ಮಹಾವೀರ ಸಗರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

| Published : Nov 04 2024, 12:27 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ: ಪಟ್ಟಣದ ಅರಿಹಂತ ಚಾರಿಟೇಬಲ್ ಟ್ರಸ್ಟ್‌ ಸಂಸ್ಥಾಪಕ ಅಧ್ಯಕ್ಷರಾದ ಮಹಾವೀರ ಸಗರಿ ಅವರಿಗೆ ಕರ್ನಾಟಕ ಸರ್ಕಾರ ನೀಡುವ 2024ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದಕ್ಕಾಗಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ: ಪಟ್ಟಣದ ಅರಿಹಂತ ಚಾರಿಟೇಬಲ್ ಟ್ರಸ್ಟ್‌ ಸಂಸ್ಥಾಪಕ ಅಧ್ಯಕ್ಷರಾದ ಮಹಾವೀರ ಸಗರಿ ಅವರಿಗೆ ಕರ್ನಾಟಕ ಸರ್ಕಾರ ನೀಡುವ 2024ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದಕ್ಕಾಗಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಹಾಗೂ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ಜಿಲ್ಲಾಧಿಕಾರಿ ಟಿ.ಭೂಪಾಲನ ಹಾಗೂ ಜಿಪಂ ಸಿಇಒ ಋಷಿ ಆನಂದ ಹಾಗೂ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಂತೋಷ ಭೋವಿ ಇತರರು ಮಹಾವೀರ ಸಗರಿ ಸೇರಿದಂತೆ ಇತರರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.ಇದೇ ವೇಳೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಂದ ಹಿನ್ನಲೆಯಲ್ಲಿ ಹಾಗೂ ಇವರ ಸಮಾಜ ಸೇವೆಯನ್ನು ಗುರುತಿಸಿ ಮಹಾವೀರ ಸಗರಿಯವರಿಗೆ, ವಿಜಯಪುರ ಜೈನ ಸಮಾಜದ ಮುಖಂಡರಾದ ಆದಿನಾಥ, ಅಲ್ಪಸಂಖ್ಯಾತರ ಸೊಸೈಟಿ ಅಧ್ಯಕ್ಷರಾದ ಜಂಭುನಾಥ ಕಂಚಾಣಿ, ಕರ್ನಾಟಕ ರಾಜ್ಯ ಜೈನ ಅಸೋಯೇಷನ್‌ ಸದಸ್ಯರಾದ ಪ್ರವೀಣ ಕಾಸರ, ಸಮಾಜದ ಹಿರಿಯರು ಹಾಗೂ ಗಣ್ಯ ವ್ಯಪಾರಸ್ಥರಾದ ಅಪ್ಪಾಸಾಹೇಬ ಬಾಬಾಮುತ್ತಿನ, ಜಿನದತ್ತ ಆಲದಿ, ಧನ್ಯಕುಮಾರ ಹೊಸಮನಿ, ರವಿ ಗೊಂಗಡಿ, ಅಜಿತ ಕಂಚಿನಕೋಟಿ, ಆನಂದ ರಡರಟ್ಟಿ, ಅಶೋಕ ಬೋಗಾರ, ಶ್ಯಾಮಲಾ ಮುತ್ತಿನ, ಸುನಿತಾ ಸಗರಿ, ಚಾಯಾ ಕುತ್ತೆ ಹಾಗೂ ಮುಂತಾದವರು ಸನ್ಮಾನಿಸಿದರು.