ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಮೇ ತಿಂಗಳ ಎರಡನೇ ವಾರದಲ್ಲಿಯೇ ಮುಂಗಾರು ಮಳೆಯ ಪ್ರಮಾಣ ಹೆಚ್ಚಾಗಿದ್ದು, ಮುಂದಿನ 3 ತಿಂಗಳವರೆಗೂ ಮಳೆಯು ನಿರಂತರವಾಗಿ ಬರಲಿದ್ದು, ಸಾರ್ವಜನಿಕರ ಜೀವನಕ್ಕೆ ತೊಂದರೆಯಾಗದಂತೆ ವಿಪತ್ತು ನಿರ್ವಹಣೆ ಮಾಡಲು ಅಧಿಕಾರಿಗಳು ಪಾಲಿಕೆಯ ಎಲ್ಲಾ ಅಧಿಕಾರಿಗಳನ್ನು ಒಳಗೊಂಡಂತೆ ಟಾಸ್ಕ್ ಫೋರ್ಸ್ ರಚಿಸುವ ಮೂಲಕ ಹಾಗೂ ತುರ್ತು ಸಹಾಯವಾಣಿ ತೆರೆಯುವ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಲು ಸಿದ್ದರಾಗುವಂತೆ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧಿಕಾರಿಗಳಿಗೆ ಸೂಚಿಸಿದರು.ಅವರು ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ ಈ ಹಿಂದೆ ಮಳೆ ಬಂದಂತಹ ಸಂದರ್ಭದಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗಿ ಹಲವಾರು ಪ್ರದೇಶಗಳು ಜಲಾವೃತಗೊಂಡು ಸಾರ್ವಜನಿಕರಿಗೆ ತುಂಬ ತೊಂದರೆ ಉಂಟಾಗಿತ್ತು. ಆದ ಕಾರಣ ಇಂತಹ ಪ್ರದೇಶಗಳನ್ನು ಈಗಲೇ ಗುರುತಿಸಿಕೊಂಡು ಈ ಸ್ಥಳಗಳ ಬಗ್ಗೆ ಗಮನ ಹರಿಸಿ ತೊಂದರೆ ಉಂಟಾಗದಂತೆ ಶೀಘ್ರ ಕ್ರಮಕೈಗೊಳ್ಳಬೇಕೆಂದು ಹಾಗೂ ಚರಂಡಿಯಲ್ಲಿ ತುಂಬಿಕೊಂಡಿರುವ ಕಸವನ್ನು ಶೀಘ್ರವಾಗಿ ತೆಗೆದು ಹಾಕಿದರೆ ಮಳೆಯ ನೀರಿನ ರಭಸವನ್ನು ಸ್ವಲ್ಪವಾದರೂ ಕಡಿಮೆ ಮಾಡಬಹುದಾಗಿದೆ ಎಂದರು. ಈ ಕಾರಣದಿಂದ ಮೊದಲು ಎಲ್ಲಾ ಚರಂಡಿಗಳನ್ನು ಶೀಘ್ರವಾಗಿ ಸ್ವಚ್ಛ ಮಾಡುವಂತೆ ತುಮಕೂರು ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ತುಮಕೂರು ನಗರದ ಜನದಟ್ಟಣೆಯ ಪ್ರದೇಶಗಳಲ್ಲಿ ಹಲವಾರು ಹಳೆಯ ಮರಗಳು, ಶಿಥಿಲಾವಸ್ಥೆಯಲ್ಲಿರುವ ಹಾಗೂ ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ಶೀಘ್ರವಾಗಿ ತೆರವುಗೊಳಿಸಿ, ಅಮಾಯಕ ಸಾರ್ವಸಿದರು. ಮಳೆಯ ನೀರಿನ ಪರಿಣಾಮದಿಂದಾಗಿ ಕುಡಿಯುವ ನೀರಿನಲ್ಲಿಯೂ ಸಹ ಚರಂಡಿ ನೀರು ಸೇರಿಕೊಳ್ಳುವ ಅಪಾಯವಿದ್ದು, ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು, ಮಳೆಯ ಹಾಗೂ ಗಾಳಿಯ ರಭಸಕ್ಕೆ ವಿದ್ಯುತ್ ಕಂಬಗಳು ನೆಲಕ್ಕೆ ಉರುಳುವುದು ಸರ್ವೆ ಸಾಮಾನ್ಯ, ಇಂತಹ ಪರಿಸ್ಥಿತಿಯಲ್ಲಿ ಬೆಸ್ಕಾಂ ಅಧಿಕಾರಿಗಳ ಜೊತೆ ಅರಣ್ಯ ಇಲಾಖೆ ಹಾಗೂ ತುಮಕೂರು ಮಹಾನಗರಪಾಲಿಕೆ ಅಧಿಕಾರಿಗಳು ಸಮನ್ವಯದೊಂದಿಗೆ ಶೀಘ್ರವಾಗಿ ಸಮಸ್ಯೆಯನ್ನು ಬಗೆಹರಿಸಲು ಶಾಸಕರು ಸೂಚನೆ ನೀಡಿದರು.
ಈ ಸಭೆಯಲ್ಲಿ ತುಮಕೂರು ಮಹಾನಗರಪಾಲಿಕೆಯ ಕಾರ್ಯಪಾಲಕ ಇಂಜಿನಿಯರಾದ ಸಂದೀಪ್, ಪ್ರವೀಣ್, ಆರೋಗ್ಯಧಿಕಾರಿ ಯೋಗೀಶ್, ವೀರೇಶ್, ವಲಯ ಅರಣ್ಯಾಧಿಕಾರಿಯಾದ ನಮಿತಾ, ಪರಿಸರ ಅಭಿಯಂತರರಾದ ನಿಖಿತ, ಅರಣ್ಯ ಇಲಾಖೆಯ ನವೀನ್ ಹಾಜರಿದ್ದರು.