ಕನ್ನಡಪ್ರಭ ವಾರ್ತೆ ತಾಳಿಕೋಟೆ ವಿವಾಹ ಬಂಧನ ಎಂಬುವುದು ಪವಿತ್ರವಾಗಿದ್ದು, ಪತಿ-ಪತ್ನಿ ಪವಿತ್ರ ಜೀವನದ ಜತೆಗೆ ಸಮಾಜಮುಖಿ ಚಿಂತನೆಗಳತ್ತ ಗಮನ ಹರಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಕರ್ನಾಟಕ ಕಾರ್ಯಕಾರಿಣಿ ಸದಸ್ಯ ದಾರವಾಡದ ಶ್ರೀಧರ ನಾಡಿಗೇರ ಹೇಳಿದರು.
ಕನ್ನಡಪ್ರಭ ವಾರ್ತೆ ತಾಳಿಕೋಟೆ
ವಿವಾಹ ಬಂಧನ ಎಂಬುವುದು ಪವಿತ್ರವಾಗಿದ್ದು, ಪತಿ-ಪತ್ನಿ ಪವಿತ್ರ ಜೀವನದ ಜತೆಗೆ ಸಮಾಜಮುಖಿ ಚಿಂತನೆಗಳತ್ತ ಗಮನ ಹರಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಕರ್ನಾಟಕ ಕಾರ್ಯಕಾರಿಣಿ ಸದಸ್ಯ ದಾರವಾಡದ ಶ್ರೀಧರ ನಾಡಿಗೇರ ಹೇಳಿದರು.ಸೋಮವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗಸಂಘ ಚಾಲಕ ಪ್ರಕಾಶ ಕಟ್ಟಿಮನಿ ಇವರ ಸುಪುತ್ರ ಶ್ರೀನಿವಾಸ-ಲಕ್ಷ್ಮೀ ಇವರ ವಿವಾಹ ಕುರಿತು ಕಾಸ್ಗತೇಶ್ವರ ಮಂಗಲಭವನದಲ್ಲಿ ಏರ್ಪಡಿಸಿದ್ದ ಮಂಗಲನಿದಿ ಸಂಘಕ್ಕೆ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿವಾಹ ಬಂಧನಕ್ಕೆ ಒಳಗಾದ ಮೇಲೆ ಗೃಹಸ್ಥಾಶ್ರಮದಲ್ಲಿ ಪಾದಾರ್ಪಣಾ ಮಾಡಿದಂತಾಗುತ್ತದೆ. ಇದರಿಂದ ಜವಾಬ್ದಾರಿ ಎಂಬುವುದು ಹೆಚ್ಚಾಗುತ್ತದೆ. ಬ್ರಹ್ಮಚಾರಿ, ವಾನಪ್ರಸ್ಥ, ಸನ್ಯಾಸಿ ಈ ಆಶ್ರಮಗಳಲ್ಲಿ ಗೃಹಸ್ಥಾಶ್ರಮವೆಂಬುವುದು ಅತೀವ ಮಹತ್ವ ಪಡೆದಿದೆ ಎಂದರು. ನೂತನ ದಂಪತಿ ಶ್ರೀನಿವಾಸ ಲಕ್ಷ್ಮೀ ಅವರ ಜೀವನ ಸುಸರ್ಜಿತ, ವ್ಯವಸ್ಥಿತವಾಗಿ ಸಾಗಲೆಂದು ಶುಭಹಾರೈಸಿ ಮಂಗಲನಿಧಿ ನೀಡಿದರು. ವಧು ವರರ ಅಕ್ಷತಾರೋಪಣ ಕಾರ್ಯಕ್ರಮವನ್ನು ಶ್ರೀಗಳಾದ ಸಿ.ಎಂ. ಹಿರೇಮಠ ಅವರು ನಡೆಸಿಕೊಟ್ಟರು.
ವಿಭಾಗ ಸಂಘಚಾಲಕ ಚಿದಂಬರ ಭಕ್ಷಿ, ವಿಜಯಪುರ ಜಿಲ್ಲಾ ಸಂಘಚಾಲಕ ರಾಮಸಿಂಗ್ ಹಜೇರಿ, ಪ್ರಾಂತ ಗ್ರಾಮ ವಿಕಾಸ ಪ್ರಮುಖ ದಾಮೋದರ, ಹಿರಿಯ ಸ್ವಯಂ ಸೇವಕ ಪ್ರಭು ಕಡಿ, ಪರಶುರಾಮ ಪವಾರ, ಬಸವರಾಜ ನಂದಿಕೇಶ್ವರ ಮಠ, ಮಲ್ಲಿಕಾರ್ಜುನ ಹಿಪ್ಪರಗಿ, ಶಂಕರಗೌಡ ಪಾಟೀಲ, ತಮ್ಮಣ್ಣ ದೇಶಪಾಂಡೆ, ಶರಣು ಬಿಳೇಬಾವಿ ಹಾಗೂ ತಾಳಿಕೋಟೆ, ಕಲಕೇರಿ ಮತ್ತು ಸ್ವಯಂಸೇವಕರು ಪಾಲ್ಗೊಂಡಿದ್ದರು.ಶ್ರೀಕಾಂತ ಅವರು ದೇಶಭಕ್ತಿಗೀತೆ ಹಾಡಿದರು. ಹಿರಿಯ ಸ್ವಯಂಸೇವಕ ದಿನಕರ ಜೋಷಿ ಸ್ವಾಗತಿಸಿದರು. ಶಿಕ್ಷಕ ಎಸ್.ಎಂ.ಪಾಲ್ಕಿ ನಿರೂಪಿಸಿ ವಂದಿಸಿದರು.