ಮಾಣಿ ಪೆರಾಜೆ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ನೂತನ ಕ್ಯಾಂಪಸ್‌ ಉದ್ಘಾಟನೆ

| Published : Dec 23 2023, 01:45 AM IST / Updated: Dec 23 2023, 01:46 AM IST

ಮಾಣಿ ಪೆರಾಜೆ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ನೂತನ ಕ್ಯಾಂಪಸ್‌ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ನೂತನ ಕ್ಯಾಂಪಸ್ ಲೋಕಾರ್ಪಣೆ ಹಾಗೂ ವಾರ್ಷಿಕೋತ್ಸವ ‘ವಿಕಾಸ ವೈಭವ ೨೦೨೩’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಿಗ್ ಬಾಸ್ ಖ್ಯಾತಿಯ ಧ್ವನಿ ಕಲಾವಿದ, ನಟ, ನಿರೂಪಕ ಬಡಕ್ಕಿಲ ಪ್ರದೀಪ್ ಪರವಾಗಿ ಅವರ ಹೆತ್ತವರಾದ ಪದ್ಮಾವತಿ‌ ಹಾಗೂ ಚಂದ್ರಶೇಖರ ಭಟ್ ಬಡೆಕ್ಕಿಲ ‘ಬಾಲವಿಕಾಸ ರತ್ನ ಅವಾರ್ಡ್ ೨೦೨೩’ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಗ್ರಾಮೀಣ ಪ್ರದೇಶದಲ್ಲಿದ್ದರೂ ವಿದ್ಯಾರ್ಥಿಗಳ ವಿದ್ಯಾರ್ಜನೆಗಾಗಿ ಆಧುನಿಕ ವ್ಯವಸ್ಥೆ ಹೊಂದಿರುವ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮಂಗಳೂರಿನ ಶಕ್ತಿ ಶಿಕ್ಷಣ ಸಂಸ್ಥೆಯ ಮುಖ್ಯ ಸಲಹೆಗಾರ ರಮೇಶ ಕೆ. ಹೇಳಿದ್ದಾರೆ.

ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ನೂತನ ಕ್ಯಾಂಪಸ್ ಲೋಕಾರ್ಪಣೆ ಹಾಗೂ ವಾರ್ಷಿಕೋತ್ಸವ ‘ವಿಕಾಸ ವೈಭವ ೨೦೨೩’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿ‌ಗೆ ತಕ್ಕುದಾದ ವ್ಯವಸ್ಥೆ ಈ ಶಿಕ್ಷಣ ಸಂಸ್ಥೆಯಲ್ಲಿದೆ. ದೊಡ್ಡ ಪೇಟೆ, ಪಟ್ಟಣಗಳಲ್ಲಿರುವ ಶಾಲೆಗಳಲ್ಲಿರುವುದಕ್ಕಿಂತಲೂ ಅಧಿಕ ವ್ಯವಸ್ಥೆ ಬಾಲವಿಕಾಸದ ನೂತನ ಕ್ಯಾಂಪಸ್ ನಲ್ಲಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿದ್ದ ಮಾಣಿ ಬಾಲವಿಕಾಸ ಟ್ರಸ್ಟ್ ಅಧ್ಯಕ್ಷ ಪ್ರಹ್ಲಾದ ಶೆಟ್ಟಿ ಜೆ. ಮಾತನಾಡಿ, ಬಡತನದಲ್ಲಿರುವ ವಿದ್ಯಾರ್ಥಿಗಳಿಗೆ ಸದಾ ಸಹಕಾರ ನೀಡುತ್ತಾ ಬಂದಿದ್ದೇನೆ. ನನ್ನ ಕನಸನ್ನು ನನ್ನ ಮಗ ನನಸು ಮಾಡಿದ ಖುಷಿ ಇದೆ. ಐದು ಎಕ್ರೆಯಲ್ಲಿ ವ್ಯವಸ್ಥಿತ ಶಾಲೆ, ಸುಸಜ್ಜಿತ ಕ್ರೀಡಾಂಗಣವಿದೆ ಎಂದರು.ಬಾಲವಿಕಾಸ ಟ್ರಸ್ಟ್ ನ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ. ಮಾತನಾಡಿ, ಎಲ್ಲರ ಪ್ರಯತ್ನದ ಫಲ ಇದಾಗಿದೆ. ಟ್ರಸ್ಟ್ ನವರ ನಂಬಿಕೆಗೆ ನಾನು ಚಿರಋಣಿ ಎಂದರು. ಬಿಗ್ ಬಾಸ್ ಖ್ಯಾತಿಯ ಧ್ವನಿ ಕಲಾವಿದ, ನಟ, ನಿರೂಪಕ ಬಡಕ್ಕಿಲ ಪ್ರದೀಪ್ ಪರವಾಗಿ ಅವರ ಹೆತ್ತವರಾದ ಪದ್ಮಾವತಿ‌ ಹಾಗೂ ಚಂದ್ರಶೇಖರ ಭಟ್ ಬಡೆಕ್ಕಿಲ ‘ಬಾಲವಿಕಾಸ ರತ್ನ ಅವಾರ್ಡ್ ೨೦೨೩’ ಸ್ವೀಕರಿಸಿದರು. ಯಮುನಾ ಹೋಮ್ಸ್ ಡಿಸೆನ್ಸ್ ವ್ಯವಸ್ಥಾಪಕ ಮತ್ತು ನಿರ್ದೇಶಕ ನುಳಿಯಾಲು ಪುರುಶೋತ್ತಮ ಆರ್. ಶೆಟ್ಟಿ ದಂಪತಿ, ಬೆಂಗಳೂರಿನ ವಾಸ್ತುಶಿಲ್ಪಿ ನಿರ್ದೇಶಕ ಸೂರಜ್ ಅಂಚನ್ , ಎಸ್‌ಎಸ್ ಇಂಜಿನಿಯರಿಂಗ್ ಮತ್ತು ಸಲಹೆಗಾರ ಸಂತೋಷ್ ಶೆಟ್ಟಿ, ಕಾನೂನು ಸಲಹೆಗಾರ ಪ್ರವೀಣ್ ಚಂದ್ರ ಶೆಟ್ಟಿ, ಸಚ್ಚಿದಾನಂದ ರೈ ಪಾಳ್ಯ ಹಾಗೂ ಮದನಾಕ್ಷಿ ದಂಪತಿಗಳನ್ನು, ಪ್ರತಾಪ್ ಶೆಟ್ಟಿ ಮಾಣಿಬೆಟ್ಟು ಹಾಗೂ ಪತ್ನಿ ಅನುಶ್ರೀ ಜೆ.ರೈ ಅವರನ್ನು ಸನ್ಮಾನಿಸಲಾಯಿತು. ಬಾಲವಿಕಾಸ ಟ್ರಸ್ಟ್ ನ ಸಂಚಾಲಕ ಪ್ರಹ್ಲಾದ್ ಶೆಟ್ಟಿ ಜೆ. ಹಾಗೂ ಪತ್ನಿ ಸುಜಯಾ ಪಿ.ಶೆಟ್ಟಿ, ಟ್ರಸ್ಟ್ ನ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ. ಪತ್ನಿ ನಮ್ರತಾ ರೈ, ಬಾಲವಿಕಾಸ ಟ್ರಸ್ಟ್ ಉಪಾಧ್ಯಕ್ಷ ಯತಿರಾಜ್ ಕೆ.ಎಲ್. ಹಾಗೂ ಬಬಿತಾ ಶೆಟ್ಟಿ ದಂಪತಿ, ಟ್ರಸ್ಟ್‌ ಸದಸ್ಯರಾದ ಶುಭಾಶಿನಿ ಎ.‌ಶೆಟ್ಟಿ, ಜಯಲಕ್ಷ್ಮೀ ಪೈ,ರವರನ್ನು ಶಿಕ್ಷಕ ರಕ್ಷಕ ಸಮಿತಿ ಹಾಗೂ ಶಾಲಾ ಶಿಕ್ಷಕವೃಂದದ ವತಿಯಿಂದ ಗೌರವಿಸಲಾಯಿತು.ಪೆರಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶಾಲ ಎಂ. ಪೆರಾಜೆ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಕಸ್ತೂರಿ ಪಿ. ಶೆಟ್ಟಿ, ಮಾಣಿ ಬಾಲವಿಕಾಸ ಟ್ರಸ್ಟ್ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ., ಟ್ರಸ್ಟಿಗಳಾದ ಜಯಲಕ್ಷ್ಮಿ ಪೈ, ಸುಭಾಷಿಣಿ ಶೆಟ್ಟಿ, ಉಪಾಧ್ಯಕ್ಷ ಯತಿರಾಜ್ ಕೆ. ಎನ್. ಮತ್ತಿತರರಿದ್ದರು.ಆಡಳಿತಾಧಿಕಾರಿ ರವೀಂದ್ರ ದರ್ಬೆ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ವಿ. ಶೆಟ್ಟಿ ವಂದಿಸಿದರು. ಶಿಕ್ಷಕರಾದ ಸುಪ್ರಿಯ ಡಿ., ಶೋಭಾ ಎಂ. ಶೆಟ್ಟಿ ನಿರೂಪಿಸಿದರು.