ಲೊಕ್ಕನಹಳ್ಳೀಲಿ ಯೋಜನೆಯ ಕಾಮಗಾರಿಗಳ ವೆಚ್ಚ ಮಂಡನೆ

| Published : Mar 05 2024, 01:34 AM IST

ಸಾರಾಂಶ

ಲೆಕ್ಕನಹಳ್ಳಿಯ ಗ್ರಾಪಂನಲ್ಲಿ ನರೇಗಾ ಮತ್ತು 15 ನೇ ಹಣಕಾಸು ಯೋಜನೆಯ ಕಾಮಗಾರಿಗಳ ವೆಚ್ಚಗಳ ಕುರಿತು ಮಂಡನೆಯನ್ನು ಸಂಪನ್ಮೂಲ ವ್ಯಕ್ತಿಗಳು ಸೋಮವಾರ ಮಂಡಿಸಿದರು.

ಕನ್ನಡಪ್ರಭ ವಾರ್ತೆ ಹನೂರುಲೆಕ್ಕನಹಳ್ಳಿಯ ಗ್ರಾಪಂನಲ್ಲಿ ನರೇಗಾ ಮತ್ತು 15 ನೇ ಹಣಕಾಸು ಯೋಜನೆಯ ಕಾಮಗಾರಿಗಳ ವೆಚ್ಚಗಳ ಕುರಿತು ಮಂಡನೆಯನ್ನು ಸಂಪನ್ಮೂಲ ವ್ಯಕ್ತಿಗಳು ಸೋಮವಾರ ಮಂಡಿಸಿದರು.ತಾಲೂಕಿನ ಲೋಕ್ಕನಹಳ್ಳಿ ಗ್ರಾಪಂ ಕಾರ್ಯಾಲಯದ ವತಿಯಿಂದ ರಾಜೀವ್ ಗಾಂಧಿ ಸೇವಾ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ಮೊದಲನೇ ಹಂತದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹಾಗೂ 15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯನ್ನು ಮಂಡಿಸಲಾಯಿತು. ಸಭೆಯಲ್ಲಿ ಕೂಲಿ ಹಣ ನಿಗಧಿತ ಅವಧಿಯೊಳಗೆ ಖಾತೆಗೆ ಜಮಾವಣೆ ಆಗಬೇಕು, ಇನ್ನೂ ಹೆಚ್ಚಿನ ಕೂಲಿ ನೀಡಬೇಕೆಂದು ಸಾರ್ವಜನಿಕರು ಮನವಿ ಮಾಡಿದರು. ಬಹುತೇಕ ಗ್ರಾಪಂಗಳ ಸಾಮಾಜಿಕ ಪರಿಶೋಧನಾ ಸಭೆಯಲ್ಲಿ ಕಾಮಗಾರಿಗಳು ಆಗಿಲ್ಲ ಎಂದು ಆರೋಪಗಳು ಕೇಳಿ ಬರುವುದು ಸಾಮಾನ್ಯ, ಆದರೆ, ಲೋಕ್ಕನಹಳ್ಳಿ ಗ್ರಾಪಂ ವತಿಯಿಂದ ಕೈಗೊಳ್ಳಲಾಗಿರುವ ಕಾಮಗಾರಿಗಳು ಸಮರ್ಪಕವಾಗಿ ಆಗಿದೆ ಎಂದು ಸಭೆಯಲ್ಲಿ ಸಾರ್ವಜನಿಕರು ಒಕ್ಕೊರಲಿನಿಂದ ತಿಳಿಸಿದ್ದು ವಿಶೇಷವಾಗಿತ್ತು.ಆಕ್ಷೇಪಣೆ, ವಸೂಲಾತಿ ಕೈಬಿಡಲು ಸಾರ್ವಜನಿಕರ ಸಹಮತ:

ಸಾಮಾಜಿಕ ಪರಿಶೋಧನಾ ಆಡಿಟ್ ವೇಳೆ ಕಂಡು ಬಂದ ಲೋಪ ದೋಷಗಳ ಬಗ್ಗೆ ಸಾಮಾಜಿಕ ಪರಿಶೋಧನ ತಾಲೂಕು ಅಧಿಕಾರಿ ಸಿದ್ದಪ್ಪ ಕೆಲವೊಂದು ಕಾಮಗಾರಿಗಳ ಬಗ್ಗೆ ಆಕ್ಷೇಪಣೆ, ವಸೂಲಾತಿ ಬಗ್ಗೆ ಸಭೆಗೆ ತಿಳಿಸಿದಾಗ, ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ತಿಳಿಸಿ, ಬಹುತೇಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ ಕೆಲವೊಂದು ಸಮಸ್ಯೆಗಳಿಂದ ಈ ರೀತಿ ಆಗಿದ್ದು ಲೋಪದೋಷಗಳನ್ನು ಸರಿಪಡಿಸಲು ಅವಕಾಶ ಮಾಡಿಕೊಟ್ಟು ಆಕ್ಷೇಪಣೆ, ವಸೂಲಾತಿಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಸಿದ್ದಪ್ಪ ಮಾತನಾಡಿ, ನರೇಗಾ ಯೋಜನೆಯ ನಿಯಾಮವಳಿಗಳಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಪಿಡಿಒ ರಘುನಾಥ್ ಮಾತನಾಡಿ, ಕೆಲವೊಂದು ತಾಂತ್ರಿಕ ಮತ್ತು ಮಾಹಿತಿ ವಿನಿಮಯದ ಕಾರಣಕ್ಕೆ ಕಾಮಗಾರಿಗಳ ಆಕ್ಷೇಪಣೆ, ವಸೂಲಾತಿಗೆ ಒಳಗಾಗಿದೆ ಇದನ್ನು ತಕ್ಷಣದಲ್ಲಿ ಸರಿಪಡಿಸಿಕೊಳ್ಳಲಾಗುವುದು ಎಂದರು. ಈ ವೇಳೆ ನೋಡೆಲ್ ಅಧಿಕಾರಿ ಚಂದ್ರಕಲಾ, ಶಿವರಾಜು, ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷೆ ನಂದಿನಿ, ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.