ನಾ ಕಂಡ... ಜೀವನಾರೋಗ್ಯ ಪುಸ್ತಕ ಲೋಕಾರ್ಪಣೆ

| Published : Apr 09 2024, 12:45 AM IST

ಸಾರಾಂಶ

ಜೀವನಾರೋಗ್ಯ ಪುಸ್ತಕವು ಆರೋಗ್ಯವನ್ನು ಸಮರ್ಪಕವಾಗಿ ನೋಡಿಕೊಳ್ಳಲು ಒಂದು ಕೈಗನ್ನಡಿಯಾಗಿದೆ. ಆರೋಗ್ಯವೇ ಭಾಗ್ಯ ಎಂಬ ನುಡಿಯಂತೆ ಆರೋಗ್ಯಕ್ಕೆ ಒಟ್ಟು ನೀಡಿ, ಮಾನಸಿಕ ನೆಮ್ಮದಿಯ ಜೊತೆಗೆ ದೈಹಿಕವಾಗಿ ನಾವು ಒಳ್ಳೆಯ ಆಹಾರ ಸೇವನೆ ಅಗತ್ಯ

ಕನ್ನಡಪ್ರಭ ವಾರ್ತೆ ಮೈಸೂರು

ವಿಶ್ವಮಾನವ ಪ್ರಕಾಶನವು ಹೊರ ತಂದಿರುವ ನಿವೃತ್ತ ಪ್ರಾಂಶುಪಾಲ ಕೆ.ಎ. ದಿವಾಕರ್ ಅವರ ನಾ ಕಂಡ... ಜೀವನಾರೋಗ್ಯ ಎಂಬ ಪುಸ್ತಕವನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಸೋಮವಾರ ರಾಮಕೃಷ್ಣನಗರದ ವಿಶ್ವಮಾನವ ಶಾಲೆಯ ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು, ಜೀವನಾರೋಗ್ಯ ಪುಸ್ತಕವು ಆರೋಗ್ಯವನ್ನು ಸಮರ್ಪಕವಾಗಿ ನೋಡಿಕೊಳ್ಳಲು ಒಂದು ಕೈಗನ್ನಡಿಯಾಗಿದೆ. ಆರೋಗ್ಯವೇ ಭಾಗ್ಯ ಎಂಬ ನುಡಿಯಂತೆ ಆರೋಗ್ಯಕ್ಕೆ ಒಟ್ಟು ನೀಡಿ, ಮಾನಸಿಕ ನೆಮ್ಮದಿಯ ಜೊತೆಗೆ ದೈಹಿಕವಾಗಿ ನಾವು ಒಳ್ಳೆಯ ಆಹಾರ ಸೇವನೆ ಅಗತ್ಯ ಎಂದು ತಿಳಿಸಿದರು.

ನಿವೃತ್ತ ನ್ಯಾಯಾಧೀಶರಾದ ಆರ್.ಜೆ. ಸತೀಶ್ ಸಿಂಗ್, ಲೇಖಕ ಕೆ.ಎ. ದಿವಾಕರ್, ಸಂಸ್ಥಾಪಕರಾದ ಬಿ.ಕೆ. ಚಂದ್ರಶೇಖರೇಗೌಡ, ಮುಖ್ಯೋಪಾದ್ಯಾಯಿನಿ ಹಾಗೂ ಶಿಕ್ಷಕರು ಇದ್ದರು.