಯೋಜನೆ ಅನ್ವಯವಾಗಲು ಅಭಿವೃದ್ಧಿಗೆ ಬೇಕಿರುವ ಅನುದಾನದ ಕರಡು ಪಟ್ಟಿ ತಯಾರಿಸಲು ಸೂಚಿಸಲಾಯಿತು.
2026-27ನೇ ಸಾಲಿಗೆ ಬರುವ ರಾಜ್ಯ ಬಜೆಟ್‌ಗೆ ಪ್ರತಿ ತಾಲೂಕಿನನಿಂದ ಎಲ್ಲಾ ಇಲಾಖಾವಾರು ಅಭಿವೃದ್ಧಿಗೆ ವ್ಯತ್ಯಾಸವಾಗದಂತೆ ಅಗತ್ಯವಾಗಿ ಬೇಕಾಗಿರುವ ಕರಡು ಪಟ್ಟಿ ತಯಾರಿಸಿ ತಾಲೂಕು ಪಂಚಾಯ್ತಿಗೆ ತ್ವರಿತವಾಗಿ ನೀಡಬೇಕು ಎಂದರು.ಈಗಾಗಲೇ ಸರ್ಕಾರದಿಂದ ಪಟ್ಟಿ ಕೇಳಿದ್ದು, ಯಾವ ಇಲಾಖೆಗೆ ಎಷ್ಟು ಹಣ ಬೇಕು ಅದನ್ನು ಕರಡು ಪಟ್ಟಿ ಮೂಲಕ ತಯಾರಿಸಿ ಮುಂದಿನ ಬಜೆಟ್‌ನಲ್ಲಿ ಅನುದಾನಗಳ ಪಡೆದುಕೊಳ್ಳಲು ಹಣಕಾಸು ಯೋಜನೆ ಇಲಾಖೆಗೆ ಈ ಕರಡು ಪಟ್ಟಿಯನ್ನು ಮುಂಜಾಗ್ರತವಾಗಿ ನೀಡಬೇಕಿದೆ. ಆಯಾ ಇಲಾಖೆಯಿಂದ ಪ್ರತ್ಯೇಕವಾಗಿ ಅಂದಾಜು ಪಟ್ಟಿಯನ್ನು ನೀಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಮಂಡ್ಯ ಜಿಲ್ಲೆಯ ಮೀನುಗಾರಿಕೆ ಉಪನಿರ್ದೇಶಕ ಬಾಬಾ ಸಾಬ್, ತಾಪಂ ಇಒ ವೇಣು, ಗ್ರೇಡ್ 2 ತಹಸೀಲ್ದಾರ್ ಸಂತೋಷ್, ಪುರಸಭಾ ಮುಖ್ಯಾಧಿಕಾರಿ ರಾಜಣ್ಣ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.