ಸಾರಾಂಶ
ಪ್ರಧಾನ ಮಂತ್ರಿಗಳ ಕಿರುಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು ಕೇಂದ್ರ ಸರ್ಕಾರದ ಒಂದು ಪ್ರಮುಖ ಯೋಜನೆಯಾಗಿದ್ದು, ಇದರಲ್ಲಿ ಅಸಂಘಟಿತ ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಬದ್ದಗೊಳಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಪ್ರಧಾನ ಮಂತ್ರಿಗಳ ಕಿರುಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು ಕೇಂದ್ರ ಸರ್ಕಾರದ ಒಂದು ಪ್ರಮುಖ ಯೋಜನೆಯಾಗಿದ್ದು, ಇದರಲ್ಲಿ ಅಸಂಘಟಿತ ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಬದ್ದಗೊಳಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೊಸ ಮತ್ತು ಚಾಲ್ತಿಯಲ್ಲಿರುವ ಆಹಾರ ಸಂಸ್ಕರಣ ಘಟಕ ಸ್ಥಾಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ 50 ಸಹಾಯಧನ ನೀಡುತ್ತವೆ.ಉಡುಪಿ ಜಿಲ್ಲೆಯಲ್ಲಿ ಈ ಯೋಜನೆಗೆ ಸಾಕಷ್ಟು ಅವಕಾಶಗಳಿದ್ದು, ಉದ್ದಿಮೆದಾರರು ಈ ಯೋಜನೆಯ ನೆರವನ್ನು ಪಡೆದು ಸ್ವ ಉದ್ಯಮ ಸ್ಥಾಪಿಸಬಹುದಾಗಿದೆ. ಈ ಯೋಜನೆಯಡಿ ಫಲಾನುಭವಿಗಳಾಗಲು ಅಥವಾ ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಲು, ಕಾಫಿ ಪುಡಿ ಸಂಸ್ಕರಣಾ ಯಂತ್ರ, ಚಾಕೊಲೇಟ್ ತಯಾರಿಸುವ ಯಂತ್ರ, ಜಾಮ್ ಜಿಲಿಸ್ಟ್ ತಯಾರಿಕ ಯಂತ್ರ, ಬೇಕರಿ ಘಟಕ, ಸ್ಪೆಷಲ್ ಬಿಸ್ಕೂಟ್ಸ್ ಮತ್ತು ಕುಕೀಸ್ ತಯಾರಿಸುವುದು, ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ, ರಾಗಿ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ, ಎಣ್ಣೆ ತೆಗೆಯುವ ಯಂತ್ರ (ತೆಂಗಿನಎಣ್ಣೆ, ಸೂರ್ಯಕಾಂತಿ, ಎಳ್ಳು, ಹರಳು, ಕಡಲೆ, ಕುಸುಬೆ, ಇತ್ಯಾದಿ), ಉಪ್ಪಿನ ಕಾಯಿ ಮಾಡುವಯಂತ್ರ ಘಟಕ, ಮಸಾಲ ಪುಡಿ ಮಡುವಯಂತ್ರ, ಹಸಿಮೆಣಸು ಪೇಸ್ಟ್ ಮಾಡುವಯಂತ್ರ, ತರಕಾರಿಗಳನ್ನು ಕತ್ತರಿಸಿ ಪ್ಯಾಕಿಂಗ್ ಮಾಡುವುದು, ಡಿಹೈಡ್ರೆಟೆಡ್ ತರಕಾರಿಗಳು, ಸಾಸ್ ಮತ್ತು ಕೆಚಪ್ ತಯಾರಿಕೆ, ನಿಂಬೆ. ಕಿತ್ತಳೆಯಂತಹ ಹುಳಿ ಹಣ್ಣುಗಳ ಸಂಸ್ಕರಣೆ, ಸೊಪ್ಪಿನ ಪುಡಿಗಳು (ಕರಿಬೇವು, ನುಗ್ಗೆಸೊಪ್ಪು, ಮೆಂತ್ಯಸೊಪ್ಪು, ಪುದಿನಸೊಪ್ಪುಇತರ...) ಸಂಬಾರ ಪದಾರ್ಥಗಳ ಸಂಸ್ಕರಣೆ (ಮೆಣಸು, ಏಲಕ್ಕಿ, ಶುಂಠಿ ಇತ್ಯಾದಿ) ಘಟಕಗಳು ಅರ್ಹವಾಗಿವೆ.ಬೇಕರಿ ಉತ್ಪನ್ನಗಳು, ಚಿಪ್ಸ್ ಮಾಡುವ ಮಿಷನ್ (ಬಾಳೆ, ಹಲಸು, ಗೆಣಸುಇತ್ಯಾದಿ) ಹಪ್ಪಳ / ಪಾಪಡ್ ಮಾಡುವ ಮೆಷಿನ್, ರೊಟ್ಟಿ ಮಾಡುವ ಮೆಷಿನ್, ನೂಡಲ್ಸ್ ಶಾವಿಗೆ ಮೆಷಿನ್, ಜ್ಯೂಸ್ ಪ್ರೊಸೆಸಿಂಗ್ ಮೆಷಿನ್, ರವಾ ಮಾಡುವ ಮೆಷಿನ್, ದಾಲ್ ಮಾಡುವಮಷಿನ್, ಆಣಬೆ ಬೇಸಾಯ ಮತ್ತು ಮೌಲ್ಯವರ್ದಿತ ಉತ್ಪನ್ನಗಳ ತಯಾರಿಕೆ, ಜೇನು ಸಂಸ್ಕರಣೆಘಟಕ ಪ್ರಾದೇಶಿಕ ವಿಶೇಷತೆ ಹೊಂದಿರುವ ಹಣ್ಣುಗಳ ಸ್ಕ್ಯಾಸ್ ಮತ್ತು ಜ್ಯೂಸ್ ತಯಾರಿಸುವುದು.
ಅರಣ್ಯ ಉತ್ಪನ್ನಗಳು. ಆರಿಶಿನ, ನೆಲ್ಲಿಕಾಯಿ, ಹುಣಸೆ, ಕಾಚಿಪುಳಿ/ಪುನರ್ ಪುಳಿ ಮುಂತಾದ ಸಾಂಪ್ರದಾಯಿಕ ಭಾರತೀಯ ಗಿಡಮೂಲಿಕೆ ಖಾದ್ಯ ವಸ್ತುಗಳ ತಯಾರಿಕೆ ಮತ್ತು ಸಂಸ್ಕರಣೆ. ವಿವಿಧರೀತಿಯ ಹಲ್ವ (ಸೀಬೆಹಣ್ಣು ಮತ್ತು ಬಾಳೆ ಹಣ್ಣು,) ಹಾಲಿನ ಉತ್ಪನ್ನಗಳಾದ ಮಜ್ಜಿಗೆ, ಬೆಣ್ಣೆತುಪ್ಪ, ಪನೀರ್, ಐಸ್ಕ್ರೀಮ್, ಕುಲ್ಪಿ, ತಯಾರಿಕಾಘಟಕ, ಮಾಂಸ (ಕುರಿ, ಹಂದಿ, ಕೋಳಿ) ಮತ್ತು ಒಣಮೀನು ತಯಾರಿಕೆ, ಮೀನು ಸಂಸ್ಕರಣೆ ಮಾಡುವ ಮೆಷಿನ್, ಮಾಂಸ (ಕುರಿ, ಹಂದಿ, ಕೋಳಿ) ಮತ್ತು ಮೀನು ಕಟಿಂಗ್ ಮತ್ತುಕ್ಲೀನಿಂಗ್ ಮಾಡುವುದು. ಮಾಂಸ (ಕುರಿ, ಹಂದಿ, ಕೋಳಿ) ಮತ್ತು ಮೀನು ಮೌಲ್ಯವರ್ಧಿತ ಪದಾರ್ಥಗಳ ತಯಾರಿಕೆ ಘಟಕಗಳು ಅರ್ಹವಾಗಿವೆ.ಕೋಲ್ಡ್ ಸ್ಟೋರೇಜ್, ಆಹಾರ ಸಂಸ್ಕರಣೆಗೆ ಸೋಲಾರ್ಡ್ರೈಯರ್ ಯೂನಿಟ್ಗಳ ಅಳವಡಿಕೆ. ಸಾಗರೋತ್ಪನ್ನ ಉತ್ಪನ್ನಗಳು, ಮಸಾಲ ಪದಾರ್ಥಗಳು, ಪಶು ಆಹಾರತಯಾರಿಕೆ, ಮೈನರ್ ಮಿಲೆಟ್ ಪೌಡರ್ಘಟಕತಯಾರಿಕೆ, ಇನ್ನೂ ಹಲವಾರು ಉದ್ಯಮದವರು ಈ ಯೋಜನೆಯ ಫಲಾನುಭವಿಗಳು, ಇದರ ಸದುಪಯೋಗ ಪಡೆದುಕೊಳ್ಳಲು ಅವಕಾಶಗಳಿವೆ.
ಹೆಚ್ಚಿನಮಾಹಿತಿಗಾಗಿ ಸಮೀಪದ ಕೃಷಿ ಇಲಾಖೆಯನ್ನುಅಥವಾ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಡಾ. ರಾಜೇಶ್ ಡಿ.ಪಿ. ಅವರನ್ನು (೮೪೫೩೭೮೨೪೧೪) ಸಂಪರ್ಕಿಸಲು ಕೋರಲಾಗಿದೆ.