ಭಾರತದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು ಸತತ 12 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ನಗರದ ಸಣ್ಣಕ್ಕಿ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ವಿಶೇಷ ಪೂಜೆ ಸಲ್ಲಿಸಿದರು.
ಹೊಸಪೇಟೆ: ಭಾರತದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು ಸತತ 12 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ನಗರದ ಸಣ್ಣಕ್ಕಿ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ವಿಶೇಷ ಪೂಜೆ ಸಲ್ಲಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಎಸ್. ರಾಘವೇಂದ್ರ ಮಾತನಾಡಿ, ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅನೇಕ ಸವಾಲುಗಳನ್ನು ಎದುರಿಸಿ ಭಾರತೀಯ ಸಂವಿಧಾನದ ಆರ್ಟಿಕಲ್ 370 ಜಾರಿಗೆ ತಂದರು. ಡಿಜಿಟಲ್ ಕ್ರಾಂತಿ, ಆರೋಗ್ಯ ವಿಮೆ, ಮೂಲ ಸೌಕರ್ಯ ಅಭಿವೃದ್ಧಿ, ಮೇಕ್ ಇನ್ ಇಂಡಿಯಾ ಉಪಕ್ರಮದ ಮೂಲಕ ದೇಶದಲ್ಲಿ ಕೈಗಾರಿಕೆ ಹಾಗೂ ಸಾರಿಗೆ ಜಾಲ ಬಲಪಡಿಸಿದರು ಎಂದರು.ಗೃಹಿಣಿಯರಿಗಾಗಿ ಉಜ್ವಲ ಹಾಗೂ ಮುದ್ರಾ ಯೋಜನೆಗಳನ್ನು ಜಾರಿಗೆ ತಂದರು. ಸ್ವಚ್ಛ ಭಾರತ, ಜಲಜೀವನ್ ಮಿಷನ್ ಈ ಎಲ್ಲ ಯೋಜನೆಗಳಿಂದ ಭಾರತವು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಜಾಗತಿಕ ಮಟ್ಟದಲ್ಲಿ ಬಲಿಷ್ಠ ರಾಷ್ಟ್ರವಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿ ವಿಶ್ವಗುರು ಎನಿಸಿದೆ ಎಂದು ಅವರು ಹೇಳಿದರು.
ಬಿಜೆಪಿ ಮುಖಂಡರಾದ ಅಶೋಕ್ ಜೀರೆ, ಸಾಲಿ ಸಿದ್ದಯ್ಯ ಸ್ವಾಮಿ, ಆರ್. ಕೊಟ್ರೇಶ್, ಗೊಗ್ಗ ಚೆನ್ನಬಸವರಾಜು, ಡಿ. ಎಂ. ಶಶಿಧರ ಸ್ವಾಮಿ, ಕಿಚಡಿ ಕೊಟ್ರೇಶ್, ಶಂಕರ್ ಮೇಟಿ, ಕಸೆಟ್ಟಿ ಉಮಾಪತಿ, ರೇವಣ್ಣ ಸಿದ್ದಪ್ಪ, ಮಧುರ ಚೆನ್ನಶಾಸ್ತ್ರಿ, ನಟರಾಜ, ಗೌಳಿ ರುದ್ರಪ್ಪ ಹಾಗೂ ಗೌಳಿ ಬಸವರಾಜ್, ಬಸವರಾಜ್, ಇಮ್ತಿಯಾಜ್, ರಾಘು, ತಿರುಮಲೇಶ್, ಉಮಾದೇವಿ, ಕವಿತಾ ಆನಂದ್, ಅರ್ಪಿತ ಗೌಡ, ಅನುಪಮಾ, ಪೂರ್ಣಿಮಾ, ಜಯಶ್ರೀ, ಶೋಭಾ, ರೇಣುಕಾ, ಉಮಾ, ಲಲಿತಾ ಉಪಸ್ಥಿತರಿದ್ದರು.ಹೂವಿನಹಡಗಲಿಯಲ್ಲಿ ವಿಶೇಷ ಪೂಜೆ:
ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ 4399 ದಿನಗಳ ಪೂರೈಸಿದ ಹಿನ್ನೆಲೆಯಲ್ಲಿ ಹೂವಿನಹಡಗಲಿ ಪಟ್ಟಣದ ಗೋಣಿ ಬಸವೇಶ್ವರ ದೇವಸ್ಥಾನದಲ್ಲಿ ಶಾಸಕ ಕೃಷ್ಣನಾಯ್ಕ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೃಷ್ಣನಾಯ್ಕ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ 4399 ದಿನಗಳ ಸುದೀರ್ಘ ಕಾಲ ಆಡಳಿತ ನಡೆಸಿದ್ದಾರೆ. ವಿಶ್ವ ಮಟ್ಟದಲ್ಲಿ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಿದ್ದಾರೆ. ಆಡಳಿತದಲ್ಲಿ ಐತಿಹಾಸಿಕ ಮೈಲುಗಲ್ಲು ಸ್ಥಾಪಿಸಿದ್ದಾರೆ. ಇನ್ನು ಹೆಚ್ಚಿನ ದಿನಗಳ ಕಾಲ ದೇಶವನ್ನು ಮುನ್ನಡೆಸುವ ಶಕ್ತಿಯನ್ನು ದೇವರು ನೀಡಲಿ ಎಂದು ಆಶಿಸಿದರು.ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ದೇವಸ್ಥಾನಕ್ಕೆ ತೆರಳಿ, ಗೋಣಿ ಬಸವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ಸಂಜೀವರೆಡ್ಡಿ, ಉಪಾಧ್ಯಕ್ಷ ಹಣ್ಣಿ ಶಶಿಧರ, ಮಂಡಲದ ಅಧ್ಯಕ್ಷ ಪಿ. ಮಲ್ಲಿಕಾರ್ಜುನ, ಜಿಲ್ಲಾ ಉಪಾಧ್ಯಕ್ಷ ಈಟಿ ಲಿಂಗರಾಜ, ಮುಖಂಡರಾದ ಬೀರಬ್ಬಿ ಬಸವರಾಜ, ಅಲ್ಪ ಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಮಂಜುನಾಥ ಜೈನ್, ಪುರಸಭೆ ಮಾಜಿ ಸದಸ್ಯ ಸೊಪ್ಪಿನ ಮಂಜುನಾಥ, ಪುತ್ರೇಶ, ಕೊಟ್ರೇಶ, ತಳವಾರ ಮಹಾಂತೇಶ, ನವಲಿ ಶಂಕರ, ಉಮೇಶ ಗೌಡ ಭಾಗವಹಿಸಿದ್ದರು.