ಸಾರಾಂಶ
ಕೊಲ್ಹಾರ: ಡಾ.ಪಂಡಿತ ಪುಟ್ಟರಾಜ ಗವಾಯಿಗಳ 110 ನೇ ಜಯಂತ್ಯುತ್ಸವದ ಪ್ರಯುಕ್ತ ನೀಡುವ ಗುರು ಪುಟ್ಟರಾಜ ಗವಾಯಿಗಳ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗೆ ಶೀಲವಂತ ಹಿರೇಮಠದ ಘ.ಮ.ಪೂ ಧರ್ಮರತ್ನ ಡಾ.ಕೈಲಾಸನಾಥ ಮಹಾಸ್ವಾಮೀಜಿ ಭಾಜನರಾದರು. ಗದಗಿನ ಶ್ರೀರಾಮ ಭವನ ಕಳಸಾಪೂರದಲ್ಲಿ ಡಾ.ವಿ.ಬಿ.ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ ಸಹಯೋಗದಲ್ಲಿ ನಡೆದ ಗುರು ಪುಟ್ಟರಾಜ ಗವಾಯಿಗಳ ಜಯಂತ್ಯುತ್ಸವದ ಸಮಾರಂಭದಲ್ಲಿ 2024 ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಯನ್ನು ಪಟ್ಟಣದ ಶೀಲವಂತ ಹಿರೇಮಠದ ಘ.ಮ.ಪೂ ಧರ್ಮರತ್ನ ಡಾ.ಕೈಲಾಸನಾಥ ಸ್ವಾಮೀಜಿ ಪ್ರದಾನ ಮಾಡಲಾಯಿತು. ಗದುಗಿನ ವೀರೇಶ್ವರ ಪುಣ್ಯಾಶ್ರಮದ ಡಾ.ಕಲ್ಲಯ್ಯ ಅಜ್ಜನವರು, ಬೆಂಗಳೂರು ಸಾರ್ವಜನಿಕ ಗಂಥಾಲಯದ ನಿರ್ದೇಶಕ ಡಾ.ಸತೀಶಕುಮಾರ. ಅತಿಥಿ ಶಿರಹಟ್ಟಿ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಕೆ.ಎ.ಬಳೆಗಾರ ಪ್ರಧಾನ ಮಾಡಿದರು . ಈ ವೇಳೆ ಪತ್ರಕರ್ತ ಡಾ.ಅನಂತ ಕಾರ್ಕಳ, ವಿರೇಶ್ವರ ಪುಣ್ಯಾಶ್ರಮದ ಅನ್ನಪೂರ್ಣ ಹಿಡಕಿಮಠ, ಧಾರವಾಢ ವಕೀಲರಾದ ಹೇಮಾಕ್ಷಿ ಕಿರೇಸೂರ, ಸಾಹಿತಿ ದಿನೇಶ ದಾವಣಗೆರೆ ಸೇರಿದಂತೆ ಅನೇಕ ರಾಜಕೀಯ ನಾಯಕರು ಉಪಸ್ಥಿತರಿದ್ದರು.