ಇಲ್ಲಿನ ಶ್ರೀಮನ್ಮಧ್ವ ಸಿದ್ಧಾಂತ ಪ್ರಬೋಧಕ ಸಂಸ್ಕೃತ ಸ್ನಾತಕ- ಸ್ನಾತಕೋತ್ತರ ಅಧ್ಯಯನ ಕೇಂದ್ರದ 2026 - 27ನೇ ಸಾಲಿನ ಶೈಕ್ಷಣಿಕ ವರ್ಷದ ಪಠ್ಯೇತರ ಚಟುವಟಿಕೆಗಳ ‘ಪ್ರತಿಭಾ ಪ್ರದೀಪಿನೀ’ಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿರುವ ಭಾರತ ಸರ್ಕಾರದ ‘ಜ್ಞಾನಭಾರತೀ ಮಿಷನ್’ನ ಕುರಿತು ಉಡುಪಿ ಜಿಲ್ಲಾ ಮಟ್ಟದ ಜ್ಞಾನ ಭಾರತೀ ಮಿಷನ್‌ನ ಪ್ರಧಾನ ಸಂಚಾಲಕ ಡಾ. ಬಿ. ಗೋಪಾಲಾಚಾರ್ಯ ಉಪನ್ಯಾಸ ನೀಡಿದರು.
ಉಡುಪಿ: ಇಲ್ಲಿನ ಶ್ರೀಮನ್ಮಧ್ವ ಸಿದ್ಧಾಂತ ಪ್ರಬೋಧಕ ಸಂಸ್ಕೃತ ಸ್ನಾತಕ- ಸ್ನಾತಕೋತ್ತರ ಅಧ್ಯಯನ ಕೇಂದ್ರದ 2026 - 27ನೇ ಸಾಲಿನ ಶೈಕ್ಷಣಿಕ ವರ್ಷದ ಪಠ್ಯೇತರ ಚಟುವಟಿಕೆಗಳ ‘ಪ್ರತಿಭಾ ಪ್ರದೀಪಿನೀ’ಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿರುವ ಭಾರತ ಸರ್ಕಾರದ ‘ಜ್ಞಾನಭಾರತೀ ಮಿಷನ್’ನ ಕುರಿತು ಉಡುಪಿ ಜಿಲ್ಲಾ ಮಟ್ಟದ ಜ್ಞಾನ ಭಾರತೀ ಮಿಷನ್‌ನ ಪ್ರಧಾನ ಸಂಚಾಲಕ ಡಾ. ಬಿ. ಗೋಪಾಲಾಚಾರ್ಯ ಉಪನ್ಯಾಸ ನೀಡಿದರು.
ಜ್ಞಾನ ಭಂಡಾರವು ಹಿರಿಯರ ಕಠಿಣ ಪರಿಶ್ರಮ, ಅವುಗಳು ತಾಡವಾಲೆಯ ಮೂಲಕ ನಮ್ಮ ಪೀಳಿಗೆಗೆ ಬಂದಿದೆ. ಅವುಗಳ ರಕ್ಷಣೆ ನಮ್ಮ ಮಹತ್ತರವಾಗಿರುವ ಜವಾಬ್ದಾರಿ ಎಂದು ವಿದ್ಯಾರ್ಥಿಗಳಿಗೆ ಪ್ರಾಚೀನ ತಾಡವಾಲೆ ಗ್ರಂಥಗಳ ಸಂರಕ್ಷಣೆ ಕುರಿತಾಗಿ ಜಾಗೃತಿಯನ್ನು ಮೂಡಿಸಿದರು.ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಡಿ. ಅಮೃತೇಶಾಚಾರ್ಯರು ಅಧ್ಯಕ್ಷತೆ ವಹಿಸಿ ವ್ಯುತ್ಪತ್ತಿ ಮತ್ತೆ ಪ್ರತಿಭೆಯ ಸ್ವರೂಪವನ್ನು ತಿಳಿಸಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಪ್ರೇರಣಾದಾಯಕ ನುಡಿಗಳನ್ನಾಡಿದರು. ಅಭ್ಯಾಗತರಾಗಿ ವಿದ್ವಾಂಸ ಪ್ರೊ. ಸತ್ಯನಾರಾಯಣ ವಿ. ರಾವ್ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನಾಡಿದರು. ಪ್ರಹ್ಲಾದ ಅವರು ಸ್ವಾಗತಿಸಿದರು. ಚಿದಾನಂದ ನಾಯಕ್ ವಂದಿಸಿದರು. ಹೇಮಂತಕೃಷ್ಣ ಕಾರ್ಯಕ್ರಮ ನಿರೂಪಿಸಿದರು.