ಸಾರಾಂಶ
ಶ್ರೀರಂಗಪಟ್ಟಣ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥಕ್ಕೆ ಗಂಜಾಂನ ಶ್ರೀನಿಮಿಷಾಂಬ ದೇವಾಲಯದ ಬಳಿ ಆಗಮಿಸುತ್ತಿದ್ದಂತೆ ತಾಲೂಕು ಆಡಳಿತದ ಪರವಾಗಿ ತಹಸೀಲ್ದಾರ್ ಪರುಶುರಾಮ್ ನೇತೃತ್ವದಲ್ಲಿ ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು.
ನಂತರ ಮಾತನಾಡಿದ ಅವರು, ಕಳೆದ ಸೆಪ್ಟೆಂಬರ್‌ನಲ್ಲಿ ಕನ್ನಡದ ತೇರನ್ನು ಸಿದ್ಧತೆ ಮಾಡಿ ಶ್ರೀ ನಿಮಿಷಾಂಬ ದೇವಾಲಯದ ಬಳಿ ಪೂಜೆ ಸಲ್ಲಿಸಿ ಕಳುಹಿಸಿ ಕೊಡಲಾಯಿತು. ಸೆ.22ರಂದು ಉತ್ತರ ಕನ್ನಡದ ಭಾವನಗಿರಿಯ ತಾಯಿ ಭುವನೇಶ್ವರಿ ದೇವಾಲಯದಿಂದ ರಾಜ್ಯ ಸಂಚಾರಕ್ಕೆ ಚಾಲನೆ ನೀಡಲಾಗಿತ್ತು.ಸಂಚಾರಕ್ಕೆ ಹೋಗಿದ್ದ ಕನ್ನಡ ರಥವು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ 87 ದಿನಗಳವರೆಗೂ ಸಂಚರಿಸಿ ಕೊನೆಯದಾಗಿ ಮತ್ತೆ ಮಂಡ್ಯ ಜಿಲ್ಲೆಗೆ ಆಗಮಿಸಿದ್ದು. ಇದೀಗ ಪೂಜೆ ಸಲ್ಲಿಸಿ ಶ್ರೀರಂಗಪಟ್ಟಣ ಮಾರ್ಗವಾಗಿ ಪಾಂಡವಪುರ ತಲುಪಿ ನಂತರ ಮಂಡ್ಯಕ್ಕೆ ಕೊನೆಗೊಳ್ಳಲಿದೆ. ಎಲ್ಲರೂ ಸಹಕರಿಸಿ ಕನ್ನಡ ಸಮ್ಮೇಳನ ಅಚ್ಚುಕಟ್ಟಾಗಿ ನಡೆಸಲು ಮುಂದಾಗಬೇಕು. ಜತೆಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದರು. ತಾಪಂ ಇಒ ವೇಣು, ನಿಮಿಷಾಂಬ ದೇವಾಲಯ ಇಒ ಕೃಷ್ಣ, ಪುರಸಭೆ ಮುಖ್ಯಾಧಿಕಾರಿ ರಾಜಣ್ಣ, ಕಸಾಪ ತಾಲೂಕು ಅಧ್ಯಕ್ಷ ಸಿದ್ದಲಿಂಗು, ಎಚ್.ಟಿ ರಾಜಶೇಖರ್, ಪ್ರಜ್ಞಾವಂತರ ವೇದಿಕೆ ಸಂಚಾಲಕ ಸಿ.ಎಸ್. ವೆಂಕಟೇಶ್, ಕಸಾಪ ಖಜಾಂಚಿ ಬಸವರಾಜು, ಕಸಾಪ ಮಾಜಿ ಅಧ್ಯಕ್ಷ ಪುರುಷೋತ್ತಮ ಚಿಕ್ಕಪಾಳ್ಯ, ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್‌ಬಾಬು, ಎಂ.ಸುರೇಶ್, ಉಮಾಶಂಕರ್, ಪಾಲಹಳ್ಳಿ ನರಸಿಂಹ ಸೇರಿ ಇತರೆ ಕಸಾಪ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ಶಾಲಾ ಮಕ್ಕಳು ಹಾಜರಿದ್ದರು
.