ಸಾರಾಂಶ
ಮಲೇಬೆನ್ನೂರು ಸಮೀಪದ ಕುಂಬಳೂರು ಮೂಲದ ಪೊಲೀಸ್ ಅಧಿಕಾರಿ ಎಂ. ಮುರುಗೇಂದ್ರಯ್ಯ ಅವರ ಕರ್ತವ್ಯನಿಷ್ಠೆಗೆ ಪೂರಕವಾಗಿ ರಾಷ್ಟ್ರಪತಿಗಳ ಪದಕ ಲಭಿಸಿದೆ. ಶನಿವಾರ ರಾಜಭವನದಲ್ಲಿ ಜರುಗಿದ ವಿಶೇಷ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಂದ ಪದಕ ಸ್ವೀಕರಿಸಿದ್ದಾರೆ.
- ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ರಿಂದ ಪದಕ ಪ್ರದಾನ - - -
ಮಲೇಬೆನ್ನೂರು: ಮಲೇಬೆನ್ನೂರು ಸಮೀಪದ ಕುಂಬಳೂರು ಮೂಲದ ಪೊಲೀಸ್ ಅಧಿಕಾರಿ ಎಂ. ಮುರುಗೇಂದ್ರಯ್ಯ ಅವರ ಕರ್ತವ್ಯನಿಷ್ಠೆಗೆ ಪೂರಕವಾಗಿ ರಾಷ್ಟ್ರಪತಿಗಳ ಪದಕ ಲಭಿಸಿದೆ. ಶನಿವಾರ ರಾಜಭವನದಲ್ಲಿ ಜರುಗಿದ ವಿಶೇಷ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಂದ ಪದಕ ಸ್ವೀಕರಿಸಿದರು.ಕುಂಬಳೂರು ಗ್ರಾಮದ ದಿವಂಗತ ಎಂ.ಚನ್ನಯ್ಯ ಹಾಗೂ ಕೊಟ್ರಮ್ಮ ದಂಪತಿ ಪುತ್ರರಾಗಿರುವ ಎಂ. ಮುರುಗೇಂದ್ರಯ್ಯ ಅವರು ಪ್ರಸ್ತುತ ಬೆಂಗಳೂರಿನ ಸಂಪಿಗೆಹಳ್ಳಿ ಉಪ ವಿಭಾಗದ ಸಹಾಯಕ ಪೋಲಿಸ್ ಆಯುಕ್ತರಾಗಿದ್ದಾರೆ.
ರಾಜಭವನದಲ್ಲಿ ಜರುಗಿದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಸಮ್ಮುಖ ರಾಜ್ಯಪಾಲರಿಂದ ರಾಷ್ಟ್ರಪತಿ ಪದಕ ಮತ್ತು ೨೦೨೦ರ ಗುಪ್ತಚರ ಮಾಹಿತಿ ಸಂಗ್ರಹಣೆಗಾಗಿ ಕೇಂದ್ರ ಗೃಹ ಸಚಿವರ ಕುಶಲತಾ ಪದಕ ಸ್ವೀಕರಿಸಿದರು.ಎಂ.ಮುರುಗೇಂದ್ರಯ್ಯ ಅವರು ಕುಂಬಳೂರಿನ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಚಿತ್ರದುರ್ಗದ ನವೋದಯ ಶಾಲೆಯಲ್ಲಿ ಪ್ರೌಢ ಮತ್ತು ಪಿಯು ಶಿಕ್ಷಣ, ಮೈಸೂರಲ್ಲಿ ಪದವಿ, ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಪಡೆದು ೨೦೦೧ರಲ್ಲಿ ಆರಕ್ಷಕ ಇಲಾಖೆಯಲ್ಲಿ ಉಪನಿರೀಕ್ಷಕರಾಗಿ ಕರ್ತವ್ಯಕ್ಕೆ ನೇಮಕಗೊಂಡಿದ್ದರು. ಉಡುಪಿ, ಹಾಸನ, ದಕ್ಷಿಣ ಕನ್ನಡ, ಮಂಡ್ಯ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವಿಗಳು.
೨೦೦೮ರಲ್ಲಿ ವೃತ್ತ ನಿರೀಕ್ಷರಾಗಿ ಬಡ್ತಿ ಪಡೆದು ರಾಜ್ಯ ಗುಪ್ತಚರ ಇಲಾಖೆ, ಹಾವೇರಿ, ಬೆಳಗಾವಿ, ರಾಯಚೂರಲ್ಲಿ ವೃತ್ತ ನಿರೀಕ್ಷಕ, ಅನಂತರ ನಗರ ಅಪರಾಧ ವಿಭಾಗದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿ ೨೦೧೧ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ, ಇಸ್ರೇಲಿ ಭದ್ರತಾ ಸಂಸ್ಥೆಯ ಪದಕವನ್ನು ಪಡೆದು ತಮ್ಮ ಘನತೆ ಹೆಚ್ಚಿಸಿಕೊಂಡ ಅಧಿಕಾರಿಯಾಗಿದ್ದಾರೆ.ರಾಷ್ಟ್ರಪತಿಗಳ ಪದಕ ಪಡೆದು ತಂದೆ. ತಾಯಿ, ಪೊಲೀಸ್ ಇಲಾಖೆ ಹಾಗೂ ಇಡೀ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಅವರ ಸೇವೆ, ಸಾಧನೆ ಬೇರೆಯವರಿಗೂ ಮಾದರಿಯಾಗಿದೆ.
- - --ಚಿತ್ರ-೧.ಜೆಪಿಜಿ: ರಾಜ್ಯಪಾಲರಿಂದ ಮುರುಗೇಂದ್ರಯ್ಯ ಅವರು ರಾಷ್ಟ್ರಪತಿ ಪದಕ ಸ್ವೀಕರಿಸಿದರು.
-ಚಿತ್ರ-೨. ಕೇಂದ್ರ ಗೃಹ ಸಚಿವರ ಪದಕ.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))