ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಪುರಸಭಾ ಸಭಾಂಗಣದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ತಹಸೀಲ್ದಾರ್ ಚೇತನಾ ಯಾದವ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.ಕನ್ನಡ ಭುವನೇಶ್ವರಿ ರಥೋತ್ಸವ ಸಕಾಲದಲ್ಲಿ ಅಲಂಕಾರ ಮಾಡಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಆಚರಣೆ ಮಾಡಬೇಕು. ಕನ್ನಡ ನಾಮ ಫಲಕಕ್ಕೆ ಹಾಗೂ ಕನ್ನಡ ಧ್ವಜ ಹಾರಾಟಕ್ಕೆ ಪ್ರಾಶಸ್ತ್ಯ ನೀಡಬೇಕು. ಮೆರವಣಿಗೆಯಲ್ಲಿ ಟ್ಯಾಬ್ಲೋಗಳು ಭಾಗಿಯಾಗಬೇಕು ಎಂದರು.
ಕಾರ್ಯಕ್ರಮ ನಡೆಯುವ ಸಭಾಂಗಣವನ್ನು ವಿಶಾಲ ಶಾಮಿಯಾನ ಹಾಕಿ ಸಾರ್ವಜನಿಕರು, ಶಾಲಾ ಮಕ್ಕಳು ಬಿಸಿಲಿನಲ್ಲಿ ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಈ ವೇಳೆ ಪ್ರಗತಿಪರ ರೈತರು ಹಾಗೂ ಸೈನಿಕರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸುವಂತೆ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ತಿಳಿಸಿದರು.ನಂತರ ಬಿಇಒ ನಂದೀಶ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನ ಸಭೆಯಲ್ಲಿ ಮಂಡಿಸಿದರು. ಈ ವೇಳೆ ನಿಮಿಷಾಂಬ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ದಯಾನಂದ್, ಕಸಾಪ ತಾಲೂಕು ಅಧ್ಯಕ್ಷ ಸಿದ್ದಲಿಂಗು, ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಚಂದಗಾಲ್ ಶಂಕರ್, ಕಸಾಪ ತಾಲೂಕು ಕಾರ್ಯದರ್ಶಿ ಸಿ. ಸ್ವಾಮಿಗೌಡ, ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಬಾಬು, ಕಸಾಪ ಮಾಜಿ ಅಧ್ಯಕ್ಷ ಪುರುಷೋತ್ತಮ್, ತಾ.ಪಂ ಇಒ ವೇಣು, ಪುರಸಭಾ ಮುಖ್ಯಾಧಿಕಾರಿ ಸತೀಶ್, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಪುಷ್ಪಾ, ತಾ.ಪಂ ವಿಸ್ತರಣಾಧಿಕಾರಿ ತ್ರಿವೇಣಿ ಸೇರಿದಂತೆ ಇತರರು ಇದ್ದರು.ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ರಾಗಿ ಖರೀದಿಗೆ ಆದೇಶ
ಮಂಡ್ಯ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರವು 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ಭತ್ತ ಮತ್ತು ರಾಗಿ ಖರೀದಿಸಲು ಆದೇಶಿಸಿದೆ.ಭತ್ತ ಸಾಮಾನ್ಯ ಪ್ರತಿ ಕ್ವಿಂಟಾಲ್ ಗೆ 2369ರು , ಭತ್ತ - ಗ್ರೇಡ್ ಎ 2389 ರು. ಪ್ರತಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಾಲ್ ನಂತೆ ಗರಿಷ್ಠ 50 ಕ್ವಿಂಟಾಲ್ ಖರೀದಿಸಬಹುದು. ರಾಗಿ ಪ್ರತಿ ಕ್ವಿಂಟಾಲ್ ಗೆ 4886 ರು. ಪ್ರತಿ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್ ನಂತೆ ಗರಿಷ್ಠ 50 ಕ್ವಿಂಟಾಲ್ ಖರೀದಿಸಬಹುದು.
ಪ್ರಸಕ್ತ ಸಾಲಿನಲ್ಲಿ ಮಂಡ್ಯ ಜಿಲ್ಲೆಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಖರೀದಿ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕೆಲ ಪ್ರದೇಶದಲ್ಲಿ ತಾತ್ಕಾಲಿಕವಾಗಿ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ. ರೈತರು ಇದರ ಸದುಪಯೋಗಪಡಿಸಿಕೊಳ್ಳಲು ಕೋರಿದೆ.ಆಹಾರ ನಿಗಮದ ಗೋದಾಮು ರೈಲ್ವೆ ನಿಲ್ದಾಣದ ಹತ್ತಿರ ಶ್ರೀರಂಗಪಟ್ಟಣ ಸುನಿಲ್ ಮೊ-9945714882, ಟಿಎಪಿಸಿಎಂಎಸ್ ಗೋದಾಮು ಮಳವಳ್ಳಿ ರಸ್ತೆ, ಮದ್ದೂರು ಚೆಲುವರಾಜ್ ಮೊ-6360457266. ಎಪಿಎಂಸಿ ಆವರಣ, ಮಳವಳ್ಳಿ ಪ್ರದೀಪ್ ಕುಮಾರ್ ಮೊ- 9035657419. ಕೆಎಸ್‌ಡಬ್ಲ್ಯೂಸಿ ಗೋದಾಮು, ಮಂಡ್ಯ ಅಂಕಿತಾ ಮೊ-7338528648. ಎಪಿಎಂಸಿ ಆವರಣ, ಪಾಂಡವಪುರ ರವಿಚಂದ್ರ ಮೊ-9148695177, ಎಪಿಎಂಸಿ ಆವರಣ, ನಾಗಮಂಗಲ ಮಹದೇವಸ್ವಾಮಿ ಮೊ-974325330. ಎಪಿಎಂಸಿ ಆವರಣ, ಕೆ.ಆರ್.ಪೇಟೆ ಚಂದ್ರಶೇಖರ್, ಬಿ.ಎಂ. ಮೊ-8197764246 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))