ಸಾರಾಂಶ
ತಾಲೂಕಿನ ಗೊರಗೊಂಡನಹಳ್ಳಿ ಪ್ರಾಥಮಿಕ ಕೃಷಿ ಸಹಕಾರ ಸಂಘಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ನಿರ್ದೇಶಕರುಗಳ ಸ್ಥಾನಕ್ಕೆ ಚುನಾವಣೆ ನಡೆಯಿತು.
ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕಿನ ಗೊರಗೊಂಡನಹಳ್ಳಿ ಪ್ರಾಥಮಿಕ ಕೃಷಿ ಸಹಕಾರ ಸಂಘಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ನಿರ್ದೇಶಕರುಗಳ ಸ್ಥಾನಕ್ಕೆ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಎಚ್.ಬಿ. ನಾಗರಾಜು ಬಣ ಜಯಗಳಿಸಿ 12 ಜನ ಸದಸ್ಯರು ಬಹುಮತದಿಂದ ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದಾರೆ. ಈ ವೇಳೆ ಮಾತನಾಡಿದ ಎಚ್.ಬಿ. ನಾಗರಾಜು, ಪಕ್ಷ ಭೇದ ಮಾಡದೆ ಸಂಘದ ಸದಸ್ಯರುಗಳು ನಮ್ಮ ಮೇಲೆ ನಂಬಿಕೆಯಿಟ್ಟು ನಮ್ಮ ಗುಂಪಿನ 12 ಜನ ಸದಸ್ಯರನ್ನು ಬಹುಮತದಿಂದ ಆಯ್ಕೆ ಮಾಡಿದ್ದು ನಾನು ಅವರಿಗೆ ಅಭಾರಿಯಾಗಿರುತ್ತೇನೆ. ವಿರೋಧಿ ಬಣದವರು ಸುಳ್ಳು ಆರೋಪ, ಅಪಪ್ರಚಾರ ಮಾಡಿದರೂ ನಾವು ಮಾಡಿದ ಕೆಲಸ ಕಾರ್ಯಗಳನ್ನು ಸ್ಮರಿಸಿ ಆಯ್ಕೆ ಮಾಡಿದ್ದು ಮುಂದೆಯೂ ಸಹ ಉತ್ತಮ ಕೆಲಸ ಮಾಡುವುದರ ಮೂಲಕ ಸಂಘದ ಅಭಿವೃದ್ದಿಗೆ ಶ್ರಮಿಸುವುದಾಗಿ ತಿಳಿಸಿದರು. ಚುನಾವಣೆಯಲ್ಲಿ ನಿರ್ದೇಶಕರುಗಳಾಗಿ ಎಚ್.ಬಿ.ನಾಗರಾಜು, ಜಿ.ಮಹಾಲಿಂಗಪ್ಪ, ಕೆ.ಎಸ್.ದೇವರಾಜು, ಎಚ್.ಸಿ.ರಾಜಶೇಖರಯ್ಯ, ಜಿ.ಎಲ್. ಸುದರ್ಶನ್ ಗೊರಗೊಂಡನಹಳ್ಳಿ, ಎ.ಎಚ್. ವಿನಯ್, ಕಲಾವತಿ, ಲತಮ್ಮ, ಆನಂದ್‌ಕುಮಾರ್, ಹರೀಶ್‌ಕುಮಾರ್, ಎನ್.ಸುರೇಶ್, ಶಿವಯ್ಯ ಇವರುಗಳು ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ವಸಂತ್‌ಕುಮಾರ್ ಕಾರ್ಯನಿರ್ವಹಿಸಿದರು.