ಪುರೋಹಿತರು ದೇವರ ಸೇವೆ ಮಾಡುವವರು, ದೇಶದ ಸುಭಿಕ್ಷೆ ಬಯಸುವವರು. ನಿಮಗೆಲ್ಲರಿಗೂ ದೇವರ ಆಶೀರ್ವಾದ ಸದಾ ಇರಲಿ. ಇಂತಹ ಕಾರ್ಯಕ್ರಮಕ್ಕೆ ಭಾಗಿಯಾಗಿರುವುದು ನನಗೆ ಸಂತೋಷವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಪುರೋಹಿತರು ದೇವರ ಸೇವೆ ಮಾಡುವವರು, ದೇಶದ ಸುಭಿಕ್ಷೆ ಬಯಸುವವರು. ನಿಮಗೆಲ್ಲರಿಗೂ ದೇವರ ಆಶೀರ್ವಾದ ಸದಾ ಇರಲಿ ಎಂದು ಹಿರಿಯ ನಟಿ ಡಾ.ಭಾರತಿ ವಿಷ್ಣುವರ್ಧನ್ ತಿಳಿಸಿದರು.

ನಗರದ ಹೊರವಲಯದ ಉದ್ಬೂರು ಗೇಟ್ ಬಳಿ ಇರುವ ವಿಷ್ಣು ಸ್ಮಾರಕ ಭವನದಲ್ಲಿ ಮಂಗಳವಾರ ನಡೆದ ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕ ಫೆಡರೇಷನ್ ಮೊದಲನೇ ವಾರ್ಷಿಕೋತ್ಸವವನ್ನು ಅವರು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಕ್ಕೆ ಭಾಗಿಯಾಗಿರುವುದು ನನಗೆ ಸಂತೋಷವಾಗಿದೆ ಎಂದರು.

ನಗರ ಪಾಲಿಕೆ ಮಾಜಿ ಸದಸ್ಯ ಮ.ವಿ. ರಾಮಪ್ರಸಾದ್ ಮಾತನಾಡಿ, ಅಸಂಘಟಿತ ಪುರೋಹಿತ ಕಾರ್ಮಿಕರಿಗೆ ಸರ್ಕಾರದಿಂದ ನೀಡುವ ಸವಲತ್ತುಗಳನ್ನು ಪ್ರತಿಯೊಬ್ಬರಿಗೂ ತಲುಪುವಂತಾಗಲಿ. ಸಂಘಟನೆ ಇನ್ನೂ ಹೆಚ್ಚು ಬಲಿಷ್ಠವಾಗಿ ಬೆಳೆಯಲಿ ಎಂದರು.

ಇದೇ ವೇಳೆ ಆಚಾರ್ಯತ್ರಯರ ಹಾಗೂ ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನಂತರ ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕ ಫೆಡರೇಷನ್ 2026ರ ಕ್ಯಾಲೆಂಡರನ್ನು ಬಿಡುಗಡೆಗೊಳಿಸಲಾಯಿತು.

ಫೆಡರೇಷನ್ ಸಂಸ್ಥಾಪಕರು ರಾಷ್ಟ್ರೀಯ ಅಧ್ಯಕ್ಷ ಎಂ.ಬಿ. ಅನಂತಮೂರ್ತಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎನ್. ಮಹೇಶ್ ಕುಮಾರ್, ರಾಜ್ಯಾಧ್ಯಕ್ಷ ಶ್ರೀನಿವಾಸ್ ಮೂರ್ತಿ, ರಾಜ್ಯ ಉಪಾಧ್ಯಕ್ಷ ಸತೀಶ್ ಸಿಂಹ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಕಾರ್ಯದರ್ಶಿ ಡಾ. ಲಕ್ಷ್ಮೀದೇವಿ, ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಫೆಡರೇಷನ್ ಗೌರವಾಧ್ಯಕ್ಷ ಲಕ್ಷ್ಮೀಶ, ಅಧ್ಯಕ್ಷ ಸಂತೋಷ್ ಕುಮಾರ್ ಎಸ್. ದೇಶಿಕ್, ಉಪಾಧ್ಯಕ್ಷ ಎಂ.ವಿ. ಗಣೇಶ್, ಪ್ರಧಾನ ಕಾರ್ಯದರ್ಶಿ ರವಿಶಂಕರ್, ಕಾರ್ಯದರ್ಶಿ ಗುರುರಾಜ್, ಜಂಟಿ ಕಾರ್ಯದರ್ಶಿ ರವೀಂದ್ರ, ವಿಜಯ ವಿಠಲಚಾರ್ಯ, ಕೆ.ಎಲ್.ವಿ. ಶರ್ಮ, ಎಂ.ಎನ್. ಪ್ರಸನ್ನಕುಮಾರ್, ರಾಜಣ್ಣ, ದತ್ತಕುಮಾರ್, ಧನುಷ್, ವೇಣುಗೋಪಾಲ್, ಕೆ.ಎಸ್. ಸಂತೋಷ್ ಮೊದಲಾದವರು ಇದ್ದರು.ಫೆ. 23, 24ರಂದು ಶ್ರೀ ಜೇಡಿಕಟ್ಟೆ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

ಜಯಪುರ:

ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಜೇಡಿಕಟ್ಟೆ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಫೆ. 23, 24ರಂದು ನಿಗದಿಯಾಗಿದೆ ಎಂದು ಜೇಡಿಕಟ್ಟೆ ಮಹದೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಮಾವಿನಹಳ್ಳಿ ಚೌಡೇಗೌಡ ಹೇಳಿದ್ದಾರೆ.

ಜೇಡಿಕಟ್ಟೆ ಮಹದೇಶ್ವರ ದೇವಾಲಯ ಆವರಣದಲ್ಲಿ ಸಭೆ ಸೇರಿದ ಜಾತ್ರೋತ್ಸವ ಸಮಿತಿ ಸದಸ್ಯರು ಜಾತ್ರಾ ಮಹೋತ್ಸವ ದಿನಾಂಕವನ್ನು ನಿಗದಿ ಮಾಡಿದ್ದಾರೆ.

ಜಯಪುರ, ಬರಡನಪುರ, ಮಾವಿನಹಳ್ಳಿ ಮೂರು ಗ್ರಾಮಗಳು ಒಟ್ಟಾಗಿ ಸೇರಿ ಜಾತ್ರೆಯನ್ನು ಆಚರಣೆ ಮಾಡಲಿದ್ದು, ಜ. 19ರಂದು ಕೊಂಡೋತ್ಸವಕ್ಕೆ 5 ಎತ್ತಿನ ಗಾಡಿಗಳಲ್ಲಿ ಖಗ್ಗಲಿ ಸೌದೆಗಳನ್ನು ದೇವಾಲಯದ ಆವರಣದಲ್ಲಿ ತಂದು ಜೋಡಿಸಲಾಗುತ್ತದೆ. ಫೆ.23ರಂದು ಹುಲಿವಾಹನೋತ್ಸವ ಮೆರವಣಿಗೆ, ಸೋಮವಾರ ರಾತ್ರಿ ಹಾಲರವಿ ಉತ್ಸವ, ಫೆ. 24ರಂದು ಮುಂಜಾನೆ ಸೂರ್ಯೋದಯಕ್ಕೂ ಮುನ್ನ ಕೊಂಡೋತ್ಸವ ಜರುಗಲಿದೆ ಎಂದು ತಿಳಿಸಿದ್ದಾರೆ.