‘ಅಧ್ಯಯನಕ್ಕೆ ವೇಳಾಪಟ್ಟಿ ಸಿದ್ಧಪಡಿಸಕೊಳ್ಳಿ’

| Published : Feb 15 2025, 12:32 AM IST

‘ಅಧ್ಯಯನಕ್ಕೆ ವೇಳಾಪಟ್ಟಿ ಸಿದ್ಧಪಡಿಸಕೊಳ್ಳಿ’
Share this Article
  • FB
  • TW
  • Linkdin
  • Email

ಸಾರಾಂಶ

ಪರೀಕ್ಷೆಗಳನ್ನು ಬರೆಯವಾಗಿ ವಿದ್ಯಾರ್ಥಿಗಳು ಭಯವನ್ನು ಬೀಡಬೇಕು, ಪರೀಕ್ಷೆ ಬರೆಯುವ ಮೊದಲು ಪ್ರಶ್ನೆ ಪತ್ರಿಕೆ ಓದಿ ಅರ್ಥ ಮಾಡಿಕೊಳ್ಳಿ, ಉತ್ತರ ಬರೆಯುವ ಮೊದಲು ಎಷ್ಟು ಅಂಕಗಳಿಗೆ ಪ್ರಶ್ನೆ ಕೇಳಲಾಗಿದೆ, ಪ್ರಶ್ನೆಗೆ ಎಷ್ಟು ಉತ್ತರ ಬರೆಯಬೇಕು ಎಂದು ಪ್ಲಾನ್ ಮಾಡಿಕೊಳ್ಳಿ, ಈ ಪ್ರಕಾರ ಲಾಜಿಕಲಿ ಹಾಗೂ ಅಂಕಗಳಿಗೆ ಎಷ್ಟು ಬೇಕೋ ಅಷ್ಟು ಉತ್ತರವನ್ನು ಸ್ವಷ್ಟವಾಗಿ ಸರಳವಾಗಿ ಬರೆಯಬೇಕು.

ಕನ್ನಡಪ್ರಭ ವಾರ್ತೆ ಕೆಜಿಎಫ್ ಸರಿಯಾದ ಯೋಜನೆ ಇಲ್ಲದೆ ವಿದ್ಯಾರ್ಥಿಗಳು ಗುರಿಯನ್ನು ತಲುಪಲು ಸಾಧ್ಯವಿಲ್ಲ. ಅದ್ದರಿಂದ ಮುಂಬುರವ ಪರೀಕ್ಷೆಗಳಿಗೆ ಪರಿಣಾಮಕಾರಿಯಾಗಿ ತಯಾರಾಗಲು ಪ್ರತಿಯೊಬ್ಬ ವಿದ್ಯಾರ್ಥಿಯು ಮೊದಲು ಸರಿಯಾದ ಅಧ್ಯಯನ ವೇಳಾಪಟ್ಟಿಯನ್ನು ರಚಿಸಕೊಂಡು ಪರೀಕ್ಷೆಗೆ ತಯಾರಿ ನಡೆಸಬೇಕೆಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದರು.

ಕೆಜಿಎಫ್‌ನ ಸಂತ ಮೇರಿಸ್ ಪ್ರೌಢ ಶಾಲೆಯಲ್ಲಿ ೧೦ ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರೇರಣಾ ಸಂವಾದ ಕರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹತ್ತನೆ ತರಗತಿ ಎನ್ನುವುದು ವಿದ್ಯಾರ್ಥಿಗಳ ಜೀವನದಲ್ಲಿ ಮುಖ್ಯವಾದ ಸಂಗತಿ, ಎಷ್ಟೇ ಪರೀಕ್ಷಾ ಸಿದ್ಧತೆ ನಡೆಸಿದರೂ ಕಡಿಮೆ ಎನ್ನುವಂತೆ ವಿದ್ಯಾರ್ಥಿಗಳು ಪರೀಕ್ಷಾ ಸಿದ್ದತೆ ಮಾಡುತ್ತಾರೆ, ಹಾಗಂತ ಇಡೀ ದಿನ ಓದುತ್ತಾ ಕುಳಿತರೆ ಪ್ರಯೋಜನವಿಲ್ಲ ಯೋಜನಾಬದ್ಧವಾಗಿ ಅಧ್ಯಯನ ಮಾಡಿ ಎಂದರು.

ಈಗಾಗಲೇ ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಂಡಿರುವುದರಿಂದ ಸಾಮಾನ್ಯವಾಗಿ ಸಿಗುವ ಅಲ್ಪ ಸಮಯ ಮತ್ತು ಸ್ಟಡಿ ಹಾಲಿಡೇಸ್‌ನಲ್ಲಿ ಪರೀಕ್ಷೆ ಸಿದ್ಧತೆಗಳಿಗಾಗಿ ಒಂದು ವೇಳಾಪಟ್ಟಿಯನ್ನು ತಯಾರಿಸಿ ಅಧ್ಯಯನ ಆರಂಭಿಸಬೇಕು ಎಂದರು.

ವಿದ್ಯಾರ್ಥಿಗಳು ಭಯ ಬಿಡಿಪರೀಕ್ಷೆಗಳನ್ನು ಬರೆಯವಾಗಿ ವಿದ್ಯಾರ್ಥಿಗಳು ಭಯವನ್ನು ಬೀಡಬೇಕು, ಪರೀಕ್ಷೆ ಬರೆಯುವ ಮೊದಲು ಪ್ರಶ್ನೆ ಪತ್ರಿಕೆ ಓದಿ ಅರ್ಥ ಮಾಡಿಕೊಳ್ಳಿ, ಉತ್ತರ ಬರೆಯುವ ಮೊದಲು ಎಷ್ಟು ಅಂಕಗಳಿಗೆ ಪ್ರಶ್ನೆ ಕೇಳಲಾಗಿದೆ, ಪ್ರಶ್ನೆಗೆ ಎಷ್ಟು ಉತ್ತರ ಬರೆಯಬೇಕು ಎಂದು ಪ್ಲಾನ್ ಮಾಡಿಕೊಳ್ಳಿ, ಈ ಪ್ರಕಾರ ಲಾಜಿಕಲಿ ಹಾಗೂ ಅಂಕಗಳಿಗೆ ಎಷ್ಟು ಬೇಕೋ ಅಷ್ಟು ಉತ್ತರವನ್ನು ಸ್ವಷ್ಟವಾಗಿ ಸರಳವಾಗಿ ಬರೆಯಬೇಕೆಂದು ಎಸ್ಪಿ ಶಾಂತರಾಜು ಕಿವಿಮಾತು ಹೇಳಿದರು. ಕ್ಷೇತ್ರ ಶಿಕ್ಷಣಾಕಾರಿ ಸೈಯಿದಾ ಬೀ, ನಗರಸಬೆ ಪೌರಾಯುಕ್ತ ಪವನ್‌ಕುಮಾರ್, ಪ್ರಭಾರ ತಹಸೀಲ್ದಾರ್ ಹರಿಪ್ರಸಾದ್, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ನರಸಿಂಹಮೂರ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಂಕರೇಗೌಡ, ಷಮಿವುಲ್ಲಾ, ಶಿಕ್ಷಣಾ ಇಲಾಖೆಯಿಂದ ವೀಣಾ, ಸಘೀರಾಬೇಗಂ ಹಾಗೂ ಇನ್ನಿತರರು ಉಪಸ್ಥಿತರಿದ್ದರು.