ಸಾರಾಂಶ
ಎಲ್ಲಾ ಮೂಲ ಹಳೇ ಮತ್ತು ಹೊಸ ದಾಖಲೆಗಳನ್ನು ಗಣಕೀಕರಣಗೊಳಿಸಿ ಸಂರಕ್ಷಿಸಲಾಗುವುದು,ಇದಲ್ಲದೆ ಸಾರ್ವಜನಿಕರು ತಮ್ಮ ಮೂಲ ದಾಖಲೆಗಳಿಗಾಗಿ ಕಚೇರಿಗೆ ಅಲೆಯದೆ ತಮ್ಮ ಮೊಬೈಲ್‌ನಲ್ಲೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಪಡೆಯಬುದು ಇಂತಹದೊಂದು ಮಹತ್ವವಾದ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ರೈತರ ಭೂ ದಾಖಲೆಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಹಾಗೂ ಸಕಾಲಕ್ಕೆ ಅವರ ಕೈಗೆ ಎಲ್ಲಾ ದಾಖಲೆಗಳು ಸಿಗುವಂತಾಗಲು ಸರ್ಕಾರ ಭೂ ದಾಖಲೆಗಳ ಗಣಕೀಕರಣಗೊಳಿಸಿದ್ದು ಇದರಿಂದ ರೈತರು ಹಾಗೂ ಸಾರ್ವಜನಿಕರು ದಾಖಲೆಗಳಿಗಾಗಿ ಕಚೇರಿಗೆ ಅಲೆಯುವುದು ತಪ್ಪುತ್ತದೆ ಎಂದು ಶಾಸಕ ಎಸ್.ಎನ್.ನಾರಾಯನಸ್ವಾಮಿ ಹೇಳಿದರು.ಪಟ್ಟಣದ ತಾಲೂಕು ಕಚೇರಿಯಲ್ಲಿ ಅಭಿಲೇಖಾಲಯ ಕೊಠಡಿಯಲ್ಲಿ ಭೂ ದಾಖಲೆಗಳ ಗಣಕೀಕರಣಗೊಳಿಸುವ ಭೂ ಸುರಕ್ಷಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು. ಈ ಹಿಂದೆ ರೈತರು ಹಾಗೂ ಸಾರ್ವಜನಿಕರು ತಮ್ಮ ಭೂಮಿಯನ್ನು ಮಾರಾಟ ಮಾಡಲು ಮತ್ತು ಖರೀದಿಸಲು ಹಳೇಯ ಮೂಲ ದಾಖಲೆಗಳನ್ನು ಪಡೆಯಲು ತಿಂಗಳಾನುಗಟ್ಟಲೆ ರೆಕಾರ್ಡ್ ಕೊಠಡಿಗೆ ಅಲೆದರೂ ಸಿಗದೆ ಪರಾಡುತ್ತಿದ್ದರು ಎಂದರು.ದಾಖಲೆಗಳ ಗಣಕೀಕರಣ
ಆದರೆ ಇನ್ನು ಮುಂದೆ ಅಂತಹ ಸ್ಥಿತಿ ಇರುವುದಿಲ್ಲ ಎಲ್ಲಾ ಮೂಲ ಹಳೇ ಮತ್ತು ಹೊಸ ದಾಖಲೆಗಳನ್ನು ಗಣಕೀಕರಣಗೊಳಿಸಿ ಸಂರಕ್ಷಿಸಲಾಗುವುದು,ಇದಲ್ಲದೆ ಸಾರ್ವಜನಿಕರು ತಮ್ಮ ಮೂಲ ದಾಖಲೆಗಳಿಗಾಗಿ ಕಚೇರಿಗೆ ಅಲೆಯದೆ ತಮ್ಮ ಮೊಬೈಲ್‌ನಲ್ಲೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಪಡೆಯಬುದು ಇಂತಹದೊಂದು ಮಹತ್ವವಾದ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ ಇಂತಹ ಹತ್ತಾರು ಜನಪರ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿ ಜನಸಾಮಾನ್ಯರಿಗೆ ಹತ್ತಿರವಾಗುತ್ತಿದೆ. ಈ ಹಿಂದೆ ದಾಖಲೆಗಳನ್ನು ತಿದ್ದುವುದು ಮತ್ತು ದಾಖಲೆಗಳನ್ನು ಕಳುವು ಮಾಡುತ್ತಿದ್ದರು, ಈಗ ಅದಕ್ಕೆ ಸರ್ಕಾರ ಬ್ರೇಕ್ ಹಾಕಿದೆ ಎಂದರು.೧೨೦೦ ಹೊಸ ಸರ್ವೇಯರ್ ನೇಮಕಇದಲ್ಲದೆ ರಾಜ್ಯದಲ್ಲಿ ೧೨೦೦ ಹೊಸ ಸರ್ವೆಯರ್‌ಗಳ್ನು ನೇಮಕ ಮಾಡಲಾಗಿದೆ. ಪ್ರತಿ ತಾಲೂಕಿಗೆ ಇಬ್ಬರನ್ನು ನೇಮಿಸಿ ಹಲವು ವರ್ಷಗಳಿಂದ ಬಾಕಿ ಇರುವ ಸ್ಮಶಾನ, ಕಾಲು ದಾರಿ ಕೆರೆ ಸರ್ವೆ ಪ್ರಕರಣಗಳನ್ನು ಸರ್ವೆ ಮಾಡಿ ಸಮಸ್ಯೆಯನ್ನು ಪರಿಹರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಈ ಇಲಾಖೆಯಲ್ಲಿಯೂ ಎಲ್ಲಾ ದಾಖಲೆಗಳನ್ನು ಡಿಜಿಟಲ್ ಮಾಡುತ್ತಿದೆ, ಇದರಿಂದ ಒಬ್ಬ ಸರ್ವೆಯರ್ ಹತ್ತು ರೈತರ ಭೂಮಿಯನ್ನು ಸರ್ವೆ ಮಾಡಬಹುದಾಗಿದೆ ಎಂದರು.ಹಂತ ಹಂತವಾಗಿ ಕಂದಾಯ ಇಲಾಖೆಯನ್ನು ಅಭಿವೃದ್ದಿಪಡಿಸಿ ಇಲಾಖೆ ಜನಸಾಮಾನ್ಯರಿಗೆ ಹತ್ತಿರವಾಗಲು ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.ತಹಸೀಲ್ದಾರ್ ಕೆ.ಎನ್.ಸುಜಾತ,ಗ್ರೇಡ್ ೨ ತಹಸೀಲ್ದಾರ್ ಗಾಯತ್ರಿ,ಪುರಸಭೆ ಅಧ್ಯಕ್ಷ ಗೋವಿಂದ,ಕೆಡಿಯ ಅಧ್ಯಕ್ಷ ಗೋಪಾಲರೆಡ್ಡಿ,ಶಿರಸ್ತೇದಾರ್ ಪ್ರಭಾಕರನ್ ಇತರರು ಇದ್ದರು.