ಭಾರತದ ಅತ್ಯುತ್ತಮ ಕರಕುಶಲ ವಸ್ತುಗಳನ್ನು ತಯಾರಿಸುವ ಕಲೆಯನ್ನು ಉಳಿಸಿ-ಬೆಳೆಸಬೇಕೇಂಬ ಉದೇಶದಿಂದ ಶಾಲಾ ಮಕ್ಕಳ ಮೂಲಕ ತರಬೇತಿ ನೀಡಿ ಅದರ ಮಾಹಿತಿ ನೀಡಲಾಗುವುದು ಎಂದು ಮೈಸೂರಿನ ಕರಕುಶಲತೆ ಉಪ ನಿರ್ದೇಶಕ ಡಿ. ಟಿ. ಮಂಜುಸ್ವಾಮಿ ತಿಳಿಸಿದರು. ಮಧ್ಯವರ್ತಿಗಳ ಹಾವಳಿಯಿಲ್ಲದೆ ಗ್ರಾಹಕರಿಗೆ ನೇರವಾಗಿ ವಸ್ತುಗಳನ್ನು ಮಾರಾಟ ಮಾಡಲು, ದೇಶದ ದೊಡ್ಡ ದೊಡ್ಡ ವಸ್ತುಪ್ರದರ್ಶನ ಮತ್ತು ಮೇಳಗಳಲ್ಲಿ ಉಚಿತ ಅಥವಾ ರಿಯಾಯಿತಿ ದರದಲ್ಲಿ ಮಳಿಗೆಗಳು ನೀಡುತ್ತಾರೆ ಹಾಗೂ ಆರ್ಥಿಕ ನೆರವು. ಸಾಲ. ಸರ್ಕಾರದ ಸಹಾಯಧನ ಕಡಿಮೆ ಬಡ್ಡಿದರದ ಸಾಲ ಮತ್ತು ಆರೋಗ್ಯ ವಿಮೆ ನೀಡುತ್ತಾರೆ. ಅತ್ಯುತ್ತಮ ಕರಕುಶಲ ಕಲಾವಿದರನ್ನು ಗುರುತಿಸಿ ‘ಶಿಲ್ಪ ಗುರು’ ಮತ್ತು ’ರಾಷ್ಟ್ರೀಯ ಪ್ರಶಸ್ತಿ’ಗಳನ್ನು ನೀಡಿ ಗೌರವಿಸಲಾಗುತ್ತದೆ ಎಂದರು.
ಕನ್ನಡಪ್ರಭ ವಾರ್ತೆ ಹಳೇಬೀಡು
ಭಾರತದ ಅತ್ಯುತ್ತಮ ಕರಕುಶಲ ವಸ್ತುಗಳನ್ನು ತಯಾರಿಸುವ ಕಲೆಯನ್ನು ಉಳಿಸಿ-ಬೆಳೆಸಬೇಕೇಂಬ ಉದೇಶದಿಂದ ಶಾಲಾ ಮಕ್ಕಳ ಮೂಲಕ ತರಬೇತಿ ನೀಡಿ ಅದರ ಮಾಹಿತಿ ನೀಡಲಾಗುವುದು ಎಂದು ಮೈಸೂರಿನ ಕರಕುಶಲತೆ ಉಪ ನಿರ್ದೇಶಕ ಡಿ. ಟಿ. ಮಂಜುಸ್ವಾಮಿ ತಿಳಿಸಿದರು.ಇಲ್ಲಿನ ಶ್ರೀಶಾರದ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಮಾತನಾಡುತ್ತ, ಕರಕುಶಲ ವಸ್ತುಗಳನ್ನು ತಯಾರಿಸುವ ಕಲಾವಿದರಿಗೆ ನಾವುಗಳು ಹೆಚ್ಚಿನ ರೀತಿಯಲ್ಲಿ ನೆರವು ನೀಡಬೇಕು. ಕರಕುಶಲತೆ ಏಂದರೆ ಯಾರಾದರೂ ಕೈಯಿಂದ ತಯಾರಿಸುವ ವಸ್ತುಗಳು. ಉದಾಹರಣೆಗೆ ಮರದ ಗೊಂಬೆಗಳು (ಚನ್ನಪಟ್ಟಣದ ಗೊಂಬೆಗಳಂತೆ), ಕಲ್ಲಿನ ಕೆತ್ತನೆ, ಮಣ್ಣಿನ ಮಡಿಕೆಗಳು, ಬಿದಿರಿನ ಬುಟ್ಟಿಗಳು ಅಥವಾ ಕಸೂತಿ ವಸ್ತುಗಳು. ನಮ್ಮ ವಿಭಾಗದಲ್ಲಿ ಈ ಸೇವಾ ಕೇಂದ್ರವು ಕಾರ್ಯನಿರ್ವಹಿಸುತ್ತಿರುವ ಮೈಸೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳ (ಹಾಸನ, ಮಂಡ್ಯ, ಚಾಮರಾಜನಗರ ಇತ್ಯಾದಿ) ಕುಶಲಕರ್ಮಿಗಳಿಗೆ ಸ್ಥಳೀಯ ಮಟ್ಟದಲ್ಲಿ ಮಾರ್ಗದರ್ಶನ ನೀಡುತ್ತ ಈ ಕಲಾವಿದರಿಗೆ ಸರ್ಕಾರಿ ಗುರುತಿನ ಚೀಟಿ, ಕಲಾವಿದರ ಹೆಸರನ್ನು ನೋಂದಾಯಿಸಿಕೊಂಡು, ಅವರು ನಿಜವಾದ ಕರಕುಶಲ ಕರ್ಮಿಗಳು ಎಂದು ದೃಢೀಕರಿಸುವ ಸರ್ಕಾರಿ ಐಡಿ ನೀಡುತ್ತವೆ ಹಾಗೂ ಹೊಸ ವಿನ್ಯಾಸಗಳ ತರಬೇತಿ, ಇಂದಿನ ಕಾಲಕ್ಕೆ ತಕ್ಕಂತೆ ಹೊಸ ವಿನ್ಯಾಸಗಳ ಕೆಲಸವನ್ನು ವೇಗವಾಗಿ ಮತ್ತು ಇನ್ನಷ್ಟು ಅಚ್ಚುಕಟ್ಟಾಗಿ ಮಾಡಲು ಬೇಕಾಗುವ ಸಲಕರಣೆಗಳನ್ನು ಸರ್ಕಾರದಿಂದ ಉಚಿತವಾಗಿ ಕೊಡಿಸುತ್ತಾರೆ. ವಸ್ತುಗಳ ಮಾರಾಟಕ್ಕೆ ವೇದಿಕೆ. ಮಧ್ಯವರ್ತಿಗಳ ಹಾವಳಿಯಿಲ್ಲದೆ ಗ್ರಾಹಕರಿಗೆ ನೇರವಾಗಿ ವಸ್ತುಗಳನ್ನು ಮಾರಾಟ ಮಾಡಲು, ದೇಶದ ದೊಡ್ಡ ದೊಡ್ಡ ವಸ್ತುಪ್ರದರ್ಶನ ಮತ್ತು ಮೇಳಗಳಲ್ಲಿ ಉಚಿತ ಅಥವಾ ರಿಯಾಯಿತಿ ದರದಲ್ಲಿ ಮಳಿಗೆಗಳು ನೀಡುತ್ತಾರೆ ಹಾಗೂ ಆರ್ಥಿಕ ನೆರವು. ಸಾಲ. ಸರ್ಕಾರದ ಸಹಾಯಧನ ಕಡಿಮೆ ಬಡ್ಡಿದರದ ಸಾಲ ಮತ್ತು ಆರೋಗ್ಯ ವಿಮೆ ನೀಡುತ್ತಾರೆ. ಅತ್ಯುತ್ತಮ ಕರಕುಶಲ ಕಲಾವಿದರನ್ನು ಗುರುತಿಸಿ ‘ಶಿಲ್ಪ ಗುರು’ ಮತ್ತು ’ರಾಷ್ಟ್ರೀಯ ಪ್ರಶಸ್ತಿ’ಗಳನ್ನು ನೀಡಿ ಗೌರವಿಸಲಾಗುತ್ತದೆ. ನಮ್ಮ ಸಂಸ್ಥೆಯಿಂದ ಪ್ರತಿ ವರ್ಷವು ೮ ಜಿಲ್ಲೆಗಳಿಂದ ಪ್ರತಿ ಜಿಲ್ಲೆಗೆ ಒಂದು ಶಾಲೆಯನ್ನು ಆಯ್ಕೆ ಮಾಡಿಕೊಂಡು ಆಶಾಲೆಯ ಮಕ್ಕಳಿಗೆ ಮೂರು ದಿನಗಳ ಉಚಿತ ತರಬೇತಿಯನ್ನು ನೀಡುತ್ತವೆ ಇದರಲ್ಲಿ ಇಲ್ಲಿನ ಮಕ್ಕಳಿಗೆ ೧೮ ವರ್ಷಆದ ಮೇಲೆ ನಮ್ಮ ಸಂಸ್ಥಗೆ ಬಂದು ಸೇರುವ ಅವಕಾಶ ಇರುತ್ತದೆ ಎಂದು ತಿಳಿಸಿದರು.ಈ ವೇದಿಕೆಯಲ್ಲಿ ಮಧುಸುಧನ್ ಜಂಟಿನಿರ್ದೇಶಕ, ಶಾಲೆಯ ಅಧ್ಯಕ್ಷ ಯತೀಶ್, ಮುಖ್ಯಶಿಕ್ಷಕಿ ನಂದಿನಿ, ಸ್ಥಳೀಯ ಕರಕುಶಲ ಕಲಾವಿದ ಮೂರ್ತಿ ಮತ್ತು ಎಲ್ಲಾ ವಿಭಾಗದ ಕರಕುಶಲತೆಯ ತರಬೇತಿದಾರರು ಇದ್ದರು.