ರಾಜ್ಯದ ಪುರಸಭೆ ಪಟ್ಟಣ ಪಂಚಾಯ್ತಿ ನಗರ ಸಭೆ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ 6 ಸಾವಿರ ಹೊರಗುತ್ತಿಗೆ ನೀರು ಗಂಟಿಗಳಲ್ಲಿದ್ದು, ಅವರ ಗುತ್ತಿಗೆಯನ್ನು ರದ್ದು ಮಾಡಿ ನೇರ ವೇತನ ನೀಡುವಂತೆ ಒತ್ತಾಯಿಸಿ ಈ ಬಾರಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪ್ರತಿಭಟನೆ ನಡೆಸುವುದಾಗಿ ಸಂಘದ ಅಧ್ಯಕ್ಷರಾದ ಪಾವಗಡ ಶ್ರೀರಾಮ್ ತಿಳಿಸಿದ್ದಾರೆ .

ಕನ್ನಡಪ್ರಭ ವಾರ್ತೆ ಕುಣಿಗಲ್

ರಾಜ್ಯದ ಪುರಸಭೆ ಪಟ್ಟಣ ಪಂಚಾಯ್ತಿ ನಗರ ಸಭೆ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ 6 ಸಾವಿರ ಹೊರಗುತ್ತಿಗೆ ನೀರು ಗಂಟಿಗಳಲ್ಲಿದ್ದು, ಅವರ ಗುತ್ತಿಗೆಯನ್ನು ರದ್ದು ಮಾಡಿ ನೇರ ವೇತನ ನೀಡುವಂತೆ ಒತ್ತಾಯಿಸಿ ಈ ಬಾರಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪ್ರತಿಭಟನೆ ನಡೆಸುವುದಾಗಿ ಸಂಘದ ಅಧ್ಯಕ್ಷರಾದ ಪಾವಗಡ ಶ್ರೀರಾಮ್ ತಿಳಿಸಿದ್ದಾರೆ . ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ನೀರು ಸರಬರಾಜು ನೌಕರರಿಗೆ ಸಂವಿಧಾನಿಕ ಹಾಗೂ ನ್ಯಾಯಯುತ ಸಂಬಳವನ್ನು ನೀಡಿಲ್ಲ. ಅವರು ನೀಡುವ ಅಲ್ಪ ಹಣದಲ್ಲಿ ನಮ್ಮ ಮಕ್ಕಳ ಭವಿಷ್ಯ ವಿದ್ಯಾಭ್ಯಾಸ ಮನೆಯ ಬಾಡಿಗೆ ತಂದೆ ತಾಯಿಯ ಔಷಧಿಯ ಖರ್ಚು ಎಲ್ಲವನ್ನು ಕೂಡ ನಿಭಾಯಿಸಲು ಕಷ್ಟ ಆಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶದಂತೆ 27 ಸಾವಿರ ಸಂಬಳ ನೀಡಬೇಕಾದ ಸರ್ಕಾರ ಗುತ್ತಿಗೆ ದಾರರ ಕಡೆಯಿಂದ ದಿನದ 24 ಗಂಟೆ ದುಡಿಸಿಕೊಂಡು 3-4 ತಿಂಗಳು ಕಳೆದರು ಸಂಬಳ ನೀಡುತ್ತಿಲ್ಲ ಅವರು ನೀಡುವ 12 ಅಥವಾ 13 ಸಾವಿರ ಹಣದಿಂದ ಬದುಕು ಹೇಗೆ ಸಾಧ್ಯ ಎಂದರು . ಕೇವಲ 6 ಸಾವಿರ ಮಂದಿ ಇರುವ ನೀರು ಸರಬರಾಜು ನೌಕರರ ಸಮಸ್ಯೆಯನ್ನು ಮುಖ್ಯಮಂತ್ರಿ ಬಗೆಹರಿಸಲು ಹಾಗೂ ಅವರ ಗಮನ ಸೆಳೆಯುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ನಡೆಯುವ ಅಧಿವೇಶನಕ್ಕೆ ಸಂವಿಧಾನಿಕವಾಗಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು ಹಲವಾರು ವಿವಿಧ ಸಂಘಟನೆಗಳು ಹೋರಾಟಗಾರರು ಸಹಕಾರ ನೀಡಬೇಕೆಂದು ಮನವಿ ಸಲ್ಲಿಸಿದರು .

ಈ ಸಂದರ್ಭದಲ್ಲಿ ನೀರು ಸರಬರಾಜು ಸಂಘದ ರಾಜ್ಯಾಧಕ್ಷ ಪಾವಗಡ ಶ್ರೀರಾಮ್. ರಾಜ್ಯ ಕಾರ್ಯದರ್ಶಿ ಕೃಷ್ಣಪ್ಪ ತಾಲೂಕು ಅಧ್ಯಕ್ಷ ಸಿದ್ದಯ್ಯ ಪುಟ್ಟಸ್ವಾಮಿ ಸಿದ್ದಪ್ಪ ಸೇರಿದಂತೆ ಇತರರು ಇದ್ದರು.