ಸಾರಾಂಶ
ಮಾವುತರು ಆನೆಗಳನ್ನು ಸಾಕುವಲ್ಲಿ ಹಾಗೂ ದಸರಾ ಜಂಬೂ ಸವಾರಿ ಯಶಸ್ವಿಯಾಗಿ ನೆರವೇರಿಸಲು ನೀಡುತ್ತಿರುವ ನಿಸ್ವಾರ್ಥ ಸೇವೆ
ಕನ್ನಡಪ್ರಭ ವಾರ್ತೆ ಮೈಸೂರುರೋಟರಿ ಸೆಂಟ್ರಲ್ ಮೈಸೂರು ಅಧ್ಯಕ್ಷ ಆಂಟೋನಿ ಮೋಸಸ್ ಹಾಗೂ ಸದಸ್ಯೆ ಜ್ಯೋತಿ ಅಶೋಕ್ ಅವರ ನೇತೃತ್ವದಲ್ಲಿ ಕ್ಲಬ್ ಸದಸ್ಯರು ಸೇರಿ ಮೈಸೂರು ಅರಮನೆ ಆನೆಗಳ ಶಿಬಿರದಲ್ಲಿ ಒಟ್ಟು 55 ಸೌರ ದೀಪಗಳನ್ನು ದಸರಾ ಆನೆಗಳ ಮಾವುತರಿಗೆ ವಿತರಿಸಿದರು.ಸಮಾರಂಭದಲ್ಲಿ ಮಾವುತರು ಆನೆಗಳನ್ನು ಸಾಕುವಲ್ಲಿ ಹಾಗೂ ದಸರಾ ಜಂಬೂ ಸವಾರಿ ಯಶಸ್ವಿಯಾಗಿ ನೆರವೇರಿಸಲು ನೀಡುತ್ತಿರುವ ನಿಸ್ವಾರ್ಥ ಸೇವೆಯನ್ನು ಸ್ಮರಿಸಲಾಯಿತು. ಸೌರ ದೀಪಗಳ ವಿತರಣೆ ಮೂಲಕ, ವಿಶೇಷವಾಗಿ ಕಾಡು ಪ್ರದೇಶಗಳಲ್ಲಿ ವಾಸಿಸುವ ಮಾವುತ ಕುಟುಂಬಗಳ ದೈನಂದಿನ ಜೀವನ ಸುಧಾರಿಸಲು ನೆರವಾಗಲಿದೆ ಎಂದು ತಿಳಿಸಿದರು.