ಸಾರಾಂಶ
ಇಂದಿರಾ ಗಾಂಧಿ ಈ ಹಿಂದೆಯೇ ಪಾರ್ಲಿಮೆಂಟ್ ನಲ್ಲಿ ಆರ್ ಎಸ್ಎಸ್ ಗುರೂಜಿಗೆ ಸಂತಾಪ ಸೂಚನೆ ಮಾಡಿದ್ದರು
ಕನ್ನಡಪ್ರಭ ವಾರ್ತೆ ಮೈಸೂರು
ಆರ್ ಎಸ್ಎಸ್ ಮೇಲೆ ಕಡಿವಾಣ ಹಾಕಬೇಕು ಅಂತ ಸರ್ಕಾರ ಹೊರಟಿತ್ತು. ಅದಕ್ಕೆ ನ್ಯಾಯಾಲಯ ತಡೆಯಾಜ್ಞೆ ಕೊಟ್ಟಿದೆ ಎಂದು ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.ನಗರ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ ಎಸ್ಎಸ್ ಗೆ ನಿರ್ಬಂಧ ಹೇರುವುದಕ್ಕೆ ಹೋಗಬೇಡಿ. ಇಂದಿರಾ ಗಾಂಧಿ ಈ ಹಿಂದೆಯೇ ಪಾರ್ಲಿಮೆಂಟ್ ನಲ್ಲಿ ಆರ್ ಎಸ್ಎಸ್ ಗುರೂಜಿಗೆ ಸಂತಾಪ ಸೂಚನೆ ಮಾಡಿದ್ದರು. ದೊಣ್ಣೆ ಹಿಡಿದುಕೊಂಡು ಆಕ್ಟಿವಿಟಿ ಮಾಡ್ತಾರೆಂದು ನಿರ್ಬಂಧ ಹೇರಲು ಹೊರಟಿದ್ದಾರೆ. ಆದರೆ, ನ್ಯಾಯಾಲಯದ ತೀರ್ಪು ಖುಷಿ ಕೊಟ್ಟಿದೆ, ಇದು ಸ್ವಾಗತಾರ್ಹ ಎಂದರು.
ಮಲ್ಲಿಕಾರ್ಜುನ್ ಖರ್ಗೆ ಈ ಹಿಂದೆ ಆರ್ ಎಸ್ಎಸ್ ಕಾರ್ಯಕ್ರಮಕ್ಕೆ ಸಪೋರ್ಟ್ ಮಾಡಿದ್ದರು. ಆರ್ ಎಸ್ಎಸ್ ಬಗ್ಗೆ ಈಗ ಪ್ರಿಯಾಂಕ್ ಖರ್ಗೆ ಮಾತನಾಡುತ್ತಿದ್ದಾರೆ. ಆದರೆ, ಮಲ್ಲಿಕಾರ್ಜುನ್ ಖರ್ಗೆ ಒಂದೇ ಒಂದು ಮಾತನಾಡಿಲ್ಲ. ಇದರ ಅರ್ಥ ಆರ್ ಎಸ್ಎಸ್ ನ ಒಳ್ಳೆಯ ಕೆಲಸಗಳು ಮಲ್ಲಿಕಾರ್ಜುನ ಖರ್ಗೆಗೆ ಗೊತ್ತು ಎಂದು ಅವರು ಹೇಳಿದರು.----
ಬಾಕ್ಸ್...ಯತೀಂದ್ರ ಹೇಳಿಕೆಗೆ ಖಂಡನೆ
ಚುನಾವಣಾ ಆಯೋಗ ಹಾಗೂ ಚುನಾವಣಾ ಆಯುಕ್ತರ ವಿರುದ್ಧ ಡಾ. ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಖಂಡಿಸಿದ ಶಾಸಕ ಟಿ.ಎಸ್. ಶ್ರೀವತ್ಸ ಅವರು, ಇವರು ಅಧಿಕಾರಕ್ಕೆ ಬಂದಾಗ ಮಾತ್ರ ಯಾವುದೇ ಚಕಾರ ಎತ್ತುವುದಿಲ್ಲ. ಸೋಲುಂಟಾದಾಗ ಚುನಾವಣಾ ಆಯೋಗದ ಆರೋಪ ಮಾಡುವುದು ಸರಿಯಲ್ಲ ಎಂದರು.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇವರು 130 ಹೆಚ್ಚು ಕ್ಷೇತ್ರಗಳಲ್ಲಿ ಜಯಗಳಿಸಿ ಅಧಿಕಾರಕ್ಕೆ ಬಂದಿದ್ದಾರೆ. ಆಗ ವೋಟಿಂಗ್ ಮೆಷಿನ್ ಸರಿಯಾಗಿದ್ವಾ? ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ವೋಟಿಂಗ್ ಮೆಷಿನ್ ಸರಿಯಾಗಿಲ್ವಾ? ಪದೇ ಪದೇ ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡ್ತಿದ್ದಾರೆ. ಈ ಮೂಲಕ ಚುನಾವಣಾ ಆಯೋಗದ ಕಾರ್ಯಕ್ಷಮತೆಯನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
-----ಕೋಟ್...
ಈಗಿನ ಪರಿಸ್ಥಿತಿ ನೋಡಿದ್ರೇ ಖಂಡಿತ ನವೆಂಬರ್ ಕ್ರಾಂತಿ ಆಗುತ್ತದೆ. ಅಂತಹ ಬೆಳವಣಿಗೆಗಳು ಕಾಣುತ್ತಿವೆ. ನಮ್ಮ ಜಿಲ್ಲೆಯ ಸಿಎಂ ಬದಲಾವಣೆ ಆಗುವ ತರಹ ಕಾಣ್ತಿದೆ. ನವೆಂಬರ್ ಕ್ರಾಂತಿಯಂತೂ ಆಗಿಯೇ ಆಗುತ್ತದೆ.- ಟಿ.ಎಸ್. ಶ್ರೀವತ್ಸ, ಶಾಸಕರು
;Resize=(128,128))
;Resize=(128,128))
;Resize=(128,128))