ಪ್ರಾಥಮಿಕ ಶಿಕ್ಷಣ ಮಗುವಿನ ಕಲಿಕೆಗೆ ಭದ್ರ ಬುನಾದಿ

| Published : Feb 19 2024, 01:34 AM IST

ಸಾರಾಂಶ

ಎಲ್ಲ ಮಕ್ಕಳು ಒಂದೇ ರೀತಿ ಇರುವುದಿಲ್ಲ. ಶಿಕ್ಷಕರು ಮೊದಲು ಮಕ್ಕಳ ಮನಸ್ಸನ್ನು ಅರಿಯುವ ಕಾರ್ಯ ಮಾಡಬೇಕು.

ಹನುಮಸಾಗರ: ಪ್ರಾಥಮಿಕ ಶಿಕ್ಷಣ ಮಗುವಿನ ಮುಂದಿನ ಕಲಿಕೆಗೆ ಭದ್ರ ಬುನಾದಿ ಎಂದು ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಹೇಳಿದರು.

ಸಮೀಪದ ಹನುಮನಾಳ ಗ್ರಾಮದ ಸ.ಮಾ.ಹಿ.ಪ್ರಾ. ಶಾಲೆಯಲ್ಲಿ 1ರಿಂದ 5ನೇ ತರಗತಿ ಬೋಧಿಸುವ ಶಿಕ್ಷಕರಿಗಾಗಿ ಶುಕ್ರವಾರ ಹಮ್ಮಿಕೊಂಡಿರುವ ಎಫ್.ಎಲ್.ಎನ್. ಕಲಿಕಾ ಮೇಳದಲ್ಲಿ ಪ್ರಾತಕ್ಷಿಕೆಗಳನ್ನು ವೀಕ್ಷಿಸಿ ಮಾತನಾಡಿದರು.ಎಲ್ಲ ಮಕ್ಕಳು ಒಂದೇ ರೀತಿ ಇರುವುದಿಲ್ಲ. ಶಿಕ್ಷಕರು ಮೊದಲು ಮಕ್ಕಳ ಮನಸ್ಸನ್ನು ಅರಿಯುವ ಕಾರ್ಯ ಮಾಡಬೇಕು. ಅವರಿಗೆ ಸರಿಯಾಗಿ ಅರಿತು ಅದಕ್ಕೆ ತಕ್ಕಂತೆ, ಕ್ರಿಯಾತ್ಮಕ ಬೋಧನೆ, ಪ್ರಾತ್ಯಕ್ಷಿಕೆಗಳು ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದ ಕುರಿತಾಗಿದ್ದರೆ, ಇದರಿಂದ ಮಕ್ಕಳ ಕಲಿಕೆಗೆ ಸಹಾಯಕವಾಗಲಿವೆ. ಕಲಿಕಾ ಮೇಳವನ್ನು ಅದ್ಭುತವಾಗಿ ನಿರ್ವಹಿಸಿದ ಶಿಕ್ಷಕರು ಹಾಗೂ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದರು.ಕ್ಷೇತ್ರ ಶಿಕ್ಷಕರ ಸಮನ್ವಯಾಧಿಕಾರಿ ಜಗದೀಶಪ್ಪ ಎಂ., ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷ ಮಲ್ಲಪ್ಪ ಕುದರಿ, ಪ್ರಧಾನ ಕಾರ್ಯದರ್ಶಿ ಹೈದರಾಲಿ ಜಾಲಿಹಾಳ, ರಾಜ್ಯ ಸರ್ಕಾರಿ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಅಹ್ಮದ್ ಹುಸೇನ್ ಆದೋನಿ, ನಿರ್ದೇಶಕ ಯಮನಪ್ಪ ಲಮಾಣಿ, ಶಿಕ್ಷಣ ಸಂಯೋಜಕ ಶಿವಾನಂದ ಪಂಪಣ್ಣವರ, ಸಂಪನ್ಮೂಲ ವ್ಯಕ್ತಿ ಶ್ರೀಕಾಂತ ಬೆಟಗೇರಿ, ಶರಣಗೌಡ ಗೌಡರ, ವಿಠ್ಠಲ್ ಪತ್ತಾರ ರಾಜೂರು, ಹನುಮಂತ ಗೋಡೆಕಾರ, ಮುಖ್ಯ ಶಿಕ್ಷಕ ಹನುಮಂತ ಮಾಲಗಿತ್ತಿ, ನುಅಜೀಮ್ ಪ್ರೇಮ್ ಜಿ ಫೌಂಡೇಶನ್ ತಾಲ್ಲೂಕಿನ ಸಂಯೋಜಕರಾದ ಹಾಲೇಶ್, ಜಯಶ್ರೀ ಪಾಟೀಲ್, ಸುಮಂಗಲ ಭಟ್ ಇತರರು ಇದ್ದರು.