ಸಾಮೂಹಿಕ ವಿವಾಹದಿಂದ ಆರ್ಥಿಕ ಹೊರೆಗೆ ತಡೆ: ಡಾ. ಎಚ್‌.ಕೆ. ಪಾಟೀಲ

| Published : Sep 29 2025, 01:05 AM IST

ಸಾಮೂಹಿಕ ವಿವಾಹದಿಂದ ಆರ್ಥಿಕ ಹೊರೆಗೆ ತಡೆ: ಡಾ. ಎಚ್‌.ಕೆ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ಕುಟುಂಬಗಳಿಗೆ ಸಾಮೂಹಿಕ ವಿವಾಹ ಸಹಕಾರಿಯಾಗಿದೆ. ಉತ್ತಮ ಸಾಮಾಜಿಕ ಕಾರ್ಯವನ್ನು ಮಾಡಿದ ಆದಿಶಕ್ತಿ ವಿವಿಧೋದ್ದೇಶಗಳ ಟ್ರಸ್ಟ್‌ ಪದಾಧಿಕಾರಿಗಳ ಹಾಗೂ ಸಮಸ್ತ ಸದ್ಭಕ್ತ ಮಂಡಳಿಯ ಕಾರ್ಯ ಶ್ಲಾಘನೀಯ.

ಮುಳಗುಂದ: ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವುದರಿಂದ ಆರ್ಥಿಕ ಹೊರೆ ತಡೆಯಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಕೆ. ಪಾಟೀಲ ತಿಳಿಸಿದರು.ಸಮಿಪದ ಸೊರಟೂರ ಗ್ರಾಮದ ಶ್ರೀದುರ್ಗಾ ದೇವಿ ದೇವಸ್ಥಾನದ ಸಮುದಾಯ ಭವನದಲ್ಲಿ ಭಾನುವಾರ ದಸರಾ ಉತ್ಸವ ಅಂಗವಾಗಿ ಆದಿಶಕ್ತಿ ವಿವಿಧೋದ್ಧೇಶಗಳ ಟ್ರಸ್ಟ್ ಹಾಗೂ ಸಮಸ್ತ ಸದ್ಭಕ್ತ ಮಂಡಳಿಯಿಂದ ಜರುಗಿದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದರು.

ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ಕುಟುಂಬಗಳಿಗೆ ಸಾಮೂಹಿಕ ವಿವಾಹ ಸಹಕಾರಿಯಾಗಿದೆ. ಉತ್ತಮ ಸಾಮಾಜಿಕ ಕಾರ್ಯವನ್ನು ಮಾಡಿದ ಆದಿಶಕ್ತಿ ವಿವಿಧೋದ್ದೇಶಗಳ ಟ್ರಸ್ಟ್‌ ಪದಾಧಿಕಾರಿಗಳ ಹಾಗೂ ಸಮಸ್ತ ಸದ್ಭಕ್ತ ಮಂಡಳಿಯ ಕಾರ್ಯ ಶ್ಲಾಘನೀಯ ಎಂದರು.

ಇಲ್ಲಿ ಮದುವೆ ಮಾಡಿಕೊಂಡ ದಂಪತಿಗಳಿಗೆ ಊರಿನ ದೈವವೇ ಆರ್ಶೀವದಿಸುತ್ತದೆ. ಅವರ ಖರ್ಚು- ವೆಚ್ಚ ಪೂರ್ಣ ಕಡಿತವಾಗಿ, ಸಾಲ ಮಾಡುವುದನ್ನು ತಪ್ಪಿಸಿ ಸಂತೋಷದಿಂದ ಮದುವೆಯಾಗುವ ಪದ್ಧತಿಯೇ ಸಾಮೂಹಿಕ ವಿವಾಹದ ವಿಶೇಷತೆ. ಇದನ್ನು ಮಾಡಿದ ಸಂಘಟಕರಿಗೆ ಅಭಿನಂದಿಸುತ್ತೇನೆ ಎಂದರು.

ಈ ವೇಳೆ ಸಚಿವರನ್ನು ಸನ್ಮಾನಿಸಲಾಯಿತು. ಸಾನ್ನಿಧ್ಯವನ್ನು ಮಹಾಲಿಂಗಪುರದ ಚನ್ನವೀರ ಸ್ವಾಮಿಗಳು, ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮಿಗಳು, ಸೊರಟೂರ- ಗುಡ್ಡದಾನೇಶ್ವರಿ ಅನ್ನದಾನೇಶ್ವರ ಶಾಖಾಮಠದ ಶಿವಯೋಗಿಶ್ವರ ಸ್ವಾಮಿಗಳು, ಸೊರಟೂರ ಓಂಕಾರೇಶ್ವರಗಿರಿ ಫಕೀರೇಶ್ವರ ಶಿವಾಚಾರ್ಯ ಶ್ರೀಗಳು ಹಾಗೂ ವರವಿಯ ಮೌನೇಶ್ವರ ಸ್ವಾಮಿಗಳು ವಹಿಸಿದ್ದರು. ಮಾಜಿ ತಾಪಂ ಅಧ್ಯಕ್ಷ ಬಿ.ಆರ್. ದೇವರೆಡ್ಡಿ, ಶಿದ್ದಲಿಂಗೇಶ ಪಾಟೀಲ, ಅಶೋಕ ಮಂದಾಲಿ, ಶಿವಾನಂದ ಮಾದಣ್ಣವರ, ಸಿ.ಬಿ. ಸಂಶಿ, ಮಹಾದೇವಪ್ಪ ಮಾದಣ್ಣವರ, ರಾಮಣ್ಣ ಕಮ್ಮಾರ, ರಮೇಶ ಓಂಕಾರಿ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಇದ್ದರು.