ಪ್ರಧಾನಿ ಸಹೋದರ ಸೋಮು ಭಾಯ್ ಮೋದಿ ಕೃಷ್ಣ ಮಠಕ್ಕೆ ಭೇಟಿ

| Published : Nov 07 2024, 11:55 PM IST

ಸಾರಾಂಶ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹಿರಿಯ ಅಣ್ಣ ಸೋಮು ಭಾಯ್ ಮೋದಿ ಅವರು ತಮ್ಮ ಪತ್ನಿ ಚಂದ್ರಿಕಾ ಬಾಯ್ ಮೋದಿ ಅವರೊಂದಿಗೆ ಗುರುವಾರ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ಉಡುಪಿ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹಿರಿಯ ಅಣ್ಣ ಸೋಮು ಭಾಯ್ ಮೋದಿ ಅವರು ತಮ್ಮ ಪತ್ನಿ ಚಂದ್ರಿಕಾ ಬಾಯ್ ಮೋದಿ ಅವರೊಂದಿಗೆ ಗುರುವಾರ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು.ಸೋಮು ಭಾಯ್ ಅವರ ಆಪ್ತರಾದ ಉಡುಪಿ ನೇತ್ರತಜ್ಞ ಡಾ. ಕೃಷ್ಣಪ್ರಸಾದ್ ಜೊತೆಗೆ ಆಗಮಿಸಿದ ಅವರು ಬಳಿಕ ಭೋಜನಶಾಲೆಯ ಮುಖ್ಯಪ್ರಾಣನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಸಾಲು ದೀಪಗಳನ್ನು ಬೆಳಗಿಸಿದರು. ಗೀತಾಮಂದಿರದ ಮುಂದೆ ಕಾರ್ತಿಕ ಮಾಸದ ವಿಶೇಷ ಸಂಕೀರ್ತನೆ ನಡೆಯುತ್ತಿದ್ದನ್ನು ಗಮನಿಸಿ ಸಂತಸ ಪಟ್ಟರು.ನಂತರ ಪರ್ಯಾಯ ಪೀಠಾಧೀಶ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರನ್ನು ಗೀತಾಮಂದಿರದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಪರ್ಯಾಯ ಶ್ರೀಪಾದರ ಕೋಟಿ ಗೀತಾ ಲೇಖನ ಯಜ್ಞದ ಬಗ್ಗೆ ವಿಶೇಷ ಆಸಕ್ತಿಯಿಂದ ತಿಳಿದುಕೊಂಡರು. ಅವರೊಂದಿಗೆ ಸ್ನೇಹಿತರಾದ ಗೋವಿಂದ ಬಾಯ್ ಅವರು ಆಗಮಿಸಿದ್ದರು.