ಸೂಕ್ತ ಚಿಕಿತ್ಸೆಯಿಂದ ಕ್ಷಯರೋಗ ನಿವಾರಣೆ: ಡಾ. ಆರ್.ವಿ. ನಾಯಕ

| Published : Feb 11 2024, 01:50 AM IST

ಸೂಕ್ತ ಚಿಕಿತ್ಸೆಯಿಂದ ಕ್ಷಯರೋಗ ನಿವಾರಣೆ: ಡಾ. ಆರ್.ವಿ. ನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ತೂಕದ ಇಳಿಕೆ, ಕಫ್‌ದಲ್ಲಿ ರಕ್ತ ಬರುವುದು, ರಾತ್ರಿ ವೇಳೆ ಜ್ವರ ಕಾಣಿಸಿಕೊಳ್ಳುವುದು, ಎರಡು ವಾರಕ್ಕಿಂತ ಹೆಚ್ಚಿನ ಕೆಮ್ಮು ಕ್ಷಯರೋದ ಲಕ್ಷಣಗಳಾಗಿವೆ.

ಕನ್ನಡಪ್ರಭ ವಾರ್ತೆ ಸುರಪುರ

ಕ್ಷಯರೋಗ(ಟಿಬಿ) ಗುಣಮಖವಾಗದ ರೋಗವಲ್ಲ. ಸೂಕ್ತ ಚಿಕಿತ್ಸೆ ವೈದ್ಯರಿಂದ ಪಡೆದರೆ ನಿವಾರಣೆಯಾಗುತ್ತದೆ. ರೋಗ ಬರುವ ಮೊದಲೇ ಚಿಕಿತ್ಸೆ ಪಡೆದುಕೊಳ್ಳುವ ಜಾಣತನ ಕಂಡಕೊಳ್ಳಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಆರ್.ವಿ. ನಾಯಕ ಹೇಳಿದರು.

ನಗರದ ನಗರ ಆರೋಗ್ಯ ಪ್ರಾಥಮಿಕ ಕೇಂದ್ರದ ಸಭಾಂಗಣದಲ್ಲಿ ನಗರಸಭೆ ಪೌರಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಕ್ಷಯ ರೋಗ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತೂಕದ ಇಳಿಕೆ, ಕಫ್‌ದಲ್ಲಿ ರಕ್ತ ಬರುವುದು, ರಾತ್ರಿ ವೇಳೆ ಜ್ವರ ಕಾಣಿಸಿಕೊಳ್ಳುವುದು, ಎರಡು ವಾರಕ್ಕಿಂತ ಹೆಚ್ಚಿನ ಕೆಮ್ಮು ಕ್ಷಯರೋದ ಲಕ್ಷಣಗಳಾಗಿವೆ. ಇವುಗಳು ಕಂಡುಬಂದಲ್ಲಿ ಸಾರ್ವಜನಿಕ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಕಫ್ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು ಎಂದರು.

ಗ್ರಾಮೀಣ ಮತ್ತು ನಗರ ಭಾಗದಲ್ಲಿ ಕಾರ್ಯ ನಿರ್ವಹಿಸುವ ನಗರಸಭೆ ಕಾರ್ಮಿಕರಿಗೆ ಕ್ಷಯರೋಗದ ಕುರಿತು ಭಯವಿರಬಾರದು, ಎಚ್ಚರವಿರಬೇಕು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ರೋಗಗಳು ಬರದಂತೆ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು ಎಂದರು.

ತಾಲೂಕು ಚಿಕಿತ್ಸಾ ಮೇಲ್ವಿಚಾರಕ ಹಣಮಂತ ಅನವಾರ, ರಾಘವೇಂದ್ರ ನಾಯಕ್ ಮಾತನಾಡಿ, ಕ್ಷಯ ರೋಗ ಇರುವ ಮನೆಯಲ್ಲಿ ಬೀಡಿ, ಸಿಗರೇಟ್, ಸೇದುವವರಿಗೆ ಹಾಗೂ 6 ತಿಂಗಳ ಮುಂಚೆ ಟಿ.ಬಿ ರೋಗವಿದ್ದ ಮನೆಯಲ್ಲಿ ಈ ರೋಗ ಬರುವ ಸಂಭವ ಹೆಚ್ಚಾಗಿದೆ. ಆದರಿಂದ ತಾವುಗಳು ಕಫ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಹಣಮಂತ ಯಾದವ, ದಂತ ವೈದ್ಯರಾದ ಡಾ. ಹರ್ಷವರ್ಧನ ರಫಗಾರ, ಆರ್.ಬಿ.ಎಸ್.ಕೆ ವೈದ್ಯರಾದ ಡಾ.ಮಲ್ಕಮ, ಡಾ.ಶಿಲ್ಪಾ, ಜಯಾ ಪವಾರ, ಪ್ರಯೋಗಶಾಲಾ ಮೇಲ್ವಿಚಾರಕ ಚಿದಾನಂದ ದೊಡ್ಮನಿ, ಟಿ.ಬಿ.ಎಚ್.ವಿ ಶೋಭಾ, ಶುಶ್ರೂಷಕ ವಿಶಾಲ್, ನೇತ್ರಾಧಿಕಾರಿಗಳಾದ ಗಂಗಮ್ಮ, ಮೀನಾಕ್ಷಿ, ಶುಶ್ರೂಷಕಿ ನಾಗಮ್ಮ, ಸುರೇಶ ಖಾದಿ, ಆಶಾಮೆಂಟರ್ ಜಯಶ್ರೀ, ಅನಂತಕೃಷ್ಣ, ಬಿ.ಪಿ.ಎಂ. ಶರಣು, ಬಲಭೀಮ, ಉಮಾಶಂಕರ್ ಇತರರಿದ್ದರು. ಪ್ರದೀಪ್ ಕೌನ್ಸಲರ್ ನಿರೂಪಿಸಿ, ವಂದಿಸಿದರು.