ರಾಮನಗರ: ಕೆರೆಗಳ ಒತ್ತುವರಿ ತೆರವುಗೊಳಿಸಿ ಹೂಳು ತೆಗೆದು, ಹೆಚ್ಚಿನ ಪ್ರಮಾಣದಲ್ಲಿ ಮಳೆನೀರು ಸಂಗ್ರಹಿಸುವ ಮೂಲಕ ಕೆರೆಗಳ ಮೂಲ ಉದ್ದೇಶವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಬೇಕಿದೆ ಎಂದು ಗೋಪಹಳ್ಳಿ ಗ್ರಾಪಂ ಅಧ್ಯಕ್ಷೆ ಸರೋಜಾ ನಾಗರಾಜು ಹೇಳಿದರು.

ರಾಮನಗರ: ಕೆರೆಗಳ ಒತ್ತುವರಿ ತೆರವುಗೊಳಿಸಿ ಹೂಳು ತೆಗೆದು, ಹೆಚ್ಚಿನ ಪ್ರಮಾಣದಲ್ಲಿ ಮಳೆನೀರು ಸಂಗ್ರಹಿಸುವ ಮೂಲಕ ಕೆರೆಗಳ ಮೂಲ ಉದ್ದೇಶವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಬೇಕಿದೆ ಎಂದು ಗೋಪಹಳ್ಳಿ ಗ್ರಾಪಂ ಅಧ್ಯಕ್ಷೆ ಸರೋಜಾ ನಾಗರಾಜು ಹೇಳಿದರು.

ಗೋಪಹಳ್ಳಿ ಗ್ರಾಪಂ ವ್ಯಾಪ್ತಿಯ ಕರಡಿಗೌಡನದೊಡ್ಡಿ ಗ್ರಾಮದ ಬಳಿಯಿರುವ ಭಕ್ತಿಪುರ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರಸ್ತುತ ಕೆರೆಗಳ ಸಂರಕ್ಷಣೆ ಅತ್ಯಂತ ಮಹತ್ವದ್ದಾಗಿದೆ. ಅಂತರ್ಜಲ ಹೆಚ್ಚಳ, ಕೃಷಿಗೆ ನೀರು, ಕುಡಿಯುವ ನೀರು ಪೂರೈಕೆ, ಜೀವವೈವಿಧ್ಯ ಸಂರಕ್ಷಣೆ ಮತ್ತು ಗ್ರಾಮಾಭಿವೃದ್ದಿಯಲ್ಲಿ ನೀರು ನಿರ್ವಹಣೆಗೆ ಕೆರೆಗಳು ಸಹಕಾರಿಯಾಗಲಿವೆ. ಹೀಗಾಗಿ ನಮ್ಮ ಪೂರ್ವಜರು ಕೆರೆ ಕಟ್ಟೆಗಳ ನಿರ್ಮಾಣ ಮತ್ತು ಸಂರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಿದ್ದರು ಎಂದು ಹೇಳಿದರು.

ಈಗ ಭೂಮಿಗೆ ಬಂಗಾರದ ಬೆಲೆ ಬಂದಿರುವುದರಿಂದ ಗ್ರಾಮೀಣ ಪ್ರದೇಶದಲ್ಲೂ ಕೆರೆಗಳು ಒತ್ತುವರಿಯಾಗುತ್ತಿವೆ. ಅವುಗಳನ್ನು ರಕ್ಷಣೆ ಮಾಡಿ ಮೀನುಗಾರಿಕೆ ಮುಂತಾದ ಮೂಲಗಳಿಂದ ಆರ್ಥಿಕ ಲಾಭ ಪಡೆಯಬಹುದಾಗಿದೆ. ಹೀಗಾಗಿ ಕೆರೆಗಳ ಸುತ್ತಲಿನ ಒತ್ತುವರಿಗಳನ್ನು ತೆರವುಗೊಳಿಸಿ, ಗಡಿ ಕಂಬಗಳನ್ನು ಸ್ಥಾಪಿಸುವುದು. ಹೂಳು ತೆಗೆಸುವುದು ಕೆರೆಯ ಆಳ ಹೆಚ್ಚಿಸಿ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಗ್ರಾಪಂ ಸದಸ್ಯೆ ಗಂಗಮ್ಮ ಶ್ರೀನಿವಾಸಮೂರ್ತಿ ಮಾತನಾಡಿ, ಗ್ರಾಮಸ್ಥರ ಬೇಡಿಕೆಯಂತೆ ಭಕ್ತಿಪುರ ಕೆರೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜನರಕ್ಷಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಸಹಭಾಗಿತ್ವದಲ್ಲಿ ಜೆಸಿಬಿ ಯಂತ್ರದಿಂದ ಕೆರೆಯ ಹೂಳು ತೆಗೆಯಲಾಗುತ್ತಿದ್ದು ಫಲವತ್ತಾದ ಗೋಡುಮಣ್ಣನ್ನುಟ್ರ್ಯಾಕ್ಟರ್‌ವೊಂದಕ್ಕೆ ಕೇವಲ 30 ರು.ಗಳಿಗೆ ನೀಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಭೂಮಿಗಳ ಫಲವತ್ತತೆ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.

ನರೇಗಾ ಕಾಮಗಾರಿ ಸೇರಿದಂತೆ ಕರಡಿಗೌಡನದೊಡ್ಡಿ ಮತ್ತು ಭಕ್ತಿಪುರ ಗ್ರಾಮಗಳಲ್ಲಿ 40 ಲಕ್ಷ ರು. ವೆಚ್ಚದ ಸಿಸಿ ಚರಂಡಿ ಸ್ಲಾಬ್ ಮತ್ತು ಡೆಕ್ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಕೆರೆಯಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಸಂಗ್ರಹಿಸಲು 8 ಅಡಿಯಷ್ಟು ಆಳ ನಿರ್ಮಿಸಲಾಗಿದೆ. ಇದೀಗ ಕೆರೆ ಹೂಳು ತೆಗೆಸುವ ಕಾರ್ಯ ಕೈಗೊಳ್ಳಲಾಗಿದೆ. ಕಿರಿದಾಗಿದ್ದ ಕೆರೆಯ ಏರಿಯನ್ನು 14 ಅಡಿ ವಿಸ್ತರಣೆ ಮಾಡಲಾಗಿದ್ದು ಇದೀಗ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.

ಹಿರಿಯ ಮುಖಂಡ ಉಮಾಶಂಕರ್, ಗ್ರಾಪಂ ಸದಸ್ಯೆ ಮಂಗಳಮ್ಮ ಕಾಳೇಗೌಡ, ಕಾರ್ಯದರ್ಶಿ ಶಶಿಕಿರಣ್, ಮುಖಂಡರಾದ ಕೆ.ಟಿ.ಚಂದ್ರಪ್ಪ, ಕೆ.ವಿ.ತಿಮ್ಮಯ್ಯ, ವೆಂಕಟರಾಜು, ಪ್ರಜ್ವಲ್, ದಿನೇಶ್, ಸಂತೋಷ್, ನಾಗೇಶ್, ಮಹದೇವ್, ಆನಂದ್, ಚಂದ್ರಪ್ಪ, ಶಿವರಾಜು, ಮದನ್, ಓದೇಶ್ ಮತ್ತಿತರರು ಉಪಸ್ಥಿತರಿದ್ದರು.

6ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ತಾಲೂಕನ ಗೋಪಹಳ್ಳಿ ಗ್ರಾಪಂ ವ್ಯಾಪ್ತಿಯ ಕರಡಿಗೌಡನದೊಡ್ಡಿ ಗ್ರಾಮದ ಬಳಿಯಿರುವ ಭಕ್ತಿಪುರ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಗ್ರಾಪಂ ಅಧ್ಯಕ್ಷೆ ಸರೋಜಾ ನಾಗರಾಜು ಭೂಮಿಪೂಜೆ ನೆರವೇರಿಸಿದರು.